ಬಾಲ್ಯದ ಜೊತೆಯಲಿ , ಆಸೆಯ ಹೆಣೆಯುತ ,
ಕರುಬುವೆ ಜೀವನ ನೌಕೆಯಲಿ ,
ಕೈಗಳ ಹಿಡಿದು ಮುದ್ದಿಸಿ ಅಪ್ಪುವೆ;
ಅರಿಯದ ಮಲ್ಲಿಗೆ ಮೊಗ್ಗನು ಜಗ್ಗಿ ,
ಹೃದಯದ ಮುಗ್ದತೆ ಮಂದಿರದಲಿ ,
ಸೆಳೆಯುವೆ ಪ್ರೀತಿಯ ಸ್ಪಂದಿಸೋ ಸ್ಪರ್ಶವ
ಕಾಲವು ಸರಿಯಿತು , ಬಯಕೆಯು ಮೊಳಗಿತು
ಯೌವನ ಬಂದಿತು ಗಡಿಬಿಡಿಯಲ್ಲಿ
ರಾಗವು ಬೇರೆಯಿತು ,ಬಣ್ಣದ ಚಿಟ್ಟೆಯ ತಾಳಕೆ
ಬೆಳಕಿನ ಕನ್ನಡಿ ಒಡೆಯಿತು ,
ಉರಿಯುವ ಜ್ಯೋತಿಯ ಸರಿಸುತ
ಬಾಳಿನ ದ್ವೀಪದ ಗರಿಯನು ಮರೆಯುತ ,
ಕರ್ತವ್ಯವನೆ ನಂಬಿಸಿ ಬದುಕುವೆ
ಗಂಧದ ಸೃಷ್ಟಿಯ ಜಾನ್ಮೆಯಲಿ ,
ಕಾಯುವ -ಕಾಯುವ ಎನ್ನುವ ನೀನು ,
ಪ್ರೀತಿಯ ಆಸೆಯ ಬಳ್ಳಿಗೆ
ಭೂತ -ಭವಿಷ್ಯದಲಿ ನುದಿಸುವೆ
ಸಂಭಂದಗಳ ಹೊಸ ವೀಣೆಯ ...
No comments:
Post a Comment