Wednesday, 30 October 2013ದೂರ ಸಾಗು ನೆನಪೇ


ಖಾಲಿಯಾದ ಮನದ ಪುಟವು ಬರದ ನಿನ್ನ ನೆನಪಲಿ
ಹೀಗೆ ಇರುವೆ ಇಂತೆ ಇರುವೆ ಎನ್ನುವುದೆಲ್ಲ ಕ್ಷಣಿಕವು
ಗೂಡ   ಒಳಗೆ ರಚನೆಯಾದ ವರ್ಣಚಿತ್ರವು
ಬಣ್ಣ  ಮಾಸಿ ಮುನಿದಿದೆ ಹೃದಯ ದೀಪವು
ಎಲ್ಲ ಮೌನ , ಮೌನವೊಂದೆ ಉತ್ತರ
ಬರದ ನಿನ್ನ ನೆನಪು ನನ್ನ ಕಾಡುತಿರುವುದು
 ಮೌನದಲ್ಲೇ ಸರಿದುಬಿಡು ಇರುಳತೋಳಲಿ
ಮತ್ತೆ ಎಂದು ನೆನಪು ಆಗಿ ಕಾಡದಿರು
ದೂರ ದೂರ ಸಾಗಿಬಿಡು ,. ಅಲ್ಲೇ ನಿನ್ನ ನೆಲೆಯು
ಘಾಸಿಯಾದ ಮನದಲ್ಲಿ ನಿನಗಿಲ್ಲ ಜಾಗವು .


................. ಮಾಲಿನಿ ಭಟ್ ,,,,,,,,,,,,,,,

ಮನಸಿನಲೊಂದು ಭಾವ ,ಕನಸಿನಲೊಂದು ರಾಗ
ಒಡಗೂಡಿದ ಮಿಲನ ಪುಳಕ , ಅಲ್ಲೊಂದು ನವ  ಸಂವಸ್ಸರ
ಕೂಡಿ ಬಾಳುವ ಮುನ್ಸೂಚನೆ , ತೆರೆದ ಬಾಗಿಲೊಳಗೆ
ದೀಪ್ತಿಯ ಕಾಂತಿ ಹೊಮ್ಮುವುದು ಮನದೊಳಗೆ ..

........... ಮಾಲಿನಿ ಭಟ್ .................
ಈ ಸಂಜೆ ಯಾಕೋ ಮೋಡ ಕವಿದಿದೆ
ಮೇಲಿಂದ ತಿಳಿ ಮಿಂಚು ಹೊರಡುವುದು
ನನ್ನ ಮನಸಂತೆ ಆಕಾಶ ವು  ಮಬ್ಬಿದೆ
ಹೊಂಬಣ್ಣದ ದಿವ್ಯಪ್ರಭೆ ಮೂಡುವುದು
ಕಾಯುವುದು ನಿಯಮಿತ ...

.............  ಮಾಲಿನಿ ಭಟ್ ............

ಆಸೆಯ ಬೆನ್ನೇರಿಕಾಣದ ಆಸೆಗೆ , ಎಲ್ಲಿಯ ಬೇಲಿ
ಕನಸಲಿ ಬಂದು ತಡವರಿಸಿ
ನಿನ್ನೆಯೂ ಇಂದು ನಾಳೆಯು ಇಲ್ಲ
 ಹುಡುಕುವ ದಾರಿ ಮನಸಲಿ
ಸ್ತಿರತೆ ಇಲ್ಲದ ಗುರಿಯೆಡೆಗೆ
ಆಸೆಯ ಹಿಂದೆ ಸಂಚರಿಸಿ
ಮೌನವು ತಬ್ಬಿದ ನೋವಿನ ಮಡಿಲಿಗೆ
ಬಿಳುವ ಮುಂಚೆ ಎಚ್ಚರಿಕೆ

....... ಮಾಲಿನಿ ಭಟ್ ......

ನಿನ್ನ ಒಲುಮೆ

ನನ್ನದೊಂದು ಜೀವ , ನಿನ್ನದೊಂದು ಜೀವ
ಮನಸುಗಳ ಮರೆಯಲ್ಲಿ ಪ್ರೀತಿ ಪರಿಮಳವು
ಕನಸುಗಳ ಸೆರೆಯಲ್ಲಿ ಜೇನ ಝೆಂಕಾರವು
 ಕಾಲ ಉರುಳಿಹೋದರೂ ಮತ್ತೆ ಸವಿಯ ಹೊಳಪು
ಬಣ್ಣ ಆರದು ,   ನಿನ್ನ ಒಲುಮೆಯಲಿ ...


................. ಮಾಲಿನಿ ಭಟ್  .............. 

ಪ್ರೀತಿ ಹೆಸರಲ್ಲಿ ಕಪಟ
ನೀ ದಾಟಿ ಹೋದೆ ನನ್ನದೆಯ ಅರಮನೆಯ
ಬರಿದು ಆಯಿತು ಪೋಣಿಸಿಟ್ಟ  ನಿರೀಕ್ಷೆಗಳು
ಸ್ಮಶಾನ ಮೌನ ಉಳಿದುಹೋಯಿತು
ಅರಳೋ ಹೂಗಳು ಮುದ ನೀಡಲಿಲ್ಲ
ಪ್ರೀತಿ ಎನ್ನೋ ತತ್ವಕ್ಕೆ ಮುಳ್ಳಾದೇ  ನೀ
ಭರವಸೆಯ ನೆಪ ಮಾಡಿ ಬೇರನ್ನೇ ಕಿತ್ತು ಬಿಟ್ಟೆ
ನಾ ಚೆನ್ನಾಗಿ ಇದ್ದೆ ,.. ಸಂತೋಷದಿ ಮಿಂದಿದ್ದೆ
ನಗುವನ್ನೇ ಕಸಿದು ಬಿಟ್ಟೆ , .. ದುಃಖವ  ನೀಡಿದೆ
ಯಾರಲ್ಲಿ ಹೇಳಲಿ,ಅಮ್ಮನಲ್ಲಿ .. ಅಪ್ಪನಲ್ಲಿ 
ಸ್ನೇಹಿತರಲ್ಲಿ ,... ಹೇಗೆ ಹೇಳಲಿ
ಯಾರ ಮಾತನ್ನು ಕೇಳಲಿಲ್ಲವಲ್ಲ ಅಂದು
ಎದೆ ಒಡೆದಂತ ಬಡಿತ,..
ದುಃಖಕ್ಕೆ  ಕಣ್ಣಿರು  ಸೋತಿದೆ
ನೀ ದಾಟಿ ಹೋದೆ ನನ್ನೆದೆಯ ಅರಮನೆಯ
ನಾಳೆ ಉಳಿಯುದೋ ಈ ಜೀವ ನಾ ಕಾಣೇನು .


ಮಾಲಿನಿ ಭಟ್ ....................

Tuesday, 8 October 2013

ಮುಟ್ಟಿನ ದಿನಗಳು

ಆ ದಿನಗಳು ಅದೇಕೆ ನೆನಪಾಗುವುದೋ
ಪದೇ  ಪದೇ ಹಿಂಸಿಸುವುದೋ

ಈಗಿನ ಮುಂದುವರಿದ ಜನಾಂಗ
ಅರಿತು ಅರಿಯದೆ ಮೂರ್ಖರಾದಾಗ
ಎಷ್ಟೇ ಜ್ಞಾನವಿದ್ದರೂ , ಎಲ್ಲ ಸುಮ್ಮನೆ

ಹಿರಿಯರು ಸಂಪ್ರದಾಯ ಮಾಡಿದ್ದಕ್ಕೆ ಕಾರಣವಿತ್ತು
ನಮ್ಮವರ ಮೂಢನಂಬಿಕೆಗೆ ಅರ್ಥವೇ ಇಲ್ಲ

ನಾ ಹೇಳ ಹೊರಟಿದ್ದು ಬೇರೇನೂ ಅಲ್ಲ
ಹೆಂಗಳೆಯರ ಆ ಮುಟ್ಟಿನ  ದಿನಗಳು

ದೇಹದ ಒಂದು ಸಹಜ ಕ್ರಿಯೆಗೆ
ತಿಂಗಳ ನೋವಿನ ನರಳಾಟದ ಜೊತೆಗೆ
ಸಂಪ್ರದಾಯವ ಮೀರಿದ ಮೌಢ್ಯತೆ


ತಿಂಗಳಲಿ ಹದಿನೈದು ದಿನಗಳು ನಿರ್ಭಿತಿ
ಮತ್ತೆ ಕಾಡುವ ಋತು ಸ್ರಾವದ ದಿನ
ಎಲ್ಲೆಡೆ  ಹೋಗಲಾಗದ ತಾಕಲಾಟ

ಇನ್ನು ಏಕೆ ತಿಳಿದವರು , ತಿಳಿಯದವರ
ಕೈಗೊಂಬೆಯಾಗಿ ಅದನ್ನೇ ದಾಟುವರೋ

ಇನ್ನೆಷ್ಟು ವರುಷಗಳು ಸಾಗಬೇಕೋ
ಕಾಯಬೇಕು , ಕಾದುನೋಡಬೇಕು
ತಿಳಿದವರು ತಿಳಿಸಿ ಹೇಳಬೇಕು

ಮುಟ್ಟಿನ  ದಿನಗಳು ಶಾಪವಾಗದಿರಲಿ
ಇದೊಂದು ವಿನಂತಿ ................ ಮಾಲಿನಿ ಭಟ್ ........

Sunday, 6 October 2013

ಆಸರೆಯ ಕೈ ,.

ಮನಸಾಗದು  ಆ ಕಣಿವೆಯ ಮಾರ್ಗದಿ
ಪರಿತಪಿಸುತ ನಡೆಯುವುದು
ಇಳಿಜಾರಿನ ಕಾಲ್ದಾರಿ , ದುರ್ಗಮ ;
ಎದೆಬಡಿತದ ಸಂಚಲನ
ತಂತಾನೇ ಮೂಡುವುದು 
ಆಸರೆಯ ಕೈ ,.
ವಿಧಿಬರಹದ ನೋಟದಿ
ಪ್ರಾರ್ಥನೆಯ ಅಳಲು ,..
ಜೊತೆನಡೆಯಲು  ಧೈರ್ಯವ ನೀಡು
ತಲೆಬಾಗಿ ವಂದಿಸುವೆ ..

ಮಾಲಿನಿ  ಭಟ್ ................

ಅಮ್ಮ ನಿನ್ನ ಬಿಟ್ಟು ಬಂದ ಆ ಕ್ಷಣ

ಹಿಂದೆ ಹೇಗೆ ನೋಡಲಿ   , ಕಳೆದು ಹೋದ ದಿನಗಳ
ಸೋತ ಮನಸು, ದಣಿದ ದೇಹ ;ಕಾಲ ಗರ್ಭದಿ
ಎದೆಯ ತಲ್ಲಣ ,ಘೋರ ವಿಷವು
ತಲೆಯ ತುಂಬಾ ಜೋಮು ಹಿಡಿದ ಅನುಭವ
ಅಮ್ಮ ನಿನ್ನ ಮಡಿಲ ಹೇಗೆ ಮರೆಯಲಿ
ನಿನ್ನ ಪ್ರೀತಿ ಸಿಂಚನ , ಜೇನ ಸವಿಯ ಆಗರ
ಇಂದು ನಾನು ನೀನು ದೂರ ದೂರ
ಸಹಿಸಲಾಗದು , ಎದೆಯು ತುಂಬಾ ನೋಯುತಿದೆ
ಕಷ್ಟ ಕೊಡೆನು ,ನೋವು ಕೊಡೆನು ,
ನಿನ್ನ ಮಡಿಲೆ ಸಾಕು ನನಗೆ ,...
ತಬ್ಬಿಕೊಂಡು ಅತ್ತುಬಿಡುವ ಆಸೆ ಮನದಲಿ
ಕಾದು ಕಾದು  ಊಟ ಬಡಿಸೋ ನಿನ್ನ ಮಮತೆಗೆ
ಸೋತೆನಮ್ಮ , ನನ್ನ ಜೀವ ನೀನು
ನನ್ನ ಉಸಿರು ನೀನು ,.. ನಿನ್ನ ನಗುವೇ
ಸಕಲ ಭಾಗ್ಯ ನನಗೆ ಅಮ್ಮ. ..


.............. ಮಾಲಿನಿ ಭಟ್ ......................