Friday 10 January 2014

ಮೌನವೊಂದು ಸರಳ  ಉತ್ತರ
ಮನಸ ಒಳಗೆ ಕಣ್ಣೀರ ಹನಿಗಳು
ದೂರವಾದ ಸಂಬಂಧಗಳು
ಕಟ್ಟಲಾಗದ ಹೊಸದು ಸೌಧ
ತೋಳಲಾಡುತಿದೆ ,ಅಳಿದು ಹೋಗುವ ಭೀತಿಯಲಿ


.................. ಮಾಲಿನಿ ಭಟ್ ..............

ಚಿಂತೆ



ಮನೆಯ ಮಾಳಿಗೆ ಮೇಲೆ , ನಿಂತು ನೋಡಲು ಕಳವಳ
ಬಿಸಿತೊಮ್ಮೆ  ಬಿರುಸು ಗಾಳಿ , ಹೃದಯ ಒಮ್ಮೆ ಸ್ತಬ್ಧವು
ಮನದ ಬಾಗಿಲ ಒಳಗೆ ಕುಳಿತ ಚಿಂತೆ ಇನ್ನು ಯಾತನೆ
ಗಾಳಿಯಂತೆ ತೇಲಿಹೋಗಬಾರದೆ , ಪುಟ್ಟ ಮನಸು ಹಗುರವಾಗಬಾರದೇ



................ ಮಾಲಿನಿ ಭಟ್ ..................

ಪ್ರೀತಿಗೆ ಮೋಸ



ಬಾರದಿರು   ಹುಸಿ ಪ್ರೀತಿಯ ತೋರುತ
ನಿನ್ನಲಿ ಮೋಸದ ಬಲೆಯ ಬೀಸುತ

ಸತ್ಯವು ಕಾಣದು , ಸುಳ್ಳೇ ಸತ್ಯವು
ನಿನ್ನ ಮೋಹದಿ ಎಲ್ಲವೂ ಚೆಂದವು

ಮೋಸದಿ ಸೆಳೆದು, ಮೋಹವೇ ಎಂದು
ಕಪಟ  ನಾಟಕ ನಿನ್ನದು ಅಂದು

ತಿಳಿಯದೆ ಸೋತಿರೋ ಪ್ರೀತಿಯ ಪಯಣಿಗ

ಸಾವಲಿ ನೆಮ್ಮದಿ ಕಾಣುವ ನಂಬಿಗ .

ಮಾಲಿನಿ ಭಟ್ .....

ಮತ್ತೆ ಮಗುವಾಗುವಾಸೆ




ನಿನ್ನ ಮಡಿಲಲ್ಲಿ   ಮತ್ತೆ ಮಗುವಾಗುವೆ
ನಿನ್ನ ಸೆರಗಂಚಲ್ಲಿ  ಹುದುಗಿ ಕೂರುವೆ
ಮೃದುವಾಗಿ  ನಿನ್ನ ಕಾಡಿ ಬೇಡುವೆ
ನಿನ್ನೊಡಲ ಪ್ರೀತಿಯ ಸವಿಯುಣ್ಣುವೆ


ನೀ ಹೇಳಿದ ಕಥೆಯ ಆಲಿಸಿ ಕೇಳುವೆ
ಮಮತೆಯ ತುತ್ತ ಮುದ್ದಾಗಿ ತಿನ್ನುವೆ
ನಗುವೇ,ನಲಿವೆ, ನಿನ್ನು ನಲಿಸುವೆ
ನಿದ್ದೆಗೆ ಜಾರಲು ಹಣೆಗೆ ನಿನ್ನ ಸ್ಪರ್ಶವೆ

ಮತ್ತೊಮ್ಮೆ ಹುಟ್ಟಿ ಬರುವಾಸೆ
ನಿನ್ನ ಹೃದಯವ ತಟ್ಟುವಾಸೆ
ಮಗುವಾಗಿಯೇ ಉಳಿಯುವಾಸೆ
ಪೂರ್ಣಚಂದ್ರ  ನಿನಮ್ಮ , ನಿನ್ನ ಜೊತೆಯಿರುವೆ


................... ಮಾಲಿನಿ ಭಟ್ .................... 

ತಾಯಿಯ ಹಾರೈಕೆ




ಬರಿದೇ ಮೌನ ಎದೆಯಲಿ ;ಉಳಿದೆ ನೀನು ಜೊತೆಯಲಿ
ಉರಿಯ ಬೇಗೆಯ ಹಾಗೆ  ಮಧುರ ಮನಸ ತಳದಲಿ

ಜಾತಿ ಧರ್ಮದ ಬೇಲಿ ಮುರಿದು ಬಂದೆ ನಿನ್ನ ಬಳಿಯಲಿ'
ಮಮತೆ ನೀಡಿ ಪೊರೆದ ತಾಯಿ ಅತ್ತಳೆದೆಯ ನೋವಲಿ

ಬಲಿತ ಹಕ್ಕಿಯು ಮರೆತೇ ಬಿಟ್ಟಿತು , ತನ್ನ ಸುಖದ ಅಲೆಯಲಿ

ದೂರವಾಯಿತು ತಾಯಿ ಹಕ್ಕಿಯು ,ಬೆಳೆದ ಮಗುವ ಹಟದಲಿ

ಪ್ರೀತಿ ಬಯಸಿ ಹಾರಿಬಿಟ್ಟಿತು , ವಯಸು ಸಹಜ ಬಯಕೆಯಲಿ
ಅತ್ತು ಅತ್ತು ಕಣ್ಣಿರಿಟ್ಟಿತು , ತಾಯಿ ಮನಸು ಕೊರಗುತಲಿ

ನೂರು ಪ್ರಶ್ನೆಯ ,... ಕುಟುಕು ಮಾತಲಿ
ಸಹಿಸದಾಯಿತು ...........    ನೋವಲಿ

ಇಂದು ನಾನು ಒಂಟಿಯು ,. ಮಕ್ಕಳಿದ್ದು ಬಂಜೆಯು
ಕರುಳ ಕುಡಿಯೇ ನೀಡೋ  ನೋವು ,... ಯಾವ ತಾಯಿಗೂ ಬೇಡವು


ಇಂದು ನನಗೆ ಯಾರೋ ಹೇಳಿದರು ,.. ಮಗಳು ತನ್ನ ಪ್ರೀತಿಲಿ ಸೋತಳು
ನನ್ನ ಕುಡಿಗೆ ಹರಸು ದೇವರೇ ,... ಅವಳ ಸಂಭ್ರಮ ಉಳಿಯಲಿ ..


ದೂರವಾದ ಮನಸು ಬೆರೆಯಲಿ

   ಅವರ ಹೃದಯ ನೀಲ ಸಾಗವಾಗಲಿ .




................  ಮಾಲಿನಿ ಭಟ್ .............


ಹೊಸ ವರುಷವೊಂದು  ಕಾಲಿಟ್ಟಿದೆ
ಪ್ರಶಾಂತ ಸಾಗರದಂತೆ
ಅಲ್ಲಲ್ಲಿ ಅಲೆ ಏಳುವುದು ಸಹಜ
ಸಿಲುಕದಿರು ಸುಳಿಯ ಬಲೆಗೆ
ಸುಖವಾಗಿರಲಿ ಬದುಕ ಪಯಣ
ಶುಭಾಷಯಗಳು ............... ಗೆಳೆಯರೇ ,.. ಗೆಳತಿಯರೆ ...


ಮಾಲಿನಿ ಭಟ್ ....................

ಎಂಥ ಮಾಯೆಯೋ




ನಿನ್ನ ಉಸಿರಲಿ ನನ್ನದೇನಿದೆ
 ಬರಿಯ ಭ್ರಮೆಯು ನನ್ನದಾಗಿದೆ

ಕಣ್ಣು ಕಟ್ಟಿದ ಸ್ವಾರ್ಥದಡಿಗೆ
ಮೌನತಬ್ಬಿದೆ ಆಸೆಯಂಚಿಗೆ

ನನ್ನದೆಲ್ಲವೂ ನನ್ನದಲ್ಲ
ನಿನ್ನಲೇನು ಬಯಸಲಿ

ಅಳಿದು ಹೋಗುವ ದೇಹದುಡುಗೆಗೆ
ಸ್ನೇಹ ಪ್ರೀತಿಯೇ ಶಾಶ್ವತ


.............. ಮಾಲಿನಿ ಭಟ್ .........
ದೂರದಲ್ಲಿ ಕಂಡಾಗ ಅನಿಸಿತು
ಅದು ನನ್ನದೇ ಪ್ರತಿಬಿಂಬ
ಬಳಿಬಂದು ನೋಡಿದಾಗ ಸಿಕ್ಕಿತು
 ನಿನ್ನ  ಪ್ರಿಯತಮೆಯ ಬಿಂಬ


....... ಮಾಲಿನಿ ಭಟ್ ...........