Sunday 29 July 2012

ಭೀಷ್ಮ

 
 
ಗಂಗೆಯ ಕುವರ
ಬೆಳೆದನು ರಾಜ್ಯದ ಬೆಳಕಾಗಿ
ಪ್ರೀತಿಯ ಮಗುವಿಗೆ
ಒಲವಿನ ಹೆಸರು ದೇವವ್ರತ
ತಂದೆಯ ಮೋಹದ
ಕಾಮದ ಶರಕೆ
ಅಂಧನೆ ಆದನು ಪುತ್ರನು 
ಸಂಕಟ ನೋಡಲು ಆಗದೆ 
ಹೊರಟನು ಅಂಬಿಗನ ಮನೆಯತ್ತ 
ಕೇಳಿದ ತಂದೆಗೆ ವಧುವಿನ ಭಿಕ್ಷೆ 
ಅಂಬಿಗನಿತ್ತ ಕ್ಲಿಸ್ಟ  ಪ್ರಶ್ನೆ
ನನ್ನ ಮಗಳ ಪುತ್ರರು ರಾಜ್ಯಕೆ
ವಾರಸುದಾರರು ಆಗುವರೇ
ಜೇಷ್ಠ ಪುತ್ರನು ನೀನಿರುವಾಗ
ಯೋಚಿಸಿ ನೀಡಿದ ಸರಳ ಉತ್ತರ
ನಾರಿಯರೆಲ್ಲ ತಾಯಿಗೆ ಸಮ
ಎನ್ನುವ ಪ್ರತಿಜ್ಞೆ ಮಾಡಿದನು
ತಂದೆಯ ಸಂತಸ ನೋಡಿ
ತೃಪ್ತಿಯ ನಗುವ ಬಿರಿದನು
ನಂತರ ತಿಳಿಯಿತು ಲಗ್ನದ ಷರತ್ತು
ಬೇಸರಗೊಂಡನು ಪಾಪಪ್ರಜನೆಯೋಳು
ಪ್ರೀತಿಯ ಪುತ್ರಗೆ ವರವನಿಟ್ಟನು
ಇಚ್ಚಾ  ಮರಣಿಯಾಗು
ಘೋರ ಪ್ರತಿಜ್ಞೆಯ ಪಲವಾಗಿ
ಭೀಷ್ಮನೆಂದು ಹೆಸರಾದನು ........
 
.......ಮಾಲಿನಿ ಭಟ್ .............

Wednesday 25 July 2012

ನನ್ನ ಕಣ್ಣುಗಳ ಕಟ್ಟೆಯಲ್ಲಿ
ತುಂಬು ನೀರಿನ ಹರಿವಿದೆ
ರಭಸದಿ ಸೋಕಿದ ಗಾಳಿಯಲ್ಲಿ
ನೆನಪಿನ ರಸವು ಜಾರುವುದೆಂಬ ಭಯ ..
 
................ಮಾಲಿನಿ ಭಟ್....................

Saturday 21 July 2012

ಚಿರನಿದ್ರೆಗೆ ಜಾರಿದೆಯಾ ನನ್ನ ಕಂದ

 
 
ಪ್ರೀತಿಯ ನನ್ನ ಕಂದ, ನೀ ಗರ್ಭಕ್ಕೆ ಬಂದ ಕ್ಷಣ 
ನನ್ನಲ್ಲಿ ಅದೇನೋ ರೋಮಾಂಚನ, 
ತೆರೆಮರೆಯಲ್ಲಿ   ಪೋಣಿಸಿಟ್ಟೆ, ಪ್ರೀತಿಯ  ಹೂಮಾಲೆಯನ್ನು,
ಪ್ರತಿಕ್ಷಣವು ನಿನ್ನದೇ ನೆನಪು ,
                           ನನ್ನೆಲ್ಲ ನೋವು ಪ್ರೀತಿ ಬಿಂದಿಗೆಯಾಯ್ತು ||
 
ದಿನ - ದಿನ ಕಳೆದು ನೀ ಬಂದೇ ಬಾಳ ದೀವಿಗೆಯಾಗಿ ,
ಮೂಡಣದ ರವಿಯಾಗಿ ಕಿರಣದ ಸ್ಪರ್ಶ ನೀಡಿದೆ,
ಪ್ರತಿದಿನ ಹೃದಯದ ಮೃದುಲ  ಭಾಷೆಯಾದೆ,
ನಿನ್ನ ಕನಸಿಗೆ ಕ್ಷಣ ಬಿಡದೆ ಶ್ರಮಿಸಿದೆ,
 
                                   ನನ್ನೆಲ್ಲ ನೋವು ಮರೆಯಾಯ್ತು||
 
ಮೊಗ್ಗಾಗಿ ಚೆಲ್ಲಿದೆ ಸೌಂದರ್ಯದ ಬೆಳಕು,
ಬೆಳೆಯುತ್ತ ಹರಡಿದೆ ನಗುವಿನ ಸೌಗಂಧ,
ನಿನ್ನ ನಡೆ ನುಡಿ ಮನೆ ನಂದನವಾಯ್ತು ,
ಕರುಳಿನ ಬೆಸುಗೆಯ ಅರ್ಥ ನೀಡಿದೆ,
                               
                                     ನಿನ್ನೋಲುಮೆಯಲ್ಲಿ ಮನ ತಂಪಾಯ್ತು ||
 
ಯಾರು ಕಂಡರು ನಿನ್ನ ಕರುಬೂ ಮನಸಿಂದ,
ಬಂದಿತಲ್ಲ ಗ್ರಹಚಾರದ ಕೂಪ ,
ಉತ್ತರವಿರದ ಪ್ರಶ್ನೆಗೆ ನೀ ಗುರಿಯಾದೆ,
ಮೌನದ ತಡಿಕೆಯಲ್ಲಿ ಚಿರನಿದ್ರೆಗೆ ಶರಣಾದೆ ,
                                      ಇಂದು ಬಾಳೆಲ್ಲ ರಣಗುಡುವ ಸುಡುಗಾಡು||
 
ಚಿರನಿದ್ರೆಗೆ ಜಾರಿದೆಯಾ ನನ್ನ ಕಂದ
ಹೆತ್ತಮ್ಮನನ್ನೇ ಅಗಲಿದೆಯಾ ?
ನಿನಗಾಗಿ ಎಲ್ಲ ಕಷ್ಟ ಸಹಿಸಿದೆ
ನೋವ ಕಣ - ಕಣದಲ್ಲೂ ನಿನ್ನ ಮುದ್ದು ಪ್ರೀತಿಗೆ ಸೋತೆನು
                                      
                                         ನನ್ನೆಲ್ಲ ನಗುವು ನೋವ ಹಾಸಿಗೆಯಾಯ್ತು .
 
 
  ............ಮಾಲಿನಿ ಭಟ್ ..........................
 
 
 

Tuesday 17 July 2012

ನಿನ್ನ ಚಿತ್ರಣ

 
 
ಕನಸಲ್ಲಿ ಬಿಡಿಸಿದ ಚಿತ್ರಕೆ
ಬಣ್ಣವಿಲ್ಲದೆ ಹುಡುಕಾಡಿದೆ
ಮುಂಜಾನೆ ನೋಡಿದರೆ
ನಿನ್ನ ಸುಂದರ ನೆನಪ ಬಣ್ಣ ಬಳಿದೆ
ಎಷ್ಟು ಸೊಗಸಾಗಿದೆ ನೋಡು
ನಿನ್ನ ನೆನಪುಗಳ ನನ್ನ ಚಿತ್ರಣ 
 
...... ಮಾಲಿನಿ ಭಟ್ ...........
ಮನಸ ತುಮುಲ ಎಲ್ಲ ಅಕ್ಷರವಾಗದು
ಹೇಳುವೆನೆಂದರೂ ಎಲ್ಲ ಹೇಳಲಾಗದು
ಅರಿಯದಂತೆ ಮೌನವಾಗುವುದು
ಉತ್ತರ ಹೇಳದೆ ನೀ ಸರಿದ ರೀತಿ ..
 
..........ಮಾಲಿನಿ ಭಟ್.............
 

ಪ್ರೀತಿಯ ಸಾಕ್ಷಾತ್ಕಾರ

ನಿನ್ನ ಕಣ್ಣುಗಳ ಸುಳಿಯಲ್ಲಿ
ಕವಲೊಡೆದ ಕನವರಿಕೆಯಲ್ಲಿ
ಒಲಿದ ಜೀವ ಮೊಳಕೆಯಲ್ಲಿ
ಏರಿಳಿತದ ಉದ್ವೇಗದಲ್ಲಿ
ಮೃದುಲ ಮನಸಿನ ಬಂಧದಲ್ಲಿ
ಮೌನ ಸಂವಹನದೊಂದಿಗೆ
ಸಾಕ್ಷತ್ಕಾರಗೊಂಡಿದೆ ಪ್ರೀತಿಯ ಬಳ್ಳಿ



.............ಮಾಲಿನಿ ಭಟ್ ............

Wednesday 11 July 2012

ಮರೆಯದ ನಿನ್ನ ನೆನಪು


 
ಕನಸ ಮೂಲೆಯಲ್ಲಿ  ಬೆಚ್ಚನೆಯ ಹೊದಿಕೆ ಹರಡಿ
ಮೌನದ ಪದರ ಜೊತೆಯಲ್ಲಿ ನಗುವ ಕದಡಿ
ಮನಸಿನ ಚಿತ್ರಪಟಡಿ ನೆನಪಿನ ಸರವ ಹರವಿ
ನೀನು ನೀಡಿದ ಮಾಣಿಕ್ಯ ಹುಡುಕುತಿರುವೆ ....
 
 
...............ಮಾಲಿನಿ ಭಟ್ .................
 
ನಿನ್ನ ಒಳಗೆ ನಾನಿರಬೇಕೆಂಬ ಆಶಯ
ನನ್ನ ಹೃದಯ ಸುತ್ತ ನೀ ಕಾವಲಿರಬೇಕೆಂಬ ಹಂಬಲ
ನಿನ್ನ ಭಾವನೆ ನನಗೆ ಸೇರಲಿ ಎನ್ನೋ ಬಯಕೆ
ನನ್ನ ಮಿಡಿತ ನಿನ್ನದೇ  ಎಂದು  ಗೃಹಿಸಲಿ ಎಂಬ ತುಡಿತ ..
 
 
 
............ಮಾಲಿನಿ ಭಟ್ ................... 

ಅಪ್ಪಾ ನಿನ್ನ ಬರುವಿಕೆಯಲ್ಲಿ

 
 
ಅರಿತವರು ಹೇಳಿದರು
ಅರಿಯದವರು ಸುಮ್ಮನಾದರು
ಭವಿಷ್ಯಕ್ಕೆ ತಂದೆಯೇ ಶಿಲ್ಪಿ
ನೂರು ಕನಸಿಗೆ ನೀ ಆಧಾರ
ಪುಟ್ಟ ಪುಟ್ಟ ಕನಸ ಬೆಳಕಿಗೆ
ನೀ ಮೌನದೀವಿಗೆ
ನಿನ್ನ ನೆನಪಾಗುತಿದೆ ಅಪ್ಪಾ
ಹೃದಯ ಮಿಡಿಯುತಿದೆ
ಅಪ್ಪಾ - ಅಮ್ಮ ನಿಮ್ಮಿಬ್ಬರ ಹೊರತು
ಮತ್ತೇನು ಬೇಡವಾಗಿದೆ
ತಟದಲ್ಲಿ ಕಾದು ಕುಳಿತಿರುವೆ
ಒಮ್ಮೆಯಾದರು ಬರುವೆಯೆಂದು 
ನಿನ್ನಲ್ಲಿ ಮಾತನಾಡಬೇಕು ಅಪ್ಪಾ 
ನಡೆಯುದನ್ನು ಕಲಿತ ಗಳಿಗೆ ನೀ ಅಗಲಿದ್ದು 
ದೇವ ನಿನ್ನನ್ನು ತನ್ನೆಡೆಗೆ ಸೆಳೆದುಬಿಟ್ಟ 
ಅಪ್ಪಾ ಒಮ್ಮೆ ಬಂದುಬಿಡು 
ನನ್ನ ಅಮ್ಮನಿಗಾಗಿ ಅವಳ ಮಾಸಿದ 
ಕಣ್ಣಿನಲ್ಲಿ ಅಡಗಿರುವ ನೋವಿಗೆ 
ನೀನು ಮಾತ್ರ ಸಮಾಧಾನ ಮಾಡಬಲ್ಲೆ 
ನಿನಗಾಗಿ ಅವಳು ಕಾಯದ ದಿನವಿಲ್ಲ 
ಪ್ರಪಂಚವರಿಯದ ನನ್ನ ಅಮ್ಮ 
ಸುತ್ತುವರಿದ ಸುಳಿಯಿಂದ ನೀನೇ 
ಬಿಡಿಸಬೇಕು , ಅಪ್ಪಾ ನನಗಿಂತಲೂ 
ನನ್ನ ಅಮ್ಮನ ನಗುವಿಗಾಗಿ ನೀ ಬರಬೇಕು 
ಎಲ್ಲಿ ಅಡಗಿರುವೆ 
ನೀಲನಭದ  ಗಾಳಿಯಲಿ 
ಲೀನಗೊಂದೆಯಾ
ಅಪ್ಪಾ ಕರ್ತವ್ಯ ಮರೆತು  ಹೋಗದಿರು,
ನಿನಗಾಗಿ ಕಾಯುತಿರುವೆ
ಕಣ್ಣೀರು ತಡೆದು , ನಿನ್ನ ನೆನಪಿನೊಂದಿಗೆ ...
 
 
.............ಮಾಲಿನಿ ಭಟ್ ...................

Sunday 8 July 2012

೧.)
ಹೃದಯ ಅವ್ಯಕ್ತ ಭಯದಿ ತೇಲಿದೆ
ಸಾಂತ್ವನ ಮಾಡೋ ಮನಸು ಮರೆಯಲಿ
ನಿನ್ನ ನೆನಪು ಘಾಸಿ ಮಾಡಿದೆ
ಹೇಗೆ ನಿನಗೆ ತಿಳಿಸಲಿ ....
 
೨.) ಪುಟ್ಟ ಮಗುವೆ
ನಿನ್ನ ಜೊತೆ ನಾ ಸೋತೆನು
ನಿನ್ನ ಮುದ್ದು ಮುಖದಿ
ಹೊಳೆಯುತಿಹುದು
ಪುಟ್ಟ - ಪುಟ್ಟ ದೀಪವು
ಸದಾ ಚೆಲ್ಲುತಿರಲಿ
ಆನಂದದ ತೈಲವ ...
 
 
 
.................ಮಾಲಿನಿ ಭಟ್....................

Thursday 5 July 2012

ನಿನ್ನ ಆಗಮನಕೆ
 
ಆ ಗಾಳಿ ತೂಗೋ ಮೆಲ್ಲುಸಿರ ಗಾನಕ್ಕೆ
ಎದೆಯ ಕಣವೂ ಕಂಪಿಸಿತು
ಅತ್ತಿತ್ತ ನೋಡೋದರವೊಳಗಾಗಿ ಬಂದಿರುವೆ
ಮುದ್ದಾದ ಹೂವ ಪರಿಮಳವ ತಂದಿರುವೆ
ಮನದಲ್ಲಿ ಮಡಚಿಟ್ಟ ಹಾಳೆಯು ತೆರೆದಿರುವೆ
ಬೆಚ್ಚನೆಯ ಬೆಸುಗೆಯ ಮುದ ನೀಡಿರುವೆ
ಬೆಳಕು ಚೆಲ್ಲೋ ಕಂಗಳಿಂದ ಕಾದಿರುವೆ ...
 
..ಮಾಲಿನಿ ಭಟ್..............

Monday 2 July 2012

ದೇವ ಸ್ಮರಣೆ

 
ನಿತ್ಯ ಸಂಕಲ್ಪದಿ ಕರಮುಗಿದು ಪ್ರಾರ್ಥಿಸು
ಆತ್ಮಶಕ್ತಿಯ ವರ್ಧಿಸೋ ಆಗರ
ನಿನ್ನ ಸ್ಮರಣೆಯೊಂದೇ ಶ್ರೇಷ್ಠ ಕಿರಣ
ಕತ್ತಲಿಂದ ಬೆಳಕಿನೆಡೆಗೆ ನಡೆಸೋ ಹರಿವು  ..
 
 
.............ಮಾಲಿನಿ ಭಟ್ ..................