Monday, 30 January 2012

ಪ್ರೀತಿ

ಪ್ರೀತಿ
 
 
ಜಗದ ವಿನೂತ ಸೃಷ್ಟಿಯ   ,
ಅತಿಶಯ ದವನ ಈ ಪ್ರೀತಿ ,
ಪ್ರೀತಿ ಎಂದರೆ ಹೀಗೆ ,
ಭಾವನೆಗಳು ಅಕ್ಷಯ ಬಿಂದಿಗೆಯಂತೆ ,
ಮನಸುಗಳು ನಳಿಕೆಯ ಕೇಂದ್ರವಾಗಿ,
ಹೃದಯವು ಸ್ವಚ್ಛ ನಗು ಚೆಲ್ಲಿತು ,
ಆತ್ಮಕೆ ಪ್ರೀತಿಯ  ಜರಿ ಸ್ಪರ್ಶಿಸಿತು,
ಎಂಥಾ ಮಧುರವೀ ಬಂಧನ,
ಪ್ರೀತಿ ತಪ್ಪು ಕಲ್ಪನೆಯಲ್ಲ ,
ಉಸಿರಾಡುವ ಆ ಶುದ್ಧ  ಗಾಳಿ ,
ಅಮೃತದ ಸಿಂಚನ , ಕಸ್ತೂರಿಯ ಕಂಪು ,
ಪ್ರೀತಿ ಎಂದೂ ಬರಡಲ್ಲ
ಅದು ಚಿಮ್ಮುವ ಕಾರಂಜಿಯಂತೆ,
ಬೆಳೆಯುವ  ಪೈರಿನಂತೆ  ,
ಮನಸುಗಳ ಅರ್ಪಣೆ ಎಂಥಹ ತಪ್ಪು,
ಪ್ರೀತಿ ಯಾರನ್ನು ಸಾಯಿಸದು ,
ಅದು ಕಲ್ಪವೃಕ್ಷ ,   ನಮ್ಮ ಸಲಹುವುದು .. 
 

Wednesday, 25 January 2012

ಅರ್ಥಮಾಡಿಕೋ

ಮನಸಿನ ಮಾತಿಗೆ ನಿ ನೀಡುವ ಕಾಣಿಕೆ
ಕನಸಿನ  ಮಾತಿಗೆ ನೀ ನೀಡುವ ಕಾಣಿಕೆ
ಎಲ್ಲದಕ್ಕೂ ನೀ ನೀಡುವ ಕಾಣಿಕೆ  ಒಂದೇ ...
ಭಾವನೆಗಳನ್ನು ಅರ್ಥಮಾಡಿಕೋ ..... 

ಆಶಯ

ಕನಸಿನ ನೆನಪಿಗಾಗಿ ಬಂದೆನು
ನೆನಪಿನ ಆಶಯಕಾಗಿ ಬಂದೆನು
ನನ್ನವರಿರುವರೆಂದು ಬಂದೆನು
ನೀನು ನನ್ನವನೆಂದುಕೊಂಡು ಬಂದೆನು

Monday, 23 January 2012

   ಒಂದು ವಿನಂತಿ  ಪತ್ರ

ಪ್ರೀತಿಯ ಅಣ್ಣ  ,
                    ನಿನಗೆ ತಿಳಿಯದು ಏನಿದೆ , ಈ ತಂಗಿಯ  ಕಥೆಯು ,  ಹೇಗೆ ನಿನ್ನ ತಂಗಿಯಾದೇನೋ , ಹೇಗೆ ನಿನ್ನ ಗೆಳೆತನವಾಯಿತೋ, ನನಗೆ ತಿಳಿಯದು , ಆದರೆ ಒಂದು ಸತ್ಯ , ಅಣ್ಣ ಎಂದರೆ ನಿನ್ನಂತೆಯೇ ಇರಬೇಕು , ನಾ ಬೇಡದೆ ಆ ದೇವರು ನಿನ್ನನ್ನ್ನು ಕರುಣಿಸಿದ ಅದಕ್ಕೆ ದೇವರನ್ನು ನಂಬುತ್ತೇನೆ , ನನ್ನ ಭಾವನೆಗಳನ್ನು ಗೌರವಿಸಿದೆ , ಕನಸುಗಳಿಗೆ ಸಾಕಾರ ನೀಡಿದೆ ನನ್ನಲ್ಲಿ ಹೊಸ   ಚೈತನ್ಯ ತುಂಬಿದೆ. ನಿರ್ಜಿವದಂತಿದ್ದ ನನ್ನನ್ನು ಸುಂದರ ಹೂವಾಗಲು      ಸಹಕರಿಸಿದೆ , ನನಗ್ಯಾರು ಇಲ್ಲ ಎಂಬ ನನ್ನ ಮನಸಿನ ಕಲ್ಮಶವನ್ನು ದೂರವಾಗಿಸಿದೆ . ದೇವರೇ ನಿನ್ನನ್ನು ವಿಶಿಷ್ಟವಾಗಿ ಸೃಷ್ಟಿಸಿದ   ಸುಗಂಧಿತ  ಮನಸು ನಿನ್ನದು , ಕಲ್ಪನೆಗೂ ಎಟುಕದ ಸ್ವಚ್ಛ ಕಿರಣ ನೀನು , ಆದರು ನಿನಗೆ ನಾ ನೋವ ಕೂಟ್ಟಿರುವೇನಲ್ಲ ಅಣ್ಣ , ಅದೂ ನನಗೆ ತಿಳಿಯದೆ , ನಿನ್ನ ಮೇಲಿನ ಪ್ರೀತಿಯಿಂದ , ನಿನ್ನ ಮೇಲಿನ ಮಮಕಾರದಿಂದ , ನೀ ಸದಾ ನನ್ನ ಜೋತೆಗಿರಬೇಕೆಂಬ ಸ್ವಾರ್ಥದಿಂದ   ಅಷ್ಟೇ , ಆ ಕೋಪವೆಲ್ಲ ಹೃದಯದಿಂದ ಬಂದಿದ್ದಲ್ಲ , ಮುನಿಸೇತಕೆ ಸಹೋದರ , ಈ ತಂಗಿಯ ಮೇಲೆ , ಹಾಗೆಯೇ ನಿನ್ನ ಮನಸು ಭಾವನೆಗಳನ್ನು ಪ್ರೀತಿಸುತ್ತೇನೆ , ನಿನ್ನ ತಂಗಿಯಾಗಿ ಸದಾ ನಿನ್ನ ಜೊತೆಗಿರಲು ಇಸ್ತಪಡುತ್ತೇನೆ  , ನನ್ನ ಉಸಿರಿರೂ ತನಕ ಈ ಸಂಭಂಧವ ಕಾಪಾಡುತ್ತೇನೆ , ಯಾವ ಒತ್ತಡಕ್ಕೆ ಒಳಗಾಗಿ ಈ ಮಾತನ್ನು ಹೇಳ್ತಿಲ್ಲ  ನನಗೆ ಗೊತ್ತಿದೆ ಅಣ್ಣ ಯಾವಾಗ ಇದ್ದು ನಡೆದುಬಿಡುತ್ತೇನೆಯೇ ನನಗೂ ತಿಳಿಯದು, ಅಂದು ನಿನಗೆ ತಿಳಿಯದೇನೆ ಇರಬಹುದು , ಆದರೆ ನನ್ನ ಮನಸು , ಭಾವನೆ, ಆಡಿದ ಮಾತು , ಒಡನಾಡಿದ ದಿನಗಳು ,ಕೋಪ ತಂದ ಆ ಕ್ಷಣ , ಮುನಿಸಿಕೊಂಡ ಗಳಿಗೆ , ಇವೆಲ್ಲವೂ ನನ್ನ ನೆನೆಪುಗಳು ಅಣ್ಣ  , ಇನ್ನು ಮುನಿಸೇತಕೆ ಅಣ್ಣ ..
                                                                                                        ಪ್ರೀತಿಯಿಂದ ನಿನ್ನ ತಂಗಿ ..
                                                                                                                ಮಾಲಿನಿ ಭಟ್

Sunday, 22 January 2012

ಕರ್ಣ

ಕರ್ಣ
 
ಕುಂತಿಯ ಮನದಿ
ಮೂಡಿತು ಪ್ರಶ್ನೆ ,
ಮುನಿಯ ಮಂತ್ರದ
ಸತ್ವಪರೀಕ್ಷೆ ,
ಗಂಗಜಳದಿ; ಸ್ನಾನವ ಮಾಡೇ ,
ಸೂರ್ಯನ ಮಂತ್ರವ ಜಪಿಸಿದೂಡೆ,
ಫಲಿಸಿತು ಮಗುವಿನ ರೂಪದಲಿ ,
ತಾವರೆಯಂತ ಮೊಗವನು ಧರಿಸಿದ ,
ಥಳ - ಥಳ ಹೊಳಪಿನ  ನಗುವನು ಕಂಡು
ಮೆಲ್ಲನೆ ಸ್ಪರ್ಶಕೆ ಮೈಮನ ನಲುಗಿ
ಹೃದಯವು ಒಮ್ಮೆ ಕಂಪಿಸಿತು,
ಕಣ್ಣಲಿ ಹೊಳಪು  , ಅರಿಯದ ಬೆಳಕು,
ತಲ್ಲಣಗೊಂಡಿತು ಮಗುವನು ಕಂಡು
ಹೆದರಿತು ಮನಸು ತಾ ಕನ್ಯೆಯು ಎಂದು
ಮಗುವನು ನೀರಲಿ ತೆಲಿಸಿಬಿಟ್ಟು    
ಹೊರಟಳು ತಾಯಿ ಅರಮನೆಯತ್ತ ...............

Friday, 20 January 2012


ಕಡಲು
ಸುಂದರ ಅಲೆಯಲಿ ,
ಕರೆಯುವೆ ನೀನು
ಸಾವಿರ ಜನರನು
ಕ್ಷಣದಲಿ ಬಳಿಗೆ
ಕಡಲೇ ಓ ಕಡಲೇ..........

ಯಾರಿಗೂ ಹೆದರದ
ಯಾರಿಗೂ ಮಣಿಯದ
ನಿನ್ನಯ ಕೆಲಸ
ನಮಗದು ಪ್ರೀತಿ
ಜನರನು ಸೆಳೆಯುವೆ
ನಿಮ್ಮಯ ಅಡಿಗೆ
ಕಡಲೇ ಓ ಕಡಲೇ.......

ಹೊಸ ಹೊಸ ಕನಸಿನ
ಸಾವಿರ ಮಾತಲಿ
ಬಂದರು ನಿನ್ನಯ
ಮಡಿಲಿಗೆ , ತಮ್ಮಯ
ಕಷ್ಟಕೆ ಉತ್ತರ ಹುಡುಕಲು
ಕಡಲೇ ಓ ಕಡಲೇ..........

ಸುಂದರ ಸ್ರಷ್ಟಿಯ
ಸವಿಯಲು ಬಂದವಗೆ
ನೀಡಿದೆ ನೀ ಶಾಪದ
ಫಲವ , ಏನಿದು ಮಾಯೆ
ನಿನ್ನನು ನೀ ಕಂಪಿಸಿ ಬಿಟ್ಟೆ
ಕಡಲೇ ಓ ಕಡಲೇ.....

ಹೇಳಲೇಬೇಕು ,
ಸೌಂಧರ್ಯದ ನೋಡಲು
ಬಂದವಗೆ ,
ಸ್ಮಶಾನದ ಮಡಿಲ ಸೇರಿಸಿದೆಯಲ್ಲ
ಹೇಳು ನೀ ಹೇಳು
ಏತಕೆ ಹೀಗೆ
ಕಡಲೇ ಓ ಕಡಲೇ.............