Friday 30 March 2012

ಆಸರೆ



ಸುಕ್ಕುಗಟ್ಟಿದ  ತನುವ ಎಳೆಯಲಿ
ಮಂಜಹನಿಯು ಶೂನ್ಯ ನೆಟ್ಟಿದೆ
ಬತ್ತಿಹೋದ ಕಣ್ಣ ಕಂಬನಿಯಲಿ
ಮೌನವಾಗಿ ಕಾದು ಕುಳಿತಿದೆ
                                   ಹೊಸದು ಆಸರೆಯೊಂದಕೆ

ಬಯಲು ದಾರಿಯು ಕಠಿಣವಾಗಿದೆ
ಸೆರೆಯ ಜಾಲವು ಅಪ್ಪಿಕೊಂಡಿದೆ
ಮಮತೆ ಪ್ರೀತಿಯು ಅಳಿಸಿಹೋಗಿದೆ
ಮನದ ವೇದನೆ ಮುಗಿಲು ಮುಟ್ಟಿದೆ
                                     ಜೀವ ಕಾದಿದೆ ಮಿಂಚುದೀಪಕೆ
ಹಗಲು ಅಳಿದು ಇರುಳು ಮುಟ್ಟಿದೆ
ನಗುವು ಕಳೆದು ದುಃಖ ತಬ್ಬಿದೆ
ವಾಸ್ತವ ನೋವ ಸ್ತುತಿಯ ಬಿಗಿದಿದೆ
ತಾಳ್ಮೆ ಕಾದು ಕುಳಿತಿದೆ
                             ಕಪ್ಪು ಕನಸು ಬೆನ್ನ ಜೊತೆಗಿದೆ
ಬಾಡಿದಂತ ಮೂಖವು ಸಾರಿದೆ
ತೊದಲು ನುಡಿಯು ಮರೆತುಹೋಗಿದೆ
ಮಂಜು ತಗುಲಿದ ನಯನ ಕಾದಿದೆ
ರೋಸಿ ಹೋದ ಜೀವ ನೆನೆದಿದೆ
                                  ದಿನವೂ ಕಾದಿದೆ ಪುಟ್ಟ ದೀಪಕೆ 
ಜೀವ ಸೆಳೆದ ಆ ದಿನ 
ಜೊತೆಗೆ ಇದ್ದರು ಬಹುಜನ 
ಹುದುಗಿ ಹೋದ  ಕಾಲಕೆ
ನೆನಪು ಒಂದೇ ಕಾಣಿಕೆ
                          ನೀರವ ಮೌನ ಅನುಕ್ಷಣ ಪುಟ್ಟ ಮಿಂಚು ಬರದೆ ....




Tuesday 27 March 2012

ಜೇನುಹುಳ

 
 
ಬಿಸಿಲ ಮಳೆಯ ಕಾಲಪರ್ವಕೆ ಅಂಜದೆ
ಒಂದೇ ಸಮನೆ ಬೆವರ ಸುರಿಸಿ
ಸೂರ್ತಿಯಾದೆ ಜಗಕೆ
ಬೆಳಕ ಒಡೆಯ ಮೂಡೋ ಮೊದಲು
ಹೊರಟೆ ನೀ ಕಾಡಿಗೆ
ದಿಕ್ಕು - ದಿಕ್ಕು ಅಳೆದು ಬಳಲಿ
ದೇವಗೊಮ್ಮೆ ನಮಿಸುವೆ
ಹಾರಿ ಹಾರಿ ರೆಕ್ಕೆ ಬಸಿದು
ಹೂವ ಅರಸುವೆ ಪ್ರತಿಕ್ಷಣ
ಕಣ್ಣು ಕ್ಷಣದಿ ತೆರೆದು
ಹೂವಗಂಧವ ನೋಡಲು
ಅಣುವಿನಸ್ಟು ಗಂಧ ಹಿಡಿದು
ಗೂಡ ದಾರಿಯ ಕ್ರಮಿಸಲು
ಸುತ್ತಿ ಸುತ್ತಿ ಕದದ ಬಳಿ ನಿಲ್ಲಲು
ಧನ್ಯವಾಯಿತು ಜನ್ಮವು .........
 
.........ಮಾಲಿನಿ ಭಟ್ .........

ತನ್ಮಯವಾದ ಗಳಿಗೆ

 
ಆ ತೀರದಲಿ , ಅ ಮರಳಿನಲಿ
ಅಲೆಯಾಗಿ ಮೂಡಿ ಬರಲು
ಹೊಸಕನಸ ಕಂಪು ಎಲ್ಲೆಡೆಯೂ
ಪಸರಿಸಲು , ಭಾವಾಂತರಂಗ ಚೆಲ್ಲಲು
ಆ ಗಾಳಿ ಸೋಕಲು , ಆ ನೀರು ಸೇರಲು
ಹೃದಯವು ತನ್ಮಯದಿ ತುಳುಕಾಡಲು
ಜಗವೆಲ್ಲ ತುಂಬಿರಲು ಸುಧೆಯೋಳು
ಕಣ್ಣ ನೋಟದಲೂ , ಮಾತ ಆಂತರ್ಯದಲೂ
ತೇಲಾಡುತಿರಲೂ ಭವ್ಯತೆಯು,
 ಮಂಗಳವೂ ಆ ದಿನವೂ
ಮರೆಯದ ಸಂಚಲನ
ಏಳೇಳು  ಜನ್ಮದಲೂ ಕೇಳಿಸುವ ಕಿರಣ 
ದೀಪದ ಬೆಳಕು ಪ್ರಜ್ವಲಿಸುವಂತೆ 
ಜೊತೆಯಲ್ಲೇ ಮೆಲುವಾಗಿ ನೀ ನಡೆಯಲು .......
 
 
..........ಮಾಲಿನಿ ಭಟ್ .... 

Monday 26 March 2012

ಒಲವ ಕಂಪನ


 
ನೂಲು ಚರಕದಿ ಹೊಮ್ಮಿ ಬರಲು
ಭಾವ ಹೃದಯದಿ ಹೊರಟಿತು
ಜೀವ ಬಯಸದೆ ಸಿಲುಕಿತು
ಹೊಸದು ಕಾಣದ ಬಂಧಕೆ
 
ಮೌನವಾಗಿಯೇ ಕರಗಿತು
ಮುನಿಸು ಒಳಗೆ ಅರಳಿತು
ಎದೆಯ ಬಿಸಿಯು ಏರಿತು
ಅರಿಯದಂತ ಬಂಧಕೆ
 
ಉಸಿರ ವೀಣೆ ಸ್ವರವ ಚೆಲ್ಲಲು
ದೇಹ ತನ್ನಲೆ ಕಂಪಲು
ಲೋಕ ಕಾಣದೆ ,ಮನಸು ತಾನೆ ನಗುವ ಸೂಸಲು
ಬೆರೆಯಿತೊಂದು ಹೊಸದು ಬಂಧ ...
 
ಬಾನ ಸೂರ್ಯ ಬೆಳಕ ಬೀರಲು
ಮನದ ರವಿಯು ಕದವ ತೆರೆಯಲು
ಸ್ಪಷ್ಟವಾಗಿ ಜಗವ ಕಾಣಲು
ಮೂಡಿತೊಂದು ಹೊಸದು ಬಂಧ ...
 
 
 
 
 
 
 
 
 
 
 
 
 
 
 
 
 
 

Saturday 24 March 2012

ಕಳೆದ ಬಾಲ್ಯ

 
ಬಾಲ್ಯವು ಸವಿದ ಸುಂದರ ನೆನಪು
ಮುಗ್ಧತೆ ಮನಸು ಹೆಣೆದ ಕನಸು
ಬಾನಾಡಿಗಳು ಮಲಗೋ ಸಮಯ 
ರವಿಯು ಕಾನನದ ತಪ್ಪಲಲಿ ಬೆರೆತಿಹನು
ಮುದ್ದು ಮಗುವು ಸೆರೆಹಿಡಿದಿರಲು ದಿನಕರನ 
ಕಸಿಯ ಬಯಸಿತು ಮಗದೊಂದು ಕಂದ
ಮರವು ತಟಸ್ಥಗೊಂಡಿತು  
ಮುದ್ದು ಜೀವದ , ಹಟದ ಮಾತು ಕೇಳಿ
ಓಡುತಿದೆ ಜೀವನ ಆ ಚಕ್ರದಂತೆ .
 
 
ಹಸಿರು ಹಾಸಿಗೆಯ ಆ ವನ್ಯರಾಶಿಯು
ಮೌನದಿ ಕಾದಿದೆ
ಮಂದ ಬೆಳಕಾಗಿಯಾದರು ಬಾ
ನೀರಡಿಕೆಯ ದಾಹನೀಗಲು
ಓ ಮೇಘರಾಜನೆ ...
 
...ಶುಭಸಂಜೆಯ ಶುಭಾಶಯಗಳು.....
ನಗುವ ಹೂವು ಸೆಳೆದಿದೆ
ಸಾವಿರ ಮನಸ ಕ್ಷಣದಲಿ
ತ್ಯಾಗದಿಂದ ಪಡೆದಿದೆ
ಆತ್ಮಸಂತೃಪ್ತಿಯ............ 
 
 
........ ಶುಭಸಂಜೆಯ ಶುಭಾಶಯಗಳು..............
ದಾರಿ ಕಾದಿದೆ
ಕನಸ ಬೆಳಕಿಗೆ
ಜೀವರಸವು ಸಾಗಿದೆ
ಆತ್ಮ ಹೊಳಪಿಗೆ ನಿರಂತರ ..
 
 
........ಶುಭಸಂಜೆಯ ಶುಭಾಶಯಗಳು.........
ಬಿಸಿಲು ಸುಡುತಿದೆ ,
ಸುತ್ತು ನೆರೆದ ಮೋಡ ಮಾಯವಾಗಿದೆ
ನಿರೀಕ್ಷೆ ಒಂದೇ ಆಸರೆ
ಹನಿ ನೀರ  ಆಗಮನಕೆ ............
 
 
..........ಮಾಲಿನಿ ಭಟ್.................
ಹೊಲದ  ಮಡಿಲಲಿ
ಮಣ್ಣ ಕಣದಲಿ
ಜೀವವೊಂದು ಅರಳಿದೆ
ತನುವ ಮರೆತು
ಸ್ನೇಹ ಚಾಚಿದೆ
ಜಗಕೆ ಬೆಳಕ ನೀಡಿದೆ ...
ಉಸಿರ ನೀಡಿದೆ
ಫಲವ  ನೀಡಿದೆ
ನಿನ್ನ ಮಾತ್ರ ಯಾರು ಅರಿಯದಾದರು ..
 
ಹೂವು ಅರಳಿದೆ
ಗಂಧ ಬೀರಿದೆ
ಕಾದು ಕುಳಿತಿದೆ
ಹೊಸವರುಷಕೆ
ಗಿಡದ ಕೊರಳಲಿ ಮನೆಯು ಮಾಡಿದೆ
ಜೀವಸತ್ವದ ಕಲ್ಪವು
ತಾಯಿಯಂತೆ ಮಮತೆ ನೀಡಿದೆ
ವಿಶ್ವ ಕರುಳ ಕಂದಗೆ .....
 
....ಮಾಲಿನಿ ಭಟ್.....

Tuesday 13 March 2012

ಸೋತ ಕ್ಷಣ

 
 
ಕಣ್ಣ ಕಂಬನಿ ಜಾರಿದೆ
ಹೃದಯ ನೋವ ಹೇಳದೆ
ಮನವು ಅಲ್ಲೇ ಸುತ್ತಿದೆ
ಜಡತೆ ಅಳಿಸಲು ಆಗದೆ
ಜೀವ ನರಳಿದೆ
ಬಳಗ ಸರಿದಿದೆ
ಆತ್ಮ ಸೋತಿದೆ
ಉಸಿರು ಹಿಡಿದಿದೆ
ಮುಖವು ಬೆವೆತಿದೆ  
ಸ್ನೇಹ ಮರೆತಿದೆ
ನಿರೀಕ್ಷೆ ಅಳಿಸಿದೆ
ಮನವು ರೋಧಿಸಿದೆ
ಮೌಲ್ಯ ಕಳಚಿದೆ
ಶೋಷಣೆ ಹೆಚ್ಚಿದೆ
ದಿಕ್ಕು ತಪ್ಪಿದೆ
ಮೌನ ದಕ್ಕಿದೆ ...
ಚಿಗುರೋ ಹಸಿರು ಕರೆಯುತಿದೆ
ಮುಗಿಲ ಮಲ್ಲಿಗೆ ಸಾಲನು 
ತಂಪ ಗಾಳಿಯ ನೀಡುವೆ 
ಮೆಲ್ಲ ಸ್ಪರ್ಶಿಸಿ ಬಾ 
ವಿಶ್ವ ಚೇತನ 
ಭವ್ಯ ಮಂದಿರ 
ನನ್ನ ಹೃದಯದ ಮಂಟಪ 
ಆತ್ಮ ಅವಿತಿದೆ 
ಶಿರವ ಬಾಗಿಸಿ ಒಳಗೆ ಬಾ ...
 

 

Thursday 8 March 2012

ಮನದ ಮೂಲೆ

ಮನದ ಮೂಲೆ
 
ಮನದ ಮೂಲೆಯಲ್ಲಿ
ಬೆಚ್ಚಗೆ ಮುದುಡಿದೆ
 
ಕಟ್ಟಿದ ಸಾವಿರ ಕನಸಲ್ಲಿ
ಹುಚ್ಚಾಗಿ ಅವಿತಿದೆ
 
ಬಯಕೆಯ ಬಳ್ಳಿಯಲ್ಲಿ
ಹೊಸದಾಗಿ ಹೆಣೆದ ಗೂಡಿದು
 
ಕಣ್ಣ ರೆಪ್ಪೆಯಡಿಯಲ್ಲಿ
 ಮುದ್ದಾಗಿ ನಲಿದಿದ್ದು
 
ಅರಸಿ ಹೋದ  ಹೊಸ ಸಂಬಂಧದಡಿಯಲ್ಲಿ
ಇಂದು ಮೂಕವಾಗಿ ಅತ್ತಿದೆ
 
ಬಂಧದ ಭಾವನೆಗಳಲ್ಲಿ
ಸರಪಳಿಯು ಬಿಗಿದುಕೊಂಡಿದೆ
 
ಜೋಪಾನದಿ ತೆರೆದಿಟ್ಟ ಮನದಲ್ಲಿ
ಬರಿಯ ಮೌನ ಉಳಿದಿದೆ ....
 
 
 
 

Wednesday 7 March 2012

ಹೂವ ಲೇಪನ ಮಾಸಗೊಡದೆ
ಚಿತ್ತ ಸ್ಮೃತಿಸಿದೆ
ದೂಳು ಹಿಡಿದ ಕನಸನು
ಹೇಗೆ ಮರೆಯಲಿ ನಿನ್ನ ..

ಖಿನ್ನ ಮನಸು





ಖಿನ್ನವಾದೆ ಏಕೆ ಮನಸೇ
ಕಣ್ಣಲಿಂದು  ಕಂಬನಿ

ಹೃದಯ ಮಿಡಿದು ಮೌನವಾಗಿ
ತನುವು ಮೆರೆತಿದೆ ಅಂಬಲಿ

ಮುಸುಕ ಮಬ್ಬು ಪೊರೆಯಲಿ
ಬಿಂಬ ಅಡಗಿ ಸೋಲಲು

ನಿನ್ನ ಕರೆದು - ಕರೆದು ನಾ
ನನ್ನ ನಾನು ಮರೆತೆನು

ಅರಿಯದಾದೆ ನಿನ್ನ ಚಿತ್ತ
ಬಿರಿದ ಗಾಯದಳನು

ನಕ್ಕು- ನಗಿಸಿ ನೋವ ನುಂಗಿ
ಖಿನ್ನವಾಗಿ ಉಳಿಯಲು

ನನ್ನದೊಂದು ಪ್ರಾರ್ಥನೆ
ಹೂವಿನಂತ  ಮನಸಲೇಕೆ

ದುಃಖ - ದುಗುಡ ಬೆಳೆಸಿದೆ
ಅತ್ತುಬಿಡು ಖಿನ್ನ ಮನಸೇ
ಗೆದ್ದುಬಿಡು  ನೀ ...

Tuesday 6 March 2012

ಮನದ ಪ್ರಾರ್ಥನೆ




ಅಂದು ಸಂಜೆ ಬರಿಯ ಬಾನು
ಇಣುಕಿ ಇಣುಕಿ ಕರೆಯಿತು


ಹಲವು ಪ್ರಗತಿ ಕಂಡು ನಭವು
ಅಲ್ಲೇ ಮುದುಡಿ ನಲುಗಿತು

ಸುತ್ತ ದೀಪ ಕಳೆದ ಮುಗಿಲು
ಅಣುವ ಆಸರೆ ಬಯಸಿತು

ಕಣ್ಣ  ಕಂಬನಿ ಮರೆತ ಅಳುವು
 ಆತ್ಮಾನಂದಕೆ ಸಿಲುಕಿತು

ಕಿರಣದ ಹೊಳಪು ಹೃದಯ ಮೀಟಲು
ಮನೋಲ್ಲಾಸವ   ಪಡೆಯಿತು

ಮನದ ಪ್ರಾರ್ಥನೆ ಫಲವು ಪಡೆಯಲು
ಹೃದಯ ಹರಿಸಿತು ದೇವಗೆ ....
....

Monday 5 March 2012

ಆ ಕ್ಷಣ



ಹೂವಗಂಧದಿ ನಿನ್ನ ನೋಡಲು
ಕಂಪಿತೆನ್ನೆದೆ ಮೆಲ್ಲನೆ
ಜೀವ ಕರೆದಿದೆ
ಮನಸು ಅರಳಿದೆ
ಬೆಳಗು ಮೂಡಿದೆ ಕಣ್ಣಲಿ
ಹೃದಯ ತನ್ಮಯವಾಗಿದೆ
ಹರುಷ ಹೊರಟಿದೆ ಸುಳಿಯದೇ
ತಂಪ ಗಾಳಿ ಸೋಕಿದೆ
ನೆನೆಪು ಮೆರೆದಿದೆ ಸುಮ್ಮನೆ ...

ಕೋಪ



ಸಿಡಿಮಿಡಿಯ ಮನಸೇ
ಒಮ್ಮೆ ನಗು ಅಲ್ಲಿಯೂ ಕೋಪವೇ
ಕದಡಿದ ಮೂಕವೇದನೆಯೇ
ಮುನಿಸಿಕೊಂಡ ಚಿಗುರು
ತಲ್ಲಣಿಸಿದ ಭಾವನೆಗಳ ಹೂದೋಟ
ಅಪ್ಪಟ ಸ್ಪಟಿಕ ಕ್ಷಣ- ಕ್ಷಣ ಮರೆತರೆ
ದೇಹವ ಬಂಧಿಸಿ ಹೃದಯವ  ಅಳಿಸಿ
ಭಾವನೆಗಳ ಬಿಗಿಹಿಡಿದಿದೆ
ತಾನು ಮನ ಶೂನ್ಯನೋಟ ಬಿತ್ತಿದೆ
ಅಭಿಷೇಕದ ಪ್ರಜ್ಞೆ ಬೆಳಗಬೇಕು
ಹಂತ ಹಂತದಿ ತಾರೆಯಂತೆ

......

ಸಂಬಂಧ



 ಸೋಲಲ್ಲಿ ಕೈ ಹಿಡಿದ ಆ ಜೀವ
ಜೀವಕ್ಕೆ ಜೊತೆಯಾದ ಆ ಹೃದಯ
ಹೃದಯಕ್ಕೆ ಸಂಗಾತಿಯಾದ ಆ ಮನಸು
ಮನಸಿಗೆ ಆಧಾರವಾದ ಆ ನನ್ನ ಭಾಗ್ಯ
ಸುತ್ತಲು ಕವಿದಿರುವ ಸುಳಿ
ಸುಳಿಯ ಮೋಹಕ್ಕೆ ತನುವಿನಾರ್ಭತ
ತನುವಿನ ಭರವಸೆಗೆ ಹೃದಯದ ಬೆಂಬಲ
ಹೃದಯ ಚಿತ್ತಾರಕ್ಕೆ ಭಾವನೆಗಳ ಬೆಸುಗೆ
ಭಾವನೆಗಳ ತೋಟಕ್ಕೆ ನಗುವಿನ ಲೇಪನ
ನಗುವಿಗೆ ಆಧಾರ ಸ್ವಚ್ಛ ದಿಗಂತ
..

ಮಾನವತೆಯ ಉತ್ತುಂಗ


ನಗಬೇಕು ನಾನಿಂದು ನಗಬೇಕು
ಮನಸಿನ ಭಾರವ ಅಳಿಸಬೇಕು
ಉಸಿರಾಡುವಾಗ ಬಿಗಿದಂತ ನೋವು
ಮಾತಿನಲಿ ಮುನಿದಂತ ಮನಸು
ಜೀವವ ಸುತ್ತುವರಿದ ಮೌನವ ತೊಡೆಯಬೇಕು
ಅಳುವನ್ನು ನುಂಗಿ ನಗುವಂತ ಮನಸಾ ತೊರೆಯಬೇಕು
ಮನಸಿನ ದೃಢತೆಗೆ ಕೃಷಿಕನಾಗಬೇಕು
ಭಾವನೆಯ ಚೀಲಕ್ಕೆ ಪ್ರವರ್ತಕನಾಗಬೇಕು
ತಮಸ್ಸಿಗೆ ಹೊಂಗಿರನವಾಗಬೇಕು
ಮಂದಿರವ ಹೆಣೆಯಬೇಕು
ಜ್ನನದೀವಿಗೆಯ ಕಾಂತಿಯಲಿ
ಅರಿವಿನ ಪ್ರಖರತೆಯ ಬೆಳೆಸಬೇಕು
ಸಹನೆ ಔನತ್ಯದಲಿ
ಹೃದಯ ಇಂಚರ ಆಲಿಸಬೇಕು
ಜಗದ ಪ್ರಗತಿಯಲಿ
ಮಾನವತೆಯ ಉತ್ತುಂಗದಲಿ  ನಗಬೇಕು ..
 

ನೀನು ಯಾರು ?..

 
 
ಕನಸ ಗೂಡು ಹೆಣೆದು
ಮನದಿ ಪದವ ಬಿಡಿಸಿ
ಮೌನವಾಗಿ ಬೆಸೆದು
ಅವ್ಯಕ್ತವಾಗಿ ನಿಂತ ನೀನು ಯಾರು ?
 
ಕಣ್ಣ ಸನ್ನೆ ಅಗಲಿ
ಬಿಂಬ ಚಂದ ತೀಡಿ
ಲಕ್ಷ್ಯದಿಂದ ಜನ್ಮ ತಾಳಿತು
ಅಣುವಿನಲ್ಲು  ಬೆರೆತು ನಿಂತ ನೀನು ಯಾರು ?
 
ಹಲವು ನಿರೀಕ್ಷೆ
ಬೇರು ಪಡೆದ ಜೀವ
ನೆತ್ತರಲ್ಲೂ ಸಂದೇಶ
ಸಂಕೀರ್ಣವಾಗಿ ಉಳಿದು ಹೋದ ನೀನು ಯಾರು ?..
 
ಗರ್ಭದಲ್ಲಿ ವಿಶ್ವಾಸ 
ಶುದ್ಧ ಫಲವು ಪ್ರಾಣಕೆ 
ಮೌಲ್ಯಯುಕ್ತ ಆಜ್ಞೆಯು 
ಸಿದ್ಧಾಂತದಲಿ ಕರಗಿ ಹೋದ ನೀನು ಯಾರು ?...
 
.....ಮಾಲಿನಿ ಭಟ್ ...........
 
 
 
 
 

Sunday 4 March 2012

ದೇವ


ಒಮ್ಮೆ ದೇವ ಮನಸಿನಲಿ
ಸೃಷ್ಟಿ   ಪದವು ಸಾಗಲು
ಶಾಂತವಾಗಿ  ಕೊರೆದನು
ಸಮಯ ಮಿಗಿಸಿ ಜೋಡಣೆ
ಅರ್ಥಬದ್ಧ ಕಾಯಕ
ಅಡಗಿ ಕುಳಿತು ನೋಡಿದ
ಎಂಥ ಅದ್ಭುತ
ಸುಮ್ಮನಿರದೆ ನೆಲೆಸಿದ
ಶಿಲೆಯ  ರೂಪದಿ
ಮಾತಿನಲಿ ಸತ್ಯಕೆ
ಕೆಲಸದಲಿ ಶ್ರದ್ಧೆಗೆ
ದಿನವೂ ನಿತ್ಯ ನಿಷ್ಟೆಯಲಿ
ಮಳೆಯೂ, ಗಾಳಿ , ಚಳಿಯಿಗಂಜದೆ
ತ್ಯಾಗಮೂರ್ತಿಯಾಗಿ  ಉಳಿದನು ....
 
ಮಾಲಿನಿ ಭಟ್ .....
 

ಬದುಕು


 
ಮಾನವನ ಬದುಕು
ರತ್ನದ ಸರವು
ಓಡಲು ತುಂಬಿದೆ ಕೊಳಕು
ಬೆಳಗಿತೆಲ್ಲಿಯ ಜ್ಯೋತಿ
ಸ್ವಪ್ನ ಕುಡಿಯ ಬೆಳಕು
ಆತ್ಮಸಾಕ್ಷಿಯ ಅರಿವು
ಸುಪ್ತಮನಸಿನ ವಾಸ್ತವವು
ಕತ್ತಲಳಿಸಿದೆ ನಭಕು
ನಂಬಿಕೆಯ ದರ್ಶನಕು
ಸ್ಮರಣೆಗೈಯುತ ಸಪ್ತಸಾಗರಕು ...
 
....ಮಾಲಿನಿ ಭಟ್......

Thursday 1 March 2012


ಶುಭ ಸಂಜೆ

ಸೂರ್ಯನಾಗಲೇ ಕಡಲಂಚಲಿ ,
ಸುಂದರತೆಯ ನೆಲೆಯಲಿ ,
ಕಾಯಕದ ಕೊನೆಯಲಿ ,
ನಿಷ್ಠೆಯ ನೆನಪಲಿ
ತನ್ಮಯನೆಯ ಉತ್ತರದಲಿ
ಹೊರಟಿಹನು ಆ ನೀಲ ನಭದಲಿ
ಸಾಗರದ ಪ್ರಶಾಂತತೆಯ ತಳದಲಿ
ನಾಳೆಯ ನಿರೀಕ್ಷೆಯಲಿ
ಇಂದಿನ ದಿನದ ಸಿಹಿ ನೆನಪಲಿ
ಮತ್ತೆ ಬರುವೆನು ,
ಮರಳಿ ಬರುವೆನು ,
ಮರೆಯದ ಗೆಳೆತನಕ್ಕಾಗಿ ..........

     .... ಮಾಲಿನಿ ಭಟ್ ......
ನನ್ನ ಕಣ್ಣ ತುಂಬಾ
ನಿನ್ನ ಪ್ರೇಮ ಬಿಂಬ
ಹೊಸತು ಇಹುದು
ಹಳೆಯದು
ನೋಡಲೆಂತ  ಸುಂದರ.
ನಗುವ ಜನರ ಕಂಡಾಗಲೆಲ್ಲ
ಹೃದಯ ಒಮ್ಮೆ ನಗಬಾರದೇ
ಅಳುವ ಜನರ ಕಂಡಾಗಲೆಲ್ಲ
ಒಮ್ಮೆ ಅವರ ಕಂಬನಿ ಒರೆಸಬಾರದೇ