Friday 27 September 2013

ಗಿಡದ ವ್ರತ


ಮೋಡದಲೊಂದು  ಮಳೆಹನಿಯ ಒರತೆ
ಆ ಹನಿ ಸ್ಪರ್ಶಕೆ ಗಿಡದ ವ್ರತವು
ಚುಂಬಿಸಿ ಚುಂಬಿಸಿ ಮನವು ಹಸಿರಾಗಿ
ಹೃದಯವು ಬಯಸಿತು ,  ನಿನ್ನ ಇರುವಿಕೆ
ಸದಾ  , ಕಾಣುವ ನಿನ್ನದೇ ಬಿಂಬ
ಜೊತೆಯಲೇ ಇರು, ಒಲವೇ
ಉರಿಯುವ ಹಣತೆಯ ಹಾಗೆ
ಬೆಳಕನು ನೀಡು ಇರುಳಿನ ಚಪ್ಪರಕೆ
ಅಂಧಕಾರವು ಕಾಣದೆ ಅಡಗಲಿ
ನಾನು ಉಳಿಸುವೆ, ನಾನು ಬೆಳೆಸುವೆ
ನೀವು ಬನ್ನಿರಿ, ನೀವು ಬೆಳೆಸಿರಿ
ಮುಂದಿನ ದಿನದ ವರೆಗೂ  ...


............. ಮಾಲಿನಿ ಭಟ್ .............

ಪ್ರೀತಿ ದೀಪ



ಮೌನವಾದ ಗಾಳಿಯಲ್ಲಿ ನಿನ್ನ ನೆನಪು ಇಣುಕುತಿದೆ
ಬೆಟ್ಟದಾಚೆಯಾಗಸದಲಿ ನಿನ್ನ ಧ್ವನಿಯು ಉಲಿಯುತಿದೆ

ಕಣ್ಣರೆಪ್ಪೆ ಮುಚ್ಚಿ ನೋಡಲು ಕಳೆದ ಮಧುರ ದಿನಗಳ
ಅಲ್ಲೇ ಹರಿವ ಝರಿಯು ಹೇಳಿದೆ ಪ್ರೀತಿ ತುಂಬಿದ ಕ್ಷಣಗಳ

ಜಾರಿಹೋದ ಕಾಲಗರ್ಭಕೆ ಮರವು ಸಾಕ್ಷಿಯೂ ಇಂದು

ಮರಳಿ ಹೋಗಿ , ನೋಡಿ ಬರಲು ಮೂಕವೇದನೆ  ಇಂದು

ಅಳಿಸಿ ಹೋಗಿದೆ ಬಲಿತ ಪ್ರೀತಿಯು , ಮರವೇ ನೊಂದಿದೆ ಅಂದು
ಚಿಕ್ಕ  ಜಗಳಕೆ ಪ್ರೀತಿ ಒಡೆಯಿತು , ಪಶ್ಕಾತಾಪವು ಇಂದು


................ ಮಾಲಿನಿ ಭಟ್ ...............




ಮಧುರ ವೀಣೆಯ ಸ್ವರವು
ಹೃದಯ ಹೃದಯ ದ ಒಳಗೆ 
ನಿಶೆಯ ಕರ ಮನಸೊಳಗೆ
ಇರುಳ ಅಂಗಳದಂತೆ'
ಹೊಳೆಯೋ ತಾರೆಯು ಬರಲು
ಬೆಳಕು ಬದುಕಿನುದ್ದಕ್ಕೂ

ಮಾಲಿನಿ ಭಟ್ ...

ಗಣಪತಿಗೆ ವಂದನೆ



ಗಣಪ ನಿನ್ನ ಸೇವೆಯಲ್ಲಿ ನಾವು ಧನ್ಯರು
ವಿಘ್ನನಿವಾರಕ ನಿನ್ನ ಅಡಿಯಲ್ಲಿ
ನಾವು ಎಲ್ಲರೂ
ವಿದ್ಯೆ  ಬುದ್ಧಿ  ನಿನ್ನ ಸತ್ವದಲ್ಲಿ
ಸಕಲರಿಗೂ  ನೀಡುವೆ
ಭಕ್ತಿಗೆ ತಲೆದೂಗುವ ಏಕದಂತನೇ
ವರಪ್ರಸಾದ ಕಲ್ಪಿಸುವೆ
ಗರಿಕೆ ಹುಲ್ಲಿಗೆ ತೃಪ್ತ ಗಣಪನೇ
ಬಡವ ಬಲ್ಲಿದ ಎಲ್ಲ ಒಂದೆಯೇ
ಜ್ಞಾನದಿ  ನಿನ್ನ ಭಜಿಪಗೆ
ಸಕಲ ಸಿದ್ಧಿ ನೀಡುವ ಗಜವದನೇ .


ಎಲ್ಲರಿಗೂ  ಗಣೇಶ ಚತುರ್ಥಿಯ ಶುಭಾಷಯಗಳು , .



.... ಮಾಲಿನಿ ಭಟ್ ....

Friday 6 September 2013

ನಿನ್ನ ಪ್ರೀತಿ ಅರಮನೆಯಲ್ಲಿ



ಅರಮನೆಯ ನಾ ನೋಡಿಲ್ಲ
ನನ್ನದೇ ಪುಟ್ಟ ಅರಮನೆಯಿದೆ
ಅಲ್ಲಿ ಬೇಧವಿಲ್ಲ  ಯಾವುದಕ್ಕೂ
ಪ್ರೀತಿಗೆ  ಕೊರತೆಯಿಲ್ಲ
ಸಂಬಂಧದ ಸಾಮೀಪ್ಯವಿದೆ
ಭಾವನೆಗಳ ಬಂಧವಿದೆ
ಮನಸುಗಳ ಮಿಲನವಿದೆ
ನಿನ್ನ ಕಾಳಜಿಯ ಕರೆಯಿದೆ
ಇದಕಿಂತ ಮಿಗಿಲಾದ ಅರಮನೆ ಇದೆಯೇ ?


.... ಮಾಲಿನಿ ಭಟ್ ............
ದಾರಿ ದೂರ ,ನೀನಿನ್ನು ದೂರ 
ಮನಸುಗಳು ಮಾತ  ತಪ್ಪಿವೆ 
ಕನಸು  ಎಲ್ಲೋ ಜಾರಿದೆ 
ಬೆಳಕಿನ ಕಿರಣ ಮನದಲ್ಲಿ ಮೂಡಿ 
ನಿಶೆಯು ಸಾಗಲಿ ದೂರ ದೂರ ... 


..... ಮಾಲಿನಿ ಭಟ್ ........ 
ಬಯಸೋದು ಬದುಕಲಿ ಪ್ರೀತಿಯ  ಪರಿಮಳ 
 ಹುಡುಕಿದರೆ  ಸಿಗದು , ಬಾನಿನ ತಾರೆ 
ದೇವರ ಕೃಪೆ ಇರಲು ತಾನೇ ಒಲಿಯುದು 
ಬಣ್ಣದ ತಾರೆಯ ಸೊಬಗ ನೀಡುವುದು 


..... ಮಾಲಿನಿ ಭಟ್ ............... 

ನನ್ನ ಪ್ರೀತಿಯ ಇನಿಯ





ಜೀವ ಕಣದಿ  ಹುದುಗಿ  ಹೋಗಿರುವೆ
ಬಿಡಿಸಲಾರದ  ಬಂಧದಿ ನೆಲೆಸಿರುವೆ
ಕಾಣದೆ ಸಿಲುಕಿರುವೆ
ತಿಳಿಯದ ಪಯಣದಿ
ಹುಡುಕಿದರೂ  ಸಾಧ್ಯವೇ
ಮಾಣಿಕ್ಯ ಹುಡುಕುವುದು
ಎಂಥ ಮಾಯವೋ
ಅರಿಯನು ಒಂದೂ
ಅದೃಷ್ಟವ ನಾ ಕಾಣೇನು
ನಿನಗಿಂತ ಭಾಗ್ಯ ಬೇರೇನೂ ಇಲ್ಲ
ನನ್ನ ಪ್ರೀತಿಯ ಇನಿಯ.


... ಮಾಲಿನಿ ಭಟ್ ......

.............. ಸ್ವಾರ್ಥದಡಿಯಲಿ ...........



ಜಾರುತಿದೆ ಕಡಲು ಮುಗಿಲ ಸಾಲನು ಮೀರಿ
ತೆರೆಯ ಅಂಚಲಿ ಪುಟ್ಟ ಕನಸು ಸೇರಿ ,
ದೂರ ಸಾಗಿದ ನೀರ ಕಲರವ ;
ಬದುಕಿನೊಡನೆ ನರ್ತಿಸಿ ,
ಪುಟ್ಟ  ಗೂಡನು ಸೆಳೆದುಕೊಂಡಿತು
ಹಟದ ಮೋಹಕೆ ವಶವ ಮಾಡಿತು ತನ್ನಲಿ
ತಬ್ಬಿಕೊಂಡು ಜೀವಹಿಂಡಿ ;ಎಸೆದುಬಿಟ್ಟಿತು ದಡದಲಿ ,
ಎಂಥ ಖುಷಿಯೋ , ಅರಿತವರು  ಯಾರಿಲ್ಲ
ಎಲ್ಲ ಬಯಲಿನಾಟ ,
ಜಾರುತಿದೆ ಕಡಲು ಸ್ವಾರ್ಥದ ಅಲೆಯಲಿ ,
ಜಾರುತಿದೆ ಕಡಲು ಮುಗಿಲ ಸಾಲನು ಮೀರಿ


..... ಮಾಲಿನಿ ಭಟ್ .............



ಒಲವಿನ ಕರೆಯಿದೆ



ಮೌನವೇ ಮಾತಾಡು ಬಾ
ಒಲವಿನ ಕರೆಯಿದೆ
ಭಾವನೆಯಲಿ ಚಡಪಡಿಸದಿರು
ಬಾ ಸನಿಹ , ಬಾ ಸನಿಹ ,
ಒಲವಿನ ಕರೆಯಿದೆ
ಹಸಿರೆಲೆಯ   ನೋಡಿ ತಿಳಿ
ಸಂತಸದ ಮರ್ಮವ
ಕಲ್ಪನೆಯ ಕದವ ಎಸೆದು
ವಾಸ್ತವವ ನೋಡು
ನಿನಗಾಗಿ ಕಾದಿರುವುದು
ಈ ಜೀವವು ,
ಬಾ ಸನಿಹ , ಬಾ ಸನಿಹ ,
ಒಲವಿನ ಕರೆಯಿದೆ .
........... MALINI BHAT.............







ದೇವರ ಮಕ್ಕಳು



ಆ ದೇವರ ಕೈ ಗೊಂಬೆ ನಾವು,
ನಡೆಯುದೊಂದೇ ನಮ್ಮ ಕೆಲಸ
ಹುಡುಕೋ ದಾರಿಯು ಸಿಗದು  ಇಲ್ಲಿ
ಸಿಕ್ಕ ಫಲವೇ ಅಮೃತವು
ಅದುವೇ ನಮ್ಮ ಭಾಗ್ಯ



.... ಮಾಲಿನಿ ಭಟ್ ..............

ಕಂಪ್ಯೂಟರ್



ಕಂಪ್ಯೂಟರ್ ನ  ಮುಂದೆ  ಕುಳಿತು 

ಕೀಬೋರ್ಡ್  ಮೇಲೆ ಬೆರಳಾಡಿಸುತ್ತ
ಮೌಸ್ ನ್ನು  ಅತ್ತಿಂದಿತ್ತ ಒಲಾಡಿಸುತ್ತ
ಬಂದ  ಎರರ್ ಒಂದೊಂದೇ ತೆಗೆಯುತ್ತ
ಇಂಟರ್ನೆಟ್ ಸುಮ್ಮನೆ ಬ್ಯುಸಿ ತೋರಿಸುತ್ತ
ಅಲ್ಲಿತನಕ ಸಮಯ ನಿಲ್ಲುವುದೇ
ಯಾವ ಕೆಲಸವೂ ಇಲ್ಲದೆ ,
ಕಂಪ್ಯೂಟರ್ ನ ದರ್ಶನ ಪಡೆದು
ಕಣ್ಣು ಹಾಳು ಮಾಡಿಕೊಂಡಿದ್ದೆ ಲಾಭ ..


.. ಮಾಲಿನಿ ಭಟ್ ....