Wednesday, 20 March 2013


ದಿನದ ಆಯಾಸ ಕಳೆದು
ಮುಸ್ಸಂಜೆಯ ಇಂಪಲಿ
ಪ್ರಕೃತಿಯ ಸೌಂದರ್ಯದಿ  
ಹೊಸ ಕನಸ ಹೆಣೆಯೋ ಆಸೆ


ನಮ್ಮ ನಿಮ್ಮ ನಡುವೆ ,
ಅಜಗಜಾಂತರ ವ್ಯತ್ಯಾಸ ,
ನಿಮ್ಮಲೊಂದು ಪುಟ್ಟ ಮನಸು
ನನ್ನಲೊಂದು ಪುಟ್ಟ ಮನಸು
ಅದರೊಳಗೆ  ಹೇಳಲಾಗದಸ್ಟು ವಿಷಯಗಳು ..
ಹೇಳಬೇಕೆನಿಸುವುದು ಆದರೂ ಹೇಳಲು
ಸಾಧ್ಯವಿಲ್ಲ ಅಂತಹ ಮನಸು ನಮ್ಮದು..
ಏಕೆಂದರೆ ನೋವನ್ನು ನಿಮಗೆ ನೀಡುವುದು  ಸರಿಯೇ ..

ಮನಸಿಗಾಗಿ ಬದುಕೋಣ
ನಾಳೆಗಾಗಿ ಕನಸು ಹೆಣೆಯೋಣ
ಈ  ದಿನದ ನೆನಪೊಂದಿಗೆ
ಸುಂದೆರ ಜೀವನಕ್ಕಾಗಿ ಕಾಯೋಣ ..
                  ವಿದಾಯ ಗೆಳೆಯರೇ , ಶುಭ ಸಂಜೆಯ ವಿದಾಯ...

ಕನಸು ಕಾಣಬೇಕು ಅನಿಸುವುದು
ಆದರೇನು ಮಾಡಲಿ ಹೇಳು
ಕನಸ ಭಾವನೆಗಳೆಲ್ಲ ಒಣಗಿ ಹೋಗಿದೆ
ಈಗ  ಸಂಜೆ ಪುನಹ ಆಗುತಿದೆ ..
ಏನು ಮಾಡಲಿ ಗೆಳಯ ..
ಮತ್ತೆ ಆ ತಂಪು ಆಕಾಶ ಕಂಡಾಗಲೆಲ್ಲ
ಮನಸು ಮತ್ತೆ  ಹಳೆಯ ದಿನಗಳತ್ತ ಸಾಗುವುದೇ
ಎಂಬ ಭಯ ......!!!!
 
 

ಎಲ್ಲರೂ ಎಷ್ಟು ಚೆಂದದ ಬದುಕು ನಡೆಸುತ್ತಿದ್ದರೆ ,
ನಮಗೇಕೆ ಸಂತಸದ ಜೀವನ ಸಿಕ್ಕಿಲ್ಲ , ಆದರೆ
ಈಗೀಗ ಅರ್ಥವಾಗುತ್ತಿದೆ , ದುಃಖ ಎಲ್ಲರ ಸೊತ್ತು
ಕಷ್ಟದಲ್ಲಿ ಸುಖ ಹುಡುಕೋ ಪ್ರಯತ್ನ ನಮ್ಮದು ...
 
         Malini Bhat

ನಾನು ಯಾರು ?ನಾನು ಯಾರೆಂದು ನನಗೆ ತಿಳಿಯದು
ಜೀವನದ ಪ್ರತಿ ಕ್ಷಣನು ಚಿಂತಿಸುವೆ
ಚೆಂದದ ಹೆಸರಿದೆ ನಿಜ ..
ವ್ಯಕ್ತಿತ್ವ ಒಳ್ಳೆಯದೇ ಅದೂ ನಿಜ ,
ನಮಗೆಲ್ಲ ಅರ್ಹತೆಯ ಮಾಪಕ
ಎಂತಾ ವಿಚಿತ್ರವೋ ತಿಳಿಯದು ..
ನಿಗೂಢ , ಆದರೆ ಸತ್ಯ ..
ಮಾನದಂಡ ಅವಶ್ಯವೇ ?..
ಹೀಗೆ ಇರುವುದೇ ... ಬದಲಾಗುವುದೇ..?

ಮನಸಾಗುವ ಜೀವನದಿ ಎಲ್ಲೋ ತಪ್ಪಿದೆ
ಮನಸು ಅರಿಯದೆ ತಲ್ಲಣಿಸಿದೆ ,
ಉಸಿರು ಬಿಗಿ ಹಿಡಿದಿದೆ ,
ಒಮ್ಮೆ ನನ್ನ ನಾನು ಮರೆಯಬೇಕು
ಭಾವನೆಗಳನ್ನು ತೊಡೆದು ಹಾಕಬೇಕು .
 
 
ದಿನ-ದಿನವೂ ದೂರ-ದೂರವಗುತಿದೆ
ಬದುಕು  ಬೇಸರಿಸಿದೆ
ಹೇಗೆ ಸಾಗಬೇಕು ,ಭವಿಷ್ಯವೇ  ಮುಳುಗಿದೆ
ಮಾತು -ಮೌನ ಎಲ್ಲವೂ ಸಾಕಾಗಿದೆ .
ಮನವೆಲ್ಲ ಹಾಯಾಗಬೇಕು..
 

    .....Malini Bhat.............
 
 
 
 
 
ಸ್ವಾರ್ಥ
 ಜೀವನದ ಪ್ರತಿ ಕ್ಷಣನು ಬಯಸುತ್ತೇವೆ
ನಮಗಾಗಿ ಒಂದು ಜೀವ ಇರಬೇಕು  
ಆದರೆ  ಯಾವ  ಸಮಯವೂ  ಯೋಚಿಸೋದಿಲ್ಲ
ಬೇರೆಯವರಿಗಾಗಿ  ಬದುಕಬೇಕು
ಎಂತಹ  ಸ್ವಾರ್ಥ ನೀವೇ ನೋಡಿ


  ಈ ಪ್ರಪಂಚ ಹೇಗಿದೆ ಎಂದರೆ ಇಲ್ಲಿ ಯಾರಿಗೂ ಯಾರು ಎಲ್ಲ , ಆದರೂ ನಾವುಗಳು ಹುಚ್ಚು ಸಂಬಂಧದ ನೆಪದಲ್ಲಿ, ಪ್ರೀತಿಯ ಬಯಕೆಯಲ್ಲಿ, ಭಾಂಧವ್ಯದ  ಸುಳಿಯಲ್ಲಿ ವ್ಯಾಮೋಹದ ಅಡಿಯಲ್ಲಿ , ಎಷ್ಟು ಸಲ ನಮಗೆ ನಾವು ಅಂದುಕೊಂಡಿಲ್ಲ , ಯಾರನ್ನೋ ನೋಡಿ ನಾವು ಹಾಗೆ ಇರಬೇಕು ಎಂದು , ಆದರೆ ಅವರ ಕಷ್ಟ ಅವರಿಗೆ ಗೊತ್ತು ಅವರುಗಳು ನಮ್ಮನ್ನು ನೋಡಿ ಏನೋ ಅಂದುಕೊಳ್ಳುತ್ತಾರೆ  , ಎಷ್ಟು ವಿಚಿತ್ರ ಅಷ್ಟೇ  ಸತ್ಯ .. ಪ್ರತಿಯೊಬ್ಬರೂ ಕಷ್ಟ   ಪಟ್ಟು ದಿನವಿಡೀ   ದುಡಿಯುತ್ತಾರೆ ,ಹಾಗೆ ಮನದಲ್ಲಿ ಸದಾ ನೆನೆಯುತ್ತಿರುತ್ತಾರೆ  ಒಂದು ಸುಂದೆರ್ ನೆಮ್ಮದಿ ಜೀವನ ಸಾಗಿಸಲು,  ಹಣವನ್ನು ಬೇಕಾದಷ್ಟು ಗಳಿಸುತ್ತಾರೆ ಆದರೆ ಅವರಿಗೆ ಆ ಜೀವನ ಗಗನ ಕುಸುಮವಾಗಿಯೇ  ಉಳಿದು ಬಿಡುತ್ತದೆ  , ಇಲ್ಲಿ ಕೇವಲ ಒಬ್ಬರ ಪಾತ್ರವಿರುವುದಿಲ್ಲ .. ಯಾವಾಗಲು  ಇಬ್ಬರಲ್ಲೂ ಹೊಂದಿಕೊಳ್ಳುವ ಗುಣ ಇರಬೇಕು .. ಎಲ್ಲ ಸಂದರ್ಭಗಳಲ್ಲೂ ,ಸಮಸ್ಯೆ ಬಂದಾಗ ತಾಳ್ಮೆಯಿಂದ ಬಿಡಿಸುವ ಜಾನ್ಮೆಯು ಇರಬೇಕು .. 

  ಈ ಪ್ರಪಂಚ ಹೇಗಿದೆ ಎಂದರೆ ಇಲ್ಲಿ ಯಾರಿಗೂ ಯಾರು ಎಲ್ಲ , ಆದರೂ ನಾವುಗಳು ಹುಚ್ಚು ಸಂಬಂಧದ ನೆಪದಲ್ಲಿ, ಪ್ರೀತಿಯ ಬಯಕೆಯಲ್ಲಿ, ಭಾಂಧವ್ಯದ  ಸುಳಿಯಲ್ಲಿ ವ್ಯಾಮೋಹದ ಅಡಿಯಲ್ಲಿ , ಎಷ್ಟು ಸಲ ನಮಗೆ ನಾವು ಅಂದುಕೊಂಡಿಲ್ಲ , ಯಾರನ್ನೋ ನೋಡಿ ನಾವು ಹಾಗೆ ಇರಬೇಕು ಎಂದು , ಆದರೆ ಅವರ ಕಷ್ಟ ಅವರಿಗೆ ಗೊತ್ತು ಅವರುಗಳು ನಮ್ಮನ್ನು ನೋಡಿ ಏನೋ ಅಂದುಕೊಳ್ಳುತ್ತಾರೆ  , ಎಷ್ಟು ವಿಚಿತ್ರ ಅಷ್ಟೇ  ಸತ್ಯ .. ಪ್ರತಿಯೊಬ್ಬರೂ ಕಷ್ಟ   ಪಟ್ಟು ದಿನವಿಡೀ   ದುಡಿಯುತ್ತಾರೆ ,ಹಾಗೆ ಮನದಲ್ಲಿ ಸದಾ ನೆನೆಯುತ್ತಿರುತ್ತಾರೆ  ಒಂದು ಸುಂದೆರ್ ನೆಮ್ಮದಿ ಜೀವನ ಸಾಗಿಸಲು,  ಹಣವನ್ನು ಬೇಕಾದಷ್ಟು ಗಳಿಸುತ್ತಾರೆ ಆದರೆ ಅವರಿಗೆ ಆ ಜೀವನ ಗಗನ ಕುಸುಮವಾಗಿಯೇ  ಉಳಿದು ಬಿಡುತ್ತದೆ  , ಇಲ್ಲಿ ಕೇವಲ ಒಬ್ಬರ ಪಾತ್ರವಿರುವುದಿಲ್ಲ .. ಯಾವಾಗಲು  ಇಬ್ಬರಲ್ಲೂ ಹೊಂದಿಕೊಳ್ಳುವ ಗುಣ ಇರಬೇಕು .. ಎಲ್ಲ ಸಂದರ್ಭಗಳಲ್ಲೂ ,ಸಮಸ್ಯೆ ಬಂದಾಗ ತಾಳ್ಮೆಯಿಂದ ಬಿಡಿಸುವ ಜಾನ್ಮೆಯು ಇರಬೇಕು .. 

ಈ ಕಲಬೆರಕೆ ದಂಗೆಯೋಳು
ಕಾಣದಂತೆ ಮಾಯವಾಗುವುದೇ?
ನಾವೇ ಕಟ್ಟಿಕೊಂಡ ಸಂಬಂಧಗಳು,
ಅಗೋಚರ ಶಕ್ತಿಯ ವಿಸ್ಮಯ ಆಟಗಳು ......... 
 

Monday, 18 March 2013

ಬಣ್ಣದ ಮಾತೆ ನೋವಿನ ಪ್ರಾರಂಭ 
ಬುದ್ಧಿಯ ಮಾತೆ ಗೆಲುವಿನ ಆರಂಭ 
ಮೋಹದ ಸೆಳೆತಕೆ ಕೊಡು ನೀ ಕಡಿವಾಣ 
ಜಾಣ್ಮೆಯ ಬದುಕಿಗೆ ಕೊಡು ನೀ ಪ್ರಾಧಾನ್ಯ 

.... ಮಾಲಿನಿ ಭಟ್ .................. 


ಮೌನ ಗೆರೆಯ ಪರಿಧಿಯ  ಒಳಗೆ
ಹನಿಗಳ ಗುಚ್ಹ ಅರಳಲು ನಿಂತಿದೆ
ಒಳಗಿನ ಭಾವನೆ ಬೆಳಕನು ನೋಡಲು ಕಾದಿದೆ
ಜೀವನ ನೌಕೆಗೆ ,ಬೇಲಿ  ಹೊರಗೆ
ಜೊತೆಯಲಿ ನಡೆಯುವ  ಬಾ
ಮಧುರ ಮನಸಿನ ಮಾತುಗಳ ಸರದಿಯಲಿ ...
 

 
............ಮಾಲಿನಿ ಭಟ್ .........................
 
 
 
ಗುರುತಿಲ್ಲದೆ ಗುರುತು ಹಿಡಿಯಲು ಸಾಧ್ಯವಿಲ್ಲ 
ಮನಸಿಲ್ಲದೇ ಭಾವನೆ ಬೆಳೆಯಲು ಸಾಧ್ಯವಿಲ್ಲ 
ನೀನಿಲ್ಲದೆ ಜೀವನ ಇಲ್ಲ ಎನ್ನುವುದು ಸುಳ್ಳು 
ಹಾಗೆಯೇ  ನೀ ಏನು ಅಲ್ಲ ಎನ್ನುವುದು ಸುಳ್ಳು 


..........ಮಾಲಿನಿ ಭಟ್ 
ನಿನ್ನಲ್ಲಿ ಇರುವುದು ಒಂದು ತಪ್ಪು 
ನನ್ನಲ್ಲೇ ಇರುವುದು ಹಲವು ತಪ್ಪು 
ತಿದ್ದಿಕೊಳ್ಳುವ ಗುಣ ಎಲ್ಲರಲೂ ಇರಲು 
ವಿಶ್ವವೇ ನಲಿಯುವುದು ಹಕ್ಕಿಯಾಗಿ. 


............ ಮಾಲಿನಿ ಭಟ್ ................. 

Sunday, 3 March 2013


ಮರಳಿನಿಂದ ಕಟ್ಟಿದ ಸುಂದರ ಗೂಡು
ಸಾಗರದ ಅಲೆಗೆಕೋ ಅಸೂಯೆ
ಪ್ರೀತಿಯ ತುಂಬಿದ ಅದರಲ್ಲಿ
ಸಂತೋಷವೇ ಅರಳಿತ್ತು,
ಮಾತ್ಸರ್ಯ ತುಂಬಿ ಹತ್ತಿರ ಬಂದಿತ್ತು
ಆ ಪ್ರೀತಿಗೆ ಸೋತು ಅಲ್ಲೆ ಕಾದಿತ್ತು.

……ಮಾಲಿನಿ ಭಟ್…………………

ಸುತ್ತಲೂ ಹೂಗಳಿಂದ ತುಂಬಿದ ಗಿಡವೇ 
ನಿನ್ನ ನೋಡಿ ಜಗವೇ ಬೆರಗಾಗಿದೆ 
ಕಾಯಿ ಹಣ್ಣಿಗೆಲ್ಲ  ನೀ ಮೂಲ 
ನಿನ್ನ ನೋಡಿ ಕಲಿಯೋದು ತುಂಬಾ ಉಳಿದಿದೆ . 

.....  ಮಾಲಿನಿ ಭಟ್ .................. 
ಬೀಸೋ ಗಾಳಿಗೆಕೋ  ಬೇಸರ 
ನಿನ್ನ ಮನಸು ಕದಡುದೆಂಬ ಚಿಂತೆಯು
ಎಲ್ಲವನ್ನು ಮನಸಿನಲ್ಲೇ ಹುದುಗಿಸಿ 
ಕೊನೆಯಲ್ಲಿ ನೋವು ಉಳಿವುದೆಂಬ ದುಗುಡವು .. 


................ ಮಾಲಿನಿ  ಭಟ್ .....................  


 
ಮನಸಿನ ಕನಸಲ್ಲಿ ಪ್ರೀತಿಯ ಬೆಳೆಸಿ 
ಕೊನೆಯುಸಿರು ಇರುವ ತನಕ ಉಳಿಸಿ 
ಎಂದೆಂದೂ ಚಿರವಾಗಿ ಬೆಳಕನ್ನ ನೀಡು 
ಅದುವೇ ಆಶಯ ನಮ್ಮದು 


.....ಮಾಲಿನಿ ಭಟ್ ...............

ಬಾಲ್ಯದೆಲೆಯ ಮೇಲೆ ಕೂಡಿಕೊಂಡ ಇಬ್ಬನಿ
ಹರಳಿನಂತೆ ತಬ್ಬಿ ಹಿಡಿದ ನಿನ್ನ ಪುಟ್ಟ ಮಂದಿರ
ಸೌಂದರ್ಯದಿ ಸಾಟಿ ನಿನಗೆ ಸಲ್ಲದು
ನಿನ್ನ ನೋಡಿ ಖುಷಿಯ ಪಡುವುದೇ ನಮ್ಮ ಭಾಗ್ಯವು.
 
 
 
...ಮಾಲಿನಿ ಭಟ್........................

ಮುಗಿಲಲಿ  ನೋಡು ಮೋಡದ ಸಾಲು
ಕರೆದಿವೆ ನಿನ್ನನು ಬಾ ಎಂದು ,
ಬರದೆಹೋದರೆ ನೋವನು ಸಹಿಸೆನು ,
ಕಾಡುತ ನೀನಗೆ ಶರಣಾಗಿ ..
 
 
..... ಮಾಲಿನಿ ಭಟ್...............
 
  
 

         ಅಂಬೇಡ್ಕರ್
 
 
ಸಂವಿಧಾನದ ರಚನೆಯ ರೂವಾರಿ
ಪ್ರಜೆಗಳ ಹಕ್ಕಿನ ಕಾರಣಕರ್ತ
ಕರ್ತವ್ಯವನು ನೆನಪಿಗೆ ತಂದು
ದೇಶಕೆ ಹೊಸದು ಕಾಣಿಕೆ ನೀಡಿದ .
 
.....ಮಾಲಿನಿ ಭಟ್..............
 
 
 

ಕಣ್ಣಿನ ಪರದೆಯಲಿ ಒಮ್ಮೆ ನೋಡು
ಅಡಗಿದೆ ನಿನ್ನ ಪ್ರತಿಬಿಂಬವು
ಸಾವಿಲ್ಲದ ನಯನದಲಿ
ನೀನುಳಿಯಬೇಕು  ಶಾಶ್ವತವಾಗಿ
 
 
...ಮಾಲಿನಿ ಭಟ್................

ಮೈ ಕೊಳೆಯ  ದಿನವೂ ತೊಳೆಯೋ  ನಾವುಗಳು
ಮನಸು ಕೊಳೆಗೆ ಸಿಲುಕಿ ರಾಡಿಯಾಗಿದೆ
ತಪ್ಪೆಂದು ಗೊತ್ತಿದ್ದೂ ಮಾಡೋ ತಪ್ಪುಗಳು
ಮೌಲ್ಯವಿಲ್ಲದ  ಉಪದೇಶದಂತೆ ....
 
 
.......ಮಾಲಿನಿ ಭಟ್....................

ಮನಸ ಇಚ್ಚೆ ದಾಟಿ ಬಂದು
ದೀನನಾಗಿ ಕುಳಿತು ಇಂದು
ಲೋಕದೆಡೆಗೆ ನೋಡೋ ನಯನ
ತಪ್ಪಿನರಿಕೆ ಕಂಡಿತೆ ನಿನ್ನಾತ್ಮಕೆ 
 
..........ಮಾಲಿನಿ ಭಟ್...........