Sunday, 28 July 2013

ಯುಗಾದಿ


ಹಿಂದೂಗಳ ಹಬ್ಬ, ಯುಗಾದಿಯ ಕಂಪು 
ನವ  ನವೀನತೆ ತುಂಬಲಿ ಎಲ್ಲರ ಮನದಲಿ 
ಚೈತ್ರದ ಸೆರಗಿಗೆ , ಉಲ್ಲಾಸವು ಮೊಳಗಲಿ 
ವರುಷ ಪೂರ್ತಿ ಸಂಭ್ರಮವು ಚಿಗುರಲಿ . 


.....  ಮಾಲಿನಿ ಭಟ್ .................. 

ಯಾರು ನೀ ದೂರದಿ ನಿಂತಿರುವೆ 
ಅರಿತು ನೀ ಮನಸಿಗೆ ಹೊಂದಿರುವೆ 
ದುಗುಡವೆಲ್ಲ  ನಿನ್ನಲಿ ಅರುಹಿರುವೆ 
ಕೇಳಿಯು  ನೀ ಮರೆತು ಹೊರಟಿರುವೆ 
 
..... ಮಾಲಿನಿ ಭಟ್ ............ 
 
ಪುಸ್ತಕವ ತಿರುವಿದಾಗಲೆಲ್ಲ 
ಅಮ್ಮ ಕಟ್ಟಿದ ಕನಸು ಕಂಡಿತು 
ಓದುತ್ತ ಓದುತ್ತ ಸಾರ್ಥಕ 
ಅಮ್ಮ ಕಟ್ಟಿದ ಕನಸು. 
 
 
.... ಮಾಲಿನಿ ಭಟ್ ...... 
ನಾಳೆಯು ನಮ್ಮದಾ?
ನಿನ್ನೆಯು  ನಮ್ಮದಾ?
ಎರಡು ತಿಳಿಯದ 
ಇಂದು ನಮ್ಮದಾ 
ವಿಧಿಯೇ ಮೌನದಿ 
ಕಾದಿರುವಾಗ 
ನಮ್ಮದು  ಏನೂ ಉಳಿದಿಲ್ಲ 
 
ಮಧುರ ನಾವೆಣಿಸದ ಬದುಕು 
ದೇವರ ಕೈಚಳಕ  ಸುಂದರ ಜೀವನ
ಕಷ್ಟ ಸುಖವೇ ಅದಕೆ ಮೆರಗು 
ತಾಳ್ಮೆಯೇ ಎಲ್ಲಕಿಂತ ಅದ್ಭುತ .. 
 
..... ಮಾಲಿನಿ ಭಟ್ ..... 

ಅರ್ಥವಾಗದ ಹೆಣ್ಣಿನ ಜೀವನ


ತೇವಗೊಂಡ ಕಣ್ಣಂಚಲಿ 
ಸೆರೆಹಿಡಿದಿರುವ ನೂರು ನಿಗೂಢ 
ನಿಲುವುಗಳೊಂದಿಗೆ ತನ್ನನ್ನೇ  ಅರಿತು 
ಅರಿಯದವರೊಂದಿಗೆ ಹೆಜ್ಜೆ ಇಡುವ 
ಹೆಣ್ಣಿನ ಮನಸಿಗೊಂದು ಪ್ರೀತಿಯ ವಂದನೆ . 


..... ಮಾಲಿನಿ ಭಟ್ ............. 
ಜೀವನ  ಜಾತ್ರೆಲಿ  ಹೊಸ ಹೊಸ ಮೆರಗು
ಅಳಿಯುದಾ ಉಳಿಯುದಾ ತಿಳಿಯದ ಚಿಗುರು
ಹೊಂದಿಕೆ ಎನ್ನುವುದು ನವ್ಯತೆ ಸೊಬಗು
ನಿಮ್ಮಲಿ ನೋಡಲು ನಮ್ಮಯ ಬದುಕು
ಆಗಲೇ ಧನ್ಯರು  ನಾವುಗಳೆಲ್ಲಾ ....


......  ಮಾಲಿನಿ ಭಟ್ ...........

ಇನಿಯ ನಿನ್ನ ಬರುವಿಕೆಗೆ

 

ದಾರಿ ಕಾಯುತ ಕಣ್ಣು ಸೋತವು
ಇನಿಯ ನೀನು ಬರದೆ ಉಳಿದೆ
ಮೌನದಲ್ಲೇ ನೆನಪು ಇಣುಕಿ
ಮನಸ  ಹದವ ಕಲಕಿತು
ಎಲ್ಲಿ ಸರಿದೆ ,ಧ್ವನಿಯು ಇಲ್ಲ
ಹೃದಯ ತುಂಬಿದೆ ದುಗುಡವು
.....  ಮಾಲಿನಿ ಭಟ್ ........

ಸಂಗಾತಿ

 
 
 ನೀನು ನನ್ನ ಉಸಿರು 
ನನ್ನ ಹೃದಯ ದೀಪವು
ಬೆಳಕ ಕೊಡುವ ಆಸೆ ನನ್ನಲಿ
ಚಿರವು ಆಗಲಿ ನಮ್ಮ ಪ್ರೀತಿಯು
 
 
...... ಮಾಲಿನಿ ಭಟ್ ......
 

ನಗುವ ಹಂಚುವಬಿಸೋ  ಗಾಳಿಗೇಕೋ  ಕಾತರ
ನಿನ್ನ ನೋಡೋ  ಆತರ
ಮನಸ  ಗರ್ಭದಿ ನಿನ್ನ ನೆರಳಿದೆ
ಹುದುಗಿ  ಬೆಳೆದಿದೆ ಸೊಂಪಿನೊಂದಿಗೆ
ಬಯಕೆಯೆಲ್ಲ ಚೆಲ್ಲಿದೆ ಗಂಧದೊಂದಿಗೆ
ನಗುವ ಹರಡಬೇಕಿದೆ  ನಮ್ಮ ಸುತ್ತಲೂ
ಅಳುವ ಕಂಗಳಲ್ಲೂ ಪ್ರೀತಿ ನೆಲೆಸಲು
ನಾವು ನೀವು ಎಲ್ಲರು  ಸ್ವಾರ್ಥ  ಮರೆಯುವ..


......  ಮಾಲಿನಿ ಭಟ್ .................... 

ಪ್ರೀತಿ .. ಮೌನ .... ಅಮೂಲ್ಯಹೃದಯವು ಅರಿತಿದೆ  ನಿನ್ನಯ ಮನಸನು
ಕಣ್ಣಿಗೆ ಕಾಣದು ಆದರೂ ಬೆರೆಯುದು
ಬದುಕಿನ ರಥದ ದಾರಿಯಲಿ
ಹತ್ತಿರವಿರಲಿ , ದೂರವೇ ಇರಲಿ
ತಿಳಿಯುವುದು  ಮನವು
ನಿನ್ನಯ ; ಮೌನದ  ಹಿಂದಿನ ಪ್ರೀತಿಯ ಸಾಗರ ..

.... ಮಾಲಿನಿ ಭಟ್ .......... 

ಅಮ್ಮನ ಮನಸೊಳಗೆ .........


 
ಮದುವೆಯಾದ ಮಗಳು ತವರಿನಿಂದ  ಹೊರಟು ನಿಂತಾಗ 
ಕಣ್ಣೀರು ಎಲ್ಲಿಹುದು ಚಿಮುಕಿತು  ಎನ್ನೆದೆಯ ಸೀಳಿ
ದಾರಿಗುಂಟವು  ನಿನ್ನದೇ ನೆನಪು , ನೀ  ನಡೆದ ಹೆಜ್ಜೆಗುರುತುಗಳು 
ಮನಸು ಕೇಳದೆ ಬಂದೆ ನಿನ್ನ ಜೊತೆಯಲಿ ಸನಿಹ
ಮೌನವಾಗಿಯೇ ದುಃಖ ಕಣ್ಣೀರು ....
ಒಂದು ಮಾತು  ಆಡಲಾಗದೆ ಎದೆಯು ಸೆಟೆದಿದೆ ,
ಮೊಗವು ತಿಳಿಸಿದೆ ನೋವಿನೆಳೆಯನು ,
ಹರಸಿದೆ ಮನಸು ... ಶುಭವಾಗಲೆಂದು .
 
 
 
.............  ಮಾಲಿನಿ ಭಟ್ ................
 

ನನ್ನಮ್ಮನ ದಣಿವಿರದ ಕೆಲಸ

 
ಸೂರ್ಯ ಏಳೋ ಮೊದಲು
ನನ್ನಮ್ಮನ  ದಿನಚರಿ ಶುರುವಾಗುವುದು
ಯಾವ ಗಡಿಯಾರವು ಇಲ್ಲದೇ
ತಟ್ಟನೇ ಎದ್ದೇಳುವ , ಸ್ವಲ್ಪವೂ ದಣಿವಿರದೆ
ಹೆಗಲಮೇಲಿನ ಬಾರ  ಹೊರುವ
ನನ್ನಮ್ಮ ನಿಜಕ್ಕೂ ಅಧ್ಬುತ   ।। ೧।।
 
ಮನೆ - ಮನದ ಕಸ ತೆಗೆದು
ಪ್ರೀತಿ ರಸವ ಚಿಮುಕಿಸಿ
ಮನೆಯನ್ನು ಅಂದಗೊಳಿಸಿ
ಹಣತೆಯ ಗೂಡಲ್ಲಿ ಬೆಳಕನ್ನ ಮೂಡಿಸಿ
ತಿಂಡಿ ಕಾರ್ಯ ಕೈಗೊಳ್ಳೋ
ನನ್ನಮ್ಮ ನಿಜಕ್ಕೂ ಅಗೋಚರಶಕ್ತಿ   ।।೨।।
 
ಎಲ್ಲರಿಗೂ  ಪ್ರೀತಿಯಿಂದ ತುತ್ತ ಕೊಡೊ
ಕೊನೆಯಲ್ಲಿ ತಿಂಡಿ ತಿಂದಲೋ ಊಟ ಮಾಡಿದಳೋ
ಅರಿಯುವವರು ಒಬ್ಬರೂ ಇಲ್ಲ
ಎಲ್ಲರಿಗಾಗಿ ಉಸಿರನ್ನು  ಹಸಿರಾಗಿಸಿ ದುಡಿವ
ಕರುಣೆಯ ಮೂರ್ತಿಯಾದ
ನನ್ನಮ್ಮ ನಿಜಕ್ಕೂ  ಒಂದು ನಿಗೂಢ ನಿಧಿ   ।।೩।।
 
 
ಪ್ರೀತಿಯಿಂದ ಎಲ್ಲ ನೋವ ಸಹಿಸುತ
ಮಮತೆಯಿದ ಲಾಲಿಸುವ
ಕಣ್ಣಿರ ಮಡುವಿನಲೂ ಸ್ಪಂದಿಸುವ
ತನ್ನ ಉಸಿರನ್ನೇ ನೀಡಿರುವ
ಅವಿರತ ಪರಿಶ್ರಮ ಪಡುವ
ನನ್ನಮ್ಮ ನಿಜಕ್ಕೂ  ಒಂದು ಪವಾಡ ।।೪।।
 
 
ನಿಸ್ವಾರ್ಥ ಸೇವೆ ಮಾಡೋ
ಯಾರಿಗೂ ಕೆಡಕು ಮಾಡದ
ಎಲ್ಲರಲೂ ಸಂತೋಷ ನೋಡುವ
ನನ್ನಮ್ಮನ ನಗುಮುಖದ
ಹಿಂದಿರುವ ಅಳಿಸಲಾಗದ ನೋವು
ನಿಜಕ್ಕೂ ಆ ಗಾಳಿಯಷ್ಟೇ ಮೌನ ।।೫।।
 
 
ನಿದ್ದೆ ಮಾಡುವ ಕಂಗಳು
ತೇವಗೊಂಡಿರುವುದು ನಿಜ
ನೂರು ಹೃದಯ ವೇದನೆ
ಇರುವುದು ಅಷ್ಟೇ ನಿಜ
ಕಲ್ಪನೆಗೂ ಎಟುಕದ ನನ್ನ್ನಮ್ಮ
ನಿಜಕ್ಕೂ ಬ್ರಹ್ಮಸೃಷ್ಟಿಯ ಅವಿಸ್ಮರಣೀಯ ಕೊಡುಗೆ  ।।೬।।
 
 
 
............. ಮಾಲಿನಿ ಭಟ್ .................