Sunday 28 July 2013

ನನ್ನಮ್ಮನ ದಣಿವಿರದ ಕೆಲಸ

 
ಸೂರ್ಯ ಏಳೋ ಮೊದಲು
ನನ್ನಮ್ಮನ  ದಿನಚರಿ ಶುರುವಾಗುವುದು
ಯಾವ ಗಡಿಯಾರವು ಇಲ್ಲದೇ
ತಟ್ಟನೇ ಎದ್ದೇಳುವ , ಸ್ವಲ್ಪವೂ ದಣಿವಿರದೆ
ಹೆಗಲಮೇಲಿನ ಬಾರ  ಹೊರುವ
ನನ್ನಮ್ಮ ನಿಜಕ್ಕೂ ಅಧ್ಬುತ   ।। ೧।।
 
ಮನೆ - ಮನದ ಕಸ ತೆಗೆದು
ಪ್ರೀತಿ ರಸವ ಚಿಮುಕಿಸಿ
ಮನೆಯನ್ನು ಅಂದಗೊಳಿಸಿ
ಹಣತೆಯ ಗೂಡಲ್ಲಿ ಬೆಳಕನ್ನ ಮೂಡಿಸಿ
ತಿಂಡಿ ಕಾರ್ಯ ಕೈಗೊಳ್ಳೋ
ನನ್ನಮ್ಮ ನಿಜಕ್ಕೂ ಅಗೋಚರಶಕ್ತಿ   ।।೨।।
 
ಎಲ್ಲರಿಗೂ  ಪ್ರೀತಿಯಿಂದ ತುತ್ತ ಕೊಡೊ
ಕೊನೆಯಲ್ಲಿ ತಿಂಡಿ ತಿಂದಲೋ ಊಟ ಮಾಡಿದಳೋ
ಅರಿಯುವವರು ಒಬ್ಬರೂ ಇಲ್ಲ
ಎಲ್ಲರಿಗಾಗಿ ಉಸಿರನ್ನು  ಹಸಿರಾಗಿಸಿ ದುಡಿವ
ಕರುಣೆಯ ಮೂರ್ತಿಯಾದ
ನನ್ನಮ್ಮ ನಿಜಕ್ಕೂ  ಒಂದು ನಿಗೂಢ ನಿಧಿ   ।।೩।।
 
 
ಪ್ರೀತಿಯಿಂದ ಎಲ್ಲ ನೋವ ಸಹಿಸುತ
ಮಮತೆಯಿದ ಲಾಲಿಸುವ
ಕಣ್ಣಿರ ಮಡುವಿನಲೂ ಸ್ಪಂದಿಸುವ
ತನ್ನ ಉಸಿರನ್ನೇ ನೀಡಿರುವ
ಅವಿರತ ಪರಿಶ್ರಮ ಪಡುವ
ನನ್ನಮ್ಮ ನಿಜಕ್ಕೂ  ಒಂದು ಪವಾಡ ।।೪।।
 
 
ನಿಸ್ವಾರ್ಥ ಸೇವೆ ಮಾಡೋ
ಯಾರಿಗೂ ಕೆಡಕು ಮಾಡದ
ಎಲ್ಲರಲೂ ಸಂತೋಷ ನೋಡುವ
ನನ್ನಮ್ಮನ ನಗುಮುಖದ
ಹಿಂದಿರುವ ಅಳಿಸಲಾಗದ ನೋವು
ನಿಜಕ್ಕೂ ಆ ಗಾಳಿಯಷ್ಟೇ ಮೌನ ।।೫।।
 
 
ನಿದ್ದೆ ಮಾಡುವ ಕಂಗಳು
ತೇವಗೊಂಡಿರುವುದು ನಿಜ
ನೂರು ಹೃದಯ ವೇದನೆ
ಇರುವುದು ಅಷ್ಟೇ ನಿಜ
ಕಲ್ಪನೆಗೂ ಎಟುಕದ ನನ್ನ್ನಮ್ಮ
ನಿಜಕ್ಕೂ ಬ್ರಹ್ಮಸೃಷ್ಟಿಯ ಅವಿಸ್ಮರಣೀಯ ಕೊಡುಗೆ  ।।೬।।
 
 
 
............. ಮಾಲಿನಿ ಭಟ್ .................
 

No comments:

Post a Comment