Thursday, 30 August 2012

ಕಾರಣವ ಹೇಳಿ ಹೋಗು

 
 
ಕಾರಣವ ಹೇಳದೆ ದೂರಾದೆ ಗೆಳಯ
ಕಾರಣವ ಹೇಳಿಯೇ ಹೋಗು
ನಿನಗಾಗಿ ಕಟ್ಟಿದೆ ನನ್ನ ಮನಸಲಿ ಅರಮನೆಯನ್ನು
ಒಮ್ಮೆ ಬಂದು ನೋಡು ಸೌಧವು ಖಾಲಿಯಾಗಿದೆ
 
ನಾನಿಟ್ಟ ಹೆಜ್ಜೆಯ ಗುರುತಿನ್ನು ಮಾಸಿಲ್ಲ
ಸಾಗರಕೂ ನಮ್ಮ ನೋಡಿ ಪ್ರೀತಿ
ನಿನಗೇಕೆ ನನ್ನ ಮೇಲೆ ಈ ಪರಿಯ ಕೋಪ
ಒಮ್ಮೆ ಬಂದು ನೋಡು ನೀನಿಲ್ಲದೆ ಸೊರಗಿರುವುದನ್ನು
 
ಮರಗಳಿಂದು ಮರೆತಿಲ್ಲ ನಾವಾಡಿದ ಮಾತನು
ಗಾಳಿಗೂ ನಮ್ಮ ಮೇಲೆ ಅನುರಾಗವು
ನಿನ್ನ ಮನಸಿಗೆ ನಾನಿಂದು ದೂರದ ತಾರೆ
ಒಮ್ಮೆ ಬಂದು ನೋಡು ನನ್ನ ಕಣ್ಣುಗಳು ನಿನಗಾಗಿ ಕಾದಿದೆ
 
ಇಂಚರವು  ಆಲಿಸಿದೆ ನಾವು ಗುನುಗಿದ ಹಾಡನು
ಮೋಡಗಳು ಹನಿ ಹನಿ ಮಳೆಬಿಂದು ಚಿಮುಕಿಸಿದೆ
ನೀ ಮಾತ್ರ ಹೇಳದೆ ನನ್ನ ಆಗಲಿದೆ
ಒಮ್ಮೆ ಬಂದು ನೋಡು ನನ್ನ ಹೃದಯ ನಿನಗಾಗಿ ಕಾದಿದೆ 
 
 
......Malini Bhat..........
 
 

ಹೀಗಿರಬೇಕು ನನ್ನ ಇನಿಯಹೀಗಿರಬೇಕು ನನ್ನ ಇನಿಯ
ಕನಸುಗಳಿಂದ ಎದ್ದ ರಾಜಕುಮರ
ಮನಸುಗಳ ಮಧುರ ಅಕ್ಷಯಪಾತ್ರೆ
ಪ್ರೀತಿಗಾಗಿಯೇ ಜನಿಸಿಬಂದವ

ನಾ ಹೆಜ್ಜೆ ಇತ್ತ ಕಡೆ ನನ್ನವನ ಹೆಜ್ಜೆಯಿರಬೇಕು
ಕನಸಿಗೆ ಉಸಿರನ್ನ ನೀಡಬೇಕು
ದುಃಖಕ್ಕೆ ಹೆಗಲಾಗಬೇಕು
ಪ್ರೀತಿಗೆ ನನ್ನವನೇ ಆದರ್ಶವಾಗಬೇಕು

ಕಾಲದ ಪರೀಕ್ಷೆಗೆ ಎದೆಗುಂದಬಾರದು
ಕಣ್ಣಿನ ನೋಟದಲಿ ತಪ್ಪು ಇಣುಕಬಾರದು
ಮನದ ಮೂಲೆಯಲಿ ಸಂಶಯ ಸುಳಿಯಬಾರದು
ಅವನು ನನ್ನವನು ನನ್ನ ಪ್ರೀತಿಯ ಇನಿಯ

ಗುರು ಹಿರಿಯರ ಗೌರವಿಸಬೇಕು
ಬಡವರಿಗೆ ಸಹಕರಿಸಬೇಕು
ಮನೆಗೆ ಅಡಿಗಲ್ಲಾಗಬೇಕು
ತಂದೆ ತಾಯಿಯ ಮುದ್ದಿನ ಮಗನಾಗಬೇಕು

ದುಸ್ಟ ಚಟಗಳಿಗೆ ಸೋಕಬಾರದು
ಕಷ್ಟ ಸುಖದಲ್ಲಿ ಜೊತೆನಿಲ್ಲಬೇಕು
ಬಣ್ಣ ಹೇಗಿರಲಿ ಮನಸು ಸುಂದರವಾಗಿರಲಿ
ಅವನು ನನ್ನವನಾಗಬೇಕು

....ಮಾಲಿನಿ ಭಟ್ ....

Friday, 24 August 2012

ಎಚ್ಚರದಿ ಕಾಲಿಡು

ಬುದ್ಧಿ ಬರೋ ಮೊದಲು ಅಂಧನಾಗಬೇಡ
ಅಂಧನಾಗಿ ಜೀವನವ ಕಳೆದುಕೊಳ್ಳಬೇಡ
ತಿಳುವಳಿಕೆ ನಿನ್ನದೇ ಪರಿಶ್ರಮವು ನಿನ್ನದೇ
ನಿನ್ನ ಬದುಕ ನೀ ರೂಪಿಸಿಕೋ

Wednesday, 22 August 2012

ಸ್ಫೂರ್ತಿ ನೀ


 
ಕಣ್ಣಿನ ವಿಹಾರದಲಿ , ಮನಸಿನ ಬಣ್ಣವಿದೆ
ಮನಸಿನ ಬಣ್ಣದಲಿ ಹೃದಯದ ಪಲ್ಲವಿಯಿದೆ
ಹೃದಯದ ಪಲ್ಲವಿಯಲಿ ಚಿಂತನೆಯ ಬೆಳಕಿದೆ
ಚಿಂತನೆಯ ಬೆಳಕಲ್ಲಿ ನಿನ್ನ ಸ್ಪೂರ್ತಿಯ ಹನಿಯಿದೆ
 
   ....ಮಾಲಿನಿ ಭಟ್ ............

ರಕ್ಷಾ ಬಂಧನ

ಜೊತೆಯಲ್ಲಿ ಯಾರಿಲ್ಲ ಎಂದು ಅಂಜಿಲ್ಲ ನಾನು
ನನಗಾಗಿ ನೀನಿರುವೆ ಅಣ್ಣ ...
ರಕ್ಷಣೆಗಾಗಿ ನಿಂತಿರುವೆ ನೀ
ಪ್ರೀತಿಯಿಂದ ಸಲಹುವ ನನ್ನ ಪ್ರೀತಿಯ ಅಣ್ಣ
ಮನಸಲ್ಲಿ ನಿನಗಾಗಿ ಸುಂದರ ಕನಸಿದೆ
ನಾವಿಬ್ಬರು ಬೆಳೆದ ಅಳಿಸದ ಗುರುತಿದೆ
ಹಂಚಿಕೊಂಡ ಸುಖ ದುಃಖದ ಪಾಠವಿದೆ
ಸದಾ ನನಗಾಗಿ ಕನಸ ನೇಯ್ದ ನನ್ನ ಪ್ರೀತಿಯ ಅಣ್ಣ
ನಾ ಕಟ್ಟಿಲ್ಲ ನಿನಗೆ ಯಾವ ರಕ್ಷಣೆಯ ಹೊಣೆ
ನಿನ್ನಲ್ಲಿ ಪ್ರೀತಿ  ಇಲ್ಲವೆಂದಲ್ಲ , ತೋರಿಸಲಾಗದು
ಒಂದು ದಾರದಿಂದ ಬಂಧವನ್ನು ಹೇಳಲಾಗದು
ನಿನಗಾಗಿ ಏನನ್ನು ಕೊಡಲಿ ನನ್ನ ಪ್ರೀತಿಯ ಅಣ್ಣ
ನೀನರಿತಿರುವೆ ಎಲ್ಲವನು , ಮೌನವಾಗಿ
ನಿನ್ನ ಜೊತೆ ನಿಲ್ಲುವೆ ನಿನ್ನ ಪ್ರೀತಿಯ ತಂಗಿಯಾಗಿ
ನೀ  ಮರೆಯಲಾರೆ ಎಂದಿಗೂ , ಕಾಲ ಹೇಳಲಾಗದು
ಪ್ರತಿದಿನವೂ ನಿನ್ನ ಪ್ರೀತಿಗೆ ಸ್ವಾರ್ಥಿ ನಾ ಅಣ್ಣ ..
       ...ಮಾಲಿನಿ ಭಟ್ ..............

ಮೌನ ಮಾತಾಗುವ ಮೊದಲು


ನಿನ್ನ ಕಣ್ಣ ಕುಸುಮದಲ್ಲಿ , ಆಳವಾಗಿ ಮೂಡಿದೆ
ನನ್ನ - ನಿನ್ನ ಪ್ರೀತಿ ಮೊಗ್ಗು ಹೂವಿನಂತೆ ಅರಳಿದೆ

ಒಮ್ಮೆ ಮುನಿಸು , ಒಮ್ಮೆ ಒಲವು
ಪ್ರೀತಿಯೊಂದೆ ನಮ್ಮ ಉಸಿರು

ಸುದಿರ್ಘವಾಗಿ ಬಾಳಿ ಬದುಕೋ ಮನದ ಇಂಗಿತ
ಪುಟ್ಟ ಪುಟ್ಟ ಆಸೆ ಹೆಣೆದು ನವಿರು ತಂದಿತು

ಮೌನವಾಗಿ ತಬ್ಬಿ ಕನಸು ಕಂಡೆವು
ನಿನ್ನ ಸ್ಪರ್ಶ ಆಲಿಂಗನ ಮಧುರ ಕ್ಷಣವು

ಹೃದಯದೀಪ ನಿನ್ನ ಆಗಮನಕೆ ಕಾದು ಕುಳಿತಿದೆ
ಸಮಯ ಮೀರದೆ ಬಂದು ತಲುಪು

ನನ್ನ ಹೃದಯದ ಮೌನ ಮಾತಿಗೆ
ಮೌನ ಮಾತಾಗುವ ಮೊದಲು ಪ್ರೀತಿ ನಿನಗೆ ಕಾದಿದೆ ...         ಮಾಲಿನಿ ಭಟ್


Friday, 17 August 2012

ಬಡವನ ಭಾಗ್ಯ


 
 
ರಾತ್ರಿಯ ಕನಸು ಮಬ್ಬಲಿ ಕವಿಯಿತು
ಚಿಂತೆಯ ಸಾರ ಜೀವನ ಬಿಗಿಯಿತು
ಹೆಂಡತಿ ಮಕ್ಕಳ ಕುಂದಿದ ಮೊಗವು
ತಟ್ಟನೆ ನೆನಪಲಿ ಬೆಂದಿತು ಹೃದಯವು
 
ಪ್ರೀತಿಯ ಬೆಳಕು ಬಡವನಲಿ
ಉದಾರ ಮನಸು ಭಾವದಲಿ
ಮನೆಯಲಿ ತುಂಬಿದ ದಾರಿದ್ರ್ಯ ಜೊತೆಯಲಿ
ಎಲ್ಲಾಸೇರಿತು ಮೂಲೆಯಲಿ
 
ಹಸಿವನು ನೀಗಲು ಪಟ್ಟಿಹ ಕಷ್ಟ
ಬೆವರ್ಲಿ ಸಾರಿದೆ ನೋವಿನ ಇಷ್ಟ
ಮಗುವಿನ ಕಣ್ಣಿನ ಆಸೆಯ ತುಡಿತ
ಪತ್ನಿಯ ಸೊರಗಿದ ದೇಹದ ಬಡಿತ
 
ದುಃಖವು ಎದೆಯ ಸಿಡಿದಿತ್ತು
ಬಡತನ ನೋವ ಹರಡಿತ್ತು
ಜೊತೆಯಲಿ ನಿಲ್ಲದ ಬಂಧುಗಳು
ಸ್ವಾರ್ಥವೇ ಸಾಧಿಸೋ ಜನರುಗಳು
 
ಹಣವೇ ಎಲ್ಲವೂ ಎಂದಿತ್ತು
ಬಡತನ ಪ್ರೀತಿಯ ಮುದುದಿತ್ತು
ಪ್ರೀತಿಯ ಮಗುವ ಕನಸು ಕಮರಿತ್ತು
ಆಶಯವೊಂದು  ಆಗಸದಲ್ಲಿ
 
ಬಡತನ ಭಾಗ್ಯವ ಬೆಳಗಿತಾ  ನೋಡು
ಸೂರ್ಯನು ಉದಯಿಸಿದಾಕ್ಷಣದಿಂದ
ಚಿಂತೆಯು ಕಳೆದು ಚಿತ್ತಾರ ಮೂಡಲಿ
ಬಡವನ ಮುಖದಲಿ ಸಂತಸ ಬೆಳಗಲಿ ..
 
 
...ಮಾಲಿನಿ ಭಟ್ .........
 
 

Monday, 13 August 2012

ಮತ್ತೆ ಮತ್ತೆ ನೆನಪಾಗುತಿದೆ
ಮೆಲುನುಡಿಯು ಕರೆದಂತಾಗುತಿದೆ
ಮಳೆಯ ಹನಿಯೊಂದಿಗೆ ಜಾರುತಿದೆ
ನಿಲ್ಲು ಗೆಳಯ ನಿಲ್ಲು ನನ್ನ ಅಗಲದಿರು ..
 
   ....ಮಾಲಿನಿ ಭಟ್ .............
ಗೋಕುಲದ ಕುವರ ನೀ
ಗೋವುಗಳ ಪಾಲಕ ನೀ
ರಾಕ್ಷಸರಿಗೆ ಸ್ವಪ್ನ ನೀ
ಪ್ರೀತಿಗೆ ಸರದಾರ ನೀ
 
..ಜನ್ಮಾಷ್ಟಮಿ ಯ ಶುಭಾಶಯಗಳು ....
     ....ಮಾಲಿನಿ ಭಟ್.........
 
ಕನಸುಗಳು ಸಂದಿಸುವ ಆ ಸಮಯದಲ್ಲಿ
ಬೆಳ್ಳಿ ಬೆಳದಿಂಗಳು ಹೊತ್ತ ಆ  ಬಾನಿನಲ್ಲಿ
ಮೆಲ್ಲನೆ ಇಣುಕುತಿತ್ತು ನಗುವಿನ ಮುಖದಲ್ಲಿ
ಗೆಳತಿ ನೀ ನೀಡಿದ ಹರ್ಷಧಾರೆಯ ರಸಜೇನು
 
 
......ಮಾಲಿನಿ ಭಟ್ ....

ಸ್ವತಂತ್ರ ಭಾರತ


 
ಸ್ವಾತಂತ್ರ್ಯದ ಜ್ಯೋತಿ ಹರಡಿತು  ಅಂದು
ದೇಶಕಾಗಿ ಸಾಲು ನಿಂತರು ಜನರು
ದಾಸ್ಯ ಬದುಕಲಿ ನೊಂದು ಹೋದರು
ಮಾತೃಭೂಮಿಗಾಗಿ ಹಗಲಿರುಳು ಹೋರಾಟಗೈದರು
ಹೆಸರು ಪಡೆದರು ಹಲವರು
ಮರೆಯಲ್ಲಿ ಮರೆಯಾಗಿ ಹೋದರು ಅಸಂಖ್ಯಾತ ಜನರು
ಎಲ್ಲರ ಪರಿಶ್ರಮದಿ ಭಾರತ ಎದ್ದುನಿಂತಿತು
 
...ಎಲ್ಲರಿಗೂ ಸ್ವಾತಂತ್ರೋತ್ಸವದ  ಶುಭಾಶಯಗಳು .....
 

Thursday, 2 August 2012

ರಕ್ಷಾ ಬಂಧನ

 
 
ಜೊತೆಯಲ್ಲಿ ಯಾರಿಲ್ಲ ಎಂದು ಅಂಜಿಲ್ಲ ನಾನು
ನನಗಾಗಿ ನೀನಿರುವೆ ಅಣ್ಣ ...
ರಕ್ಷಣೆಗಾಗಿ ನಿಂತಿರುವೆ ನೀ
ಪ್ರೀತಿಯಿಂದ ಸಲಹುವ ನನ್ನ ಪ್ರೀತಿಯ ಅಣ್ಣ
 
ಮನಸಲ್ಲಿ ನಿನಗಾಗಿ ಸುಂದರ ಕನಸಿದೆ
ನಾವಿಬ್ಬರು ಬೆಳೆದ ಅಳಿಸದ ಗುರುತಿದೆ
ಹಂಚಿಕೊಂಡ ಸುಖ ದುಃಖದ ಪಾಠವಿದೆ
ಸದಾ ನನಗಾಗಿ ಕನಸ ನೇಯ್ದ ನನ್ನ ಪ್ರೀತಿಯ ಅಣ್ಣ
 
ನಾ ಕಟ್ಟಿಲ್ಲ ನಿನಗೆ ಯಾವ ರಕ್ಷಣೆಯ ಹೊಣೆ
ನಿನ್ನಲ್ಲಿ ಪ್ರೀತಿ  ಇಲ್ಲವೆಂದಲ್ಲ , ತೋರಿಸಲಾಗದು
ಒಂದು ದಾರದಿಂದ ಬಂಧವನ್ನು ಹೇಳಲಾಗದು
ನಿನಗಾಗಿ ಏನನ್ನು ಕೊಡಲಿ ನನ್ನ ಪ್ರೀತಿಯ ಅಣ್ಣ
 
ನೀನರಿತಿರುವೆ ಎಲ್ಲವನು , ಮೌನವಾಗಿ
ನಿನ್ನ ಜೊತೆ ನಿಲ್ಲುವೆ ನಿನ್ನ ಪ್ರೀತಿಯ ತಂಗಿಯಾಗಿ
ನೀ  ಮರೆಯಲಾರೆ ಎಂದಿಗೂ , ಕಾಲ ಹೇಳಲಾಗದು
ಪ್ರತಿದಿನವೂ ನಿನ್ನ ಪ್ರೀತಿಗೆ ಸ್ವಾರ್ಥಿ ನಾ ಅಣ್ಣ ..
 
       ...ಮಾಲಿನಿ ಭಟ್ ..............