Saturday 17 August 2013

ಉಂಗುರ



ನಾಚುತಿಹುದು ಬೆರಳು ,
ಉಂಗುರವ ತೊಡಿಸುವಾಗಿನ  ಬೆರಗು ,
ಬರಿಯ  ಉಂಗುರವಲ್ಲ ,
ಎರಡು ಹೃದಯಗಳ ಮಿಲನ ,
ಕುತೂಹಲವು ಬೇರೆ ,
ನವಿರಾದ ಸೆಳೆತ ಬೇರೆ .


... ಮಾಲಿನಿ ಭಟ್ ....
ಗುರಿಯು ಮುಟ್ಟದ ಮಿಡಿತವು
ನನ್ನಲೇನೋ ಆತಂಕವು
ಚಿಗುರು ನಕ್ಕಿದೆ ನನ್ನ ನೋಡಿ
ಮನಸು ಸೋತಿದೆ ಮೌನದಲ್ಲಿ

.... ಮಾಲಿನಿ ಭಟ್ ...........

ಅಣ್ಣನೆಂಬ ಶಕ್ತಿ


 
 
ಪ್ರೀತಿ ಎದೆಯಲಿ , ಹೃದಯ ಹಾರೈಸಿದೆ
ಸದಾ ಸುಖಿಯಾಗಿರು ,ನನ್ನ   ಪ್ರೀತಿಯ ಅಣ್ಣ
 
 
ಮನಸಿನ ಭಾವನೆಯಲಿ , ಕಾದು  ಕುಳಿತಿದೆ
ತೋರ್ಪಡಿಸಲಾಗದ ಮಾತು , ನನ್ನ ಪ್ರೀತಿಯ ಅಣ್ಣ
 
ನೆನಪು ಮರುಕಳಿಸುವುದು , ಸವೆದಿರುವ ದಾರಿಯಲಿ
ಬೆಳಕಾಗಿ ಬರುವೆ,  ನನ್ನ ಪ್ರೀತಿಯ ಅಣ್ಣ
 
 
ರಕ್ಷಣೆಯ ಹೊಣೆಯನ್ನು ಹೊತ್ತಿರುವೆ , ದಾರದಿಂದ ಬಂಧಿಸಲಾರೆ
ಮನಸೇ ನಿನ್ನಲಿರುವುದು ,ನನ್ನ ಪ್ರೀತಿಯ ಅಣ್ಣ
 
 
ಜೊತೆಯಿಲ್ಲ ನಾನೀಗ , ದೂರ ಉಳಿದಿರುವೆ
ಶುಭವಾಗಲಿ  ನನ್ನಣ್ಣಗೆ  ಸದಾ
 
 
ಹೊಳೆಯುವ ನಿನ್ನ ಮುಖವ ನೋಡಿ ಸಂತಸಗೊಳ್ಳುವೆ
 ನಗು - ನಗುತಾ  ಇರು ನನ್ನ ಪ್ರೀತಿಯ ಅಣ್ಣ .
 
 
 
.............  ಮಾಲಿನಿ ಭಟ್
 
 

ನಾ ತೆಂಗಿನಮರ



ಆಗಸದೆತ್ತರ  ಆ ಮರವು
ಚೆಲುವನು ತುಂಬಿದ ನಂದನವು
ಹೆಡೆಯನು ಬಿಚ್ಚಿ ಅಂದವ ಅರಳಿಸಿ
ಮೈ ಉಮ್ಬಿ ನಿಂತಿದೆ  ಈ ಮರವು
ಎಳ ನೀರಿನ ಅಮೃತ ನೀಡಿ
ಅಡುಗೆಯ ರುಚಿಗೆ ಬಲಿತಿರೊ ಫಸಲು
ಬಿದ್ದ ಹೆಡೆಯು  ಚಪ್ಪರವಾಗಿ
ಉಳಿದ ಸಿಪ್ಪೆ ನಾರುಗಳು ಉರುವಲಾಗಿ
ಕರಾವಳಿಯ ಜೀವದ ಸೆಲೆಯು
ಬದುಕಿಗೆ ದಾರಿಯ ನೀಡಿದ ಮರವು
ಅದುವೇ ನಿಮ್ಮ ಪ್ರೀತಿಯ  ಮರವು ....

.... ಮಾಲಿನಿ ಭಟ್ ......

ಪ್ರೀತಿ .. ಮೌನ .... ಅಮೂಲ್ಯ



ಹೃದಯವು ಅರಿತಿದೆ  ನಿನ್ನಯ ಮನಸನು
ಕಣ್ಣಿಗೆ ಕಾಣದು ಆದರೂ ಬೆರೆಯುದು
ಬದುಕಿನ ರಥದ ದಾರಿಯಲಿ
ಹತ್ತಿರವಿರಲಿ , ದೂರವೇ ಇರಲಿ
ತಿಳಿಯುವುದು  ಮನವು
ನಿನ್ನಯ ; ಮೌನದ  ಹಿಂದಿನ ಪ್ರೀತಿಯ ಸಾಗರ ..

.... ಮಾಲಿನಿ ಭಟ್ ..........

ನನ್ನಮ್ಮನ ದಣಿವಿರದ ಕೆಲಸ

 

 
ಸೂರ್ಯ ಏಳೋ ಮೊದಲು
ನನ್ನಮ್ಮನ  ದಿನಚರಿ ಶುರುವಾಗುವುದು
ಯಾವ ಗಡಿಯಾರವು ಇಲ್ಲದೇ
ತಟ್ಟನೇ ಎದ್ದೇಳುವ , ಸ್ವಲ್ಪವೂ ದಣಿವಿರದೆ
ಹೆಗಲಮೇಲಿನ ಬಾರ  ಹೊರುವ
ನನ್ನಮ್ಮ ನಿಜಕ್ಕೂ ಅಧ್ಬುತ   ।। ೧।।
 
ಮನೆ - ಮನದ ಕಸ ತೆಗೆದು
ಪ್ರೀತಿ ರಸವ ಚಿಮುಕಿಸಿ
ಮನೆಯನ್ನು ಅಂದಗೊಳಿಸಿ
ಹಣತೆಯ ಗೂಡಲ್ಲಿ ಬೆಳಕನ್ನ ಮೂಡಿಸಿ
ತಿಂಡಿ ಕಾರ್ಯ ಕೈಗೊಳ್ಳೋ
ನನ್ನಮ್ಮ ನಿಜಕ್ಕೂ ಅಗೋಚರಶಕ್ತಿ   ।।೨।।
 
ಎಲ್ಲರಿಗೂ  ಪ್ರೀತಿಯಿಂದ ತುತ್ತ ಕೊಡೊ
ಕೊನೆಯಲ್ಲಿ ತಿಂಡಿ ತಿಂದಲೋ ಊಟ ಮಾಡಿದಳೋ
ಅರಿಯುವವರು ಒಬ್ಬರೂ ಇಲ್ಲ
ಎಲ್ಲರಿಗಾಗಿ ಉಸಿರನ್ನು  ಹಸಿರಾಗಿಸಿ ದುಡಿವ
ಕರುಣೆಯ ಮೂರ್ತಿಯಾದ
ನನ್ನಮ್ಮ ನಿಜಕ್ಕೂ  ಒಂದು ನಿಗೂಢ ನಿಧಿ   ।।೩।।
 
 
ಪ್ರೀತಿಯಿಂದ ಎಲ್ಲ ನೋವ ಸಹಿಸುತ
ಮಮತೆಯಿದ ಲಾಲಿಸುವ
ಕಣ್ಣಿರ ಮಡುವಿನಲೂ ಸ್ಪಂದಿಸುವ
ತನ್ನ ಉಸಿರನ್ನೇ ನೀಡಿರುವ
ಅವಿರತ ಪರಿಶ್ರಮ ಪಡುವ
ನನ್ನಮ್ಮ ನಿಜಕ್ಕೂ  ಒಂದು ಪವಾಡ ।।೪।।
 
 
ನಿಸ್ವಾರ್ಥ ಸೇವೆ ಮಾಡೋ
ಯಾರಿಗೂ ಕೆಡಕು ಮಾಡದ
ಎಲ್ಲರಲೂ ಸಂತೋಷ ನೋಡುವ
ನನ್ನಮ್ಮನ ನಗುಮುಖದ
ಹಿಂದಿರುವ ಅಳಿಸಲಾಗದ ನೋವು
ನಿಜಕ್ಕೂ ಆ ಗಾಳಿಯಷ್ಟೇ ಮೌನ ।।೫।।
 
 
ನಿದ್ದೆ ಮಾಡುವ ಕಂಗಳು
ತೇವಗೊಂಡಿರುವುದು ನಿಜ
ನೂರು ಹೃದಯ ವೇದನೆ
ಇರುವುದು ಅಷ್ಟೇ ನಿಜ
ಕಲ್ಪನೆಗೂ ಎಟುಕದ ನನ್ನ್ನಮ್ಮ
ನಿಜಕ್ಕೂ ಬ್ರಹ್ಮಸೃಷ್ಟಿಯ ಅವಿಸ್ಮರಣೀಯ ಕೊಡುಗೆ  ।।೬।।
 
 
 
............. ಮಾಲಿನಿ ಭಟ್ .................
 
 

ಅಮ್ಮನ ಮನಸೊಳಗೆ .........

 

 
ಮದುವೆಯಾದ ಮಗಳು ತವರಿನಿಂದ  ಹೊರಟು ನಿಂತಾಗ 
ಕಣ್ಣೀರು ಎಲ್ಲಿಹುದು ಚಿಮುಕಿತು  ಎನ್ನೆದೆಯ ಸೀಳಿ
ದಾರಿಗುಂಟವು  ನಿನ್ನದೇ ನೆನಪು , ನೀ  ನಡೆದ ಹೆಜ್ಜೆಗುರುತುಗಳು 
ಮನಸು ಕೇಳದೆ ಬಂದೆ ನಿನ್ನ ಜೊತೆಯಲಿ ಸನಿಹ
ಮೌನವಾಗಿಯೇ ದುಃಖ ಕಣ್ಣೀರು ....
ಒಂದು ಮಾತು  ಆಡಲಾಗದೆ ಎದೆಯು ಸೆಟೆದಿದೆ ,
ಮೊಗವು ತಿಳಿಸಿದೆ ನೋವಿನೆಳೆಯನು ,
ಹರಸಿದೆ ಮನಸು ... ಶುಭವಾಗಲೆಂದು .
 
 
 
.............  ಮಾಲಿನಿ ಭಟ್ ................
 
 
 
 
 
 

ಗುಲಾಬಿಯ ವ್ಯಥೆ



ಆಗ ತಾನೆ ಅರಳಿದ ಆ ಗುಲಾಬಿ
ಭಯದಲ್ಲಿ ಕಂಪಿಸುತಲಿತ್ತು
ತನ್ನ ಸೌಂದರ್ಯಕೆ ಬೇಸರಿಸಿತ್ತು
ಮನೆಯೊಡತಿಯ ಮಾತು ಕೇಳಿಸಿತ್ತು
ಇನ್ನೇನು ನನ್ನ ಜೀವನ ಮುಗಿಯಿತು
ಕಾಡಿನ ಪುಷ್ಪವಾದರೂ ಆದೇನಾ ?

..... ಮಾಲಿನಿ ಭಟ್ ......
ಸಂಜೆಯ ಇಬ್ಬನಿ ಮೋಡದಿ ಸೆರೆನಿಂತು
ಪ್ರೀತಿಯ ಹಾಡೊಂದ ಸುಳಿಗಾಳಿಯಲ್ಲಿ
ಜೇನಿನ ಹನಿಯಾಗಿ ಹರಡಿತ್ತು
ಅಲ್ಲಿಯೇ ಹಾರಾಡೋ ಹಕ್ಕಿ
ಗೂಡನ್ನು ಮರೆತು ತಲೆಯಾಡಿಸಿತ್ತು
ಎಂತಹ ವಿಸ್ಮಯ ಆ ಕ್ಷಣ ...
 
 
..... ಮಾಲಿನಿ ಭಟ್ ....
ಜೀವನ ಎಲ್ಲಿದೆ ಸಾವಿನ ಹತ್ತಿರ
ಬದುಕಿನ ವೀಣೆ  ಆಸೆಯ ಮಡಿಲಿಗೆ
ನಡೆಸಲು ಆಗದು, ಉಳಿಸಲು ಆಗದು
ನಮ್ಮ ಪಾಲಿಗೆ ಎಲ್ಲವೂ ಮಾಯ
ಹೊಂದಿಕೆ ಎನ್ನುವುದು ....
ಹುಟ್ಟು - ಸಾವಿನ ನಡುವಿನ ಪಯಣ
 
 
 
..... ಮಾಲಿನಿ ಭಟ್ .............