Thursday 8 March 2012

ಮನದ ಮೂಲೆ

ಮನದ ಮೂಲೆ
 
ಮನದ ಮೂಲೆಯಲ್ಲಿ
ಬೆಚ್ಚಗೆ ಮುದುಡಿದೆ
 
ಕಟ್ಟಿದ ಸಾವಿರ ಕನಸಲ್ಲಿ
ಹುಚ್ಚಾಗಿ ಅವಿತಿದೆ
 
ಬಯಕೆಯ ಬಳ್ಳಿಯಲ್ಲಿ
ಹೊಸದಾಗಿ ಹೆಣೆದ ಗೂಡಿದು
 
ಕಣ್ಣ ರೆಪ್ಪೆಯಡಿಯಲ್ಲಿ
 ಮುದ್ದಾಗಿ ನಲಿದಿದ್ದು
 
ಅರಸಿ ಹೋದ  ಹೊಸ ಸಂಬಂಧದಡಿಯಲ್ಲಿ
ಇಂದು ಮೂಕವಾಗಿ ಅತ್ತಿದೆ
 
ಬಂಧದ ಭಾವನೆಗಳಲ್ಲಿ
ಸರಪಳಿಯು ಬಿಗಿದುಕೊಂಡಿದೆ
 
ಜೋಪಾನದಿ ತೆರೆದಿಟ್ಟ ಮನದಲ್ಲಿ
ಬರಿಯ ಮೌನ ಉಳಿದಿದೆ ....
 
 
 
 

1 comment:

  1. ಮನದ ಮೂಲೆಯಲ್ಲಿ ಒಳ್ಳೊಳ್ಳೆ ಕವನಗಳಿವೆ ಕನಸುಗಳಿವೆ.....
    ಒಂದೊಂದಾಗಿ ಮೂಡಿ ಬರಲಿ........

    ReplyDelete