Tuesday, 6 March 2012

ಮನದ ಪ್ರಾರ್ಥನೆ
ಅಂದು ಸಂಜೆ ಬರಿಯ ಬಾನು
ಇಣುಕಿ ಇಣುಕಿ ಕರೆಯಿತು


ಹಲವು ಪ್ರಗತಿ ಕಂಡು ನಭವು
ಅಲ್ಲೇ ಮುದುಡಿ ನಲುಗಿತು

ಸುತ್ತ ದೀಪ ಕಳೆದ ಮುಗಿಲು
ಅಣುವ ಆಸರೆ ಬಯಸಿತು

ಕಣ್ಣ  ಕಂಬನಿ ಮರೆತ ಅಳುವು
 ಆತ್ಮಾನಂದಕೆ ಸಿಲುಕಿತು

ಕಿರಣದ ಹೊಳಪು ಹೃದಯ ಮೀಟಲು
ಮನೋಲ್ಲಾಸವ   ಪಡೆಯಿತು

ಮನದ ಪ್ರಾರ್ಥನೆ ಫಲವು ಪಡೆಯಲು
ಹೃದಯ ಹರಿಸಿತು ದೇವಗೆ ....
....

1 comment:

  1. ಸುಂದರ ಕವನ ಮೇಡಮ್.. ಸುತ್ತ ದೀಪ ಕಳೆದ ಮುಗಿಲು ಇದರ ಅರ್ಥ ತಿಳಿಸುವಿರಾ ದಯವಿಟ್ಟು

    ReplyDelete