ಇಂದಿನ ದಿನ ಶುಭದಿನ , ಶುಭಕರ
ಮಾಂಗಲ್ಯದಿನ ನಮ್ಮ ಕುವರಿಗೆ
ಹೊಳೆಯುತಿಹಳು ಕೆಂಪಾದ ಮುಖದಲಿ
ನೂರೊಂದು ಆಸೆಯಲಿ
ಕರಗಿಹಳು ಪ್ರೀತಿಸಾಗರದಲಿ
ತಾಯ ತೊಡೆಯಲಿ ಬೆಳೆದ
ಮುತ್ತಿನ ಕಣ್ಣುಗಳಿಗೆ
ತಿಳಿಯದು ಜೀವನದ
ಸುಖ ದುಃಖಗಳು
ಹೊರಟಿಹಳು , ಬಾಳ ನೌಕೆ ಎಳೆಯಲು
ಅರಿಯಲು ಕಷ್ಟ ಸಾಗರವ
ತಿಳಿಯಲು ಬೆರೆಯುವ ಗುಣವ
ಸಾಗಿಹಳು ಸಾಹಸ ಯಾತ್ರೆಗೆ
ಯೌನದ ಬಿಸಿರಕ್ತದಲಿ
ಮೂಡುತಿದೆ ಆತ್ಮವಿಶ್ವಾಶ
ಹೇಗಿರುವಲೋ ಗಂಡನ ಜತೆ
ಸಿಗಲಿ ದೇವರೇ ತಾಯಂತ ಅತ್ತೆಯು
ಸುಖದಲುಳಿಯಲಿ ನೂರ್ಕಾಲ
ಪತಿಯ ಜೊತೆ
ಬೆಳಗಲಿ ಜ್ಯೋತಿಯಂತೆ ಮನೆಯ
ಪಡೆಯಲಿ ತಾಯಿ ಸುಖವ
ಇರಲಿ ಎಂದೆಂದೂ ಅನ್ಯೋನ್ಯ ಬಾಳ್ವೆಯಲಿ
ಕಣ್ತುಂಬ ನೋಡುವೆವು
ಮಗಳ ಕುಸುಮ ಮುಖವ ...
....ಮಾಲಿನಿ ಭಟ್ .............
ಚಂದಿದ್ದೆ....
ReplyDeleteನಿನ್ ಮದ್ವೆಗೆ ಹಿಂಗೇ ಹಾರೈಸುವಾ......