Friday 1 June 2012

ಭಾರತ ದೇಶ

ಭಾರತದಲಿ ಉದಯಿಸಿದ ನಾವು
ಹಲವು ಭಾಷೆಯ ಸಮ್ಮಿಶ್ರದಲಿ
ಧರ್ಮ ಸತ್ವದ ಸಂಸ್ಕಾರದಲಿ
ಕೊಳಲು ನಾದ ಸ್ವರ ಸಲ್ಲಾಪದಲಿ
ಚರಣ ಕಾಂತಿಯ ಶುಭ್ರತೆಯಲಿ
ಭವ್ಯತೆಯ ಶಿಖರದಲಿ
ಅತ್ತ ಹಿಮಾಲಯ ತುದಿಯಲಿ
ಬಳುಕುತ ಸಾಗಿವೆ ಶ್ರೇಣಿಗಳು
ಸಾಧನೆ ಶಕ್ತಿಯ ಎತ್ತರಿಸಿ
ದೇವತೆಯಂತ ನದಿಗಳು ಹರಿದಿವೆ
ಸಾವಿರ ಸಾವಿರ ದೂರವ ಕ್ರಮಿಸಿ
ಮಣ್ಣನು ತಿದ್ದಿವೆ ಸುಂದರ ಫಲಕೆ
ಮಧ್ಯದಿ ಸಮತಲ
ತ್ರಿಕೋನ ಮೆರೆದಿದೆ
ಅಂಚುಗಳಲಿ ಅರಳಿವೆ
ಸಾಗರ ತೀರ, ತೆಂಗು - ಕಂಗಳ
ನೆಲೆಬೀಡಾಗಿ ,. ಜನರನು ಹರಿಸಿದೆ ಬಾ ಎಂದು
ಜನ್ಮವು ಇರುವುದು ಮಗದೊಂದು
ಹುಟ್ಟಿ ಬರುವೆನು ನಾ ಭಾರತದಲಿ ...
............ಮಾಲಿನಿ ಭಟ್ .......................

1 comment:

  1. ಹೂಂ.... ಒಳ್ಳೆಯವರೆಲ್ಲಾ ಹುಟ್ಟುವುದು ಭಾರತದಲ್ಲೇ ಅಂತ ತಿಳಿಯೋಣಾ.......

    ಚನ್ನಾಗಿದೆ ಕವಿತೆ......

    ReplyDelete