Friday, 10 January 2014

ತಾಯಿಯ ಹಾರೈಕೆ




ಬರಿದೇ ಮೌನ ಎದೆಯಲಿ ;ಉಳಿದೆ ನೀನು ಜೊತೆಯಲಿ
ಉರಿಯ ಬೇಗೆಯ ಹಾಗೆ  ಮಧುರ ಮನಸ ತಳದಲಿ

ಜಾತಿ ಧರ್ಮದ ಬೇಲಿ ಮುರಿದು ಬಂದೆ ನಿನ್ನ ಬಳಿಯಲಿ'
ಮಮತೆ ನೀಡಿ ಪೊರೆದ ತಾಯಿ ಅತ್ತಳೆದೆಯ ನೋವಲಿ

ಬಲಿತ ಹಕ್ಕಿಯು ಮರೆತೇ ಬಿಟ್ಟಿತು , ತನ್ನ ಸುಖದ ಅಲೆಯಲಿ

ದೂರವಾಯಿತು ತಾಯಿ ಹಕ್ಕಿಯು ,ಬೆಳೆದ ಮಗುವ ಹಟದಲಿ

ಪ್ರೀತಿ ಬಯಸಿ ಹಾರಿಬಿಟ್ಟಿತು , ವಯಸು ಸಹಜ ಬಯಕೆಯಲಿ
ಅತ್ತು ಅತ್ತು ಕಣ್ಣಿರಿಟ್ಟಿತು , ತಾಯಿ ಮನಸು ಕೊರಗುತಲಿ

ನೂರು ಪ್ರಶ್ನೆಯ ,... ಕುಟುಕು ಮಾತಲಿ
ಸಹಿಸದಾಯಿತು ...........    ನೋವಲಿ

ಇಂದು ನಾನು ಒಂಟಿಯು ,. ಮಕ್ಕಳಿದ್ದು ಬಂಜೆಯು
ಕರುಳ ಕುಡಿಯೇ ನೀಡೋ  ನೋವು ,... ಯಾವ ತಾಯಿಗೂ ಬೇಡವು


ಇಂದು ನನಗೆ ಯಾರೋ ಹೇಳಿದರು ,.. ಮಗಳು ತನ್ನ ಪ್ರೀತಿಲಿ ಸೋತಳು
ನನ್ನ ಕುಡಿಗೆ ಹರಸು ದೇವರೇ ,... ಅವಳ ಸಂಭ್ರಮ ಉಳಿಯಲಿ ..


ದೂರವಾದ ಮನಸು ಬೆರೆಯಲಿ

   ಅವರ ಹೃದಯ ನೀಲ ಸಾಗವಾಗಲಿ .




................  ಮಾಲಿನಿ ಭಟ್ .............


No comments:

Post a Comment