Friday, 29 June 2012

ಪ್ರೀತಿ


 
ಪ್ರೀತಿಯ ಕುಸುಮವೇ
ಹೃದಯದಿ ಕೆತ್ತಿದೆ ನಿನ್ನಯ ಪಟವ
 
ಗಗನದಿ ನೋಡಿದ ಸುಂದರ ತಾರೆಯೇ
ಮನಸಲಿ ಬರೆದೇನು ನಿನ್ನಯ ಹೆಸರ
 
ಮಾಗಿಯ ಚಳಿಯ ನಿನ್ನಯ ಮೊಗವೇ
ನನ್ನ  ಒಡಲ ಹಸಿರಿನ ತಾಣವೇ
 
ಕಂಪ ಸೂಸುವ ಗಂಧವೇ
ಪದ ವಿನ್ಯಾಸ ನಾ ಕಾಣೇ
 
ಮುಸುಕಿದ ತೆರೆಯೇ
ನಂದಾದೀಪ ನೀ ನನ್ನ ಹೃದಯದ
 
ಹೊಸಹಾರೈಕೆ  ಓ  ಒಲವೇ
ಚಿತ್ತಾರವ ಬಿಡಿಸಿದೆ ನನ್ನ ಮನದಂಗಳದಿ
 
ಲತೆಯ ಮಾಧುರ್ಯವೇ
ಹೆಣೆದು ಬಿಡು ಹೊಸ  ಸಂಬಂಧವ ..
 
 
.......ಮಾಲಿನಿ ಭಟ್ ...................
 
ಸಾಗರದ ಆಚೆ, ಕಿನಾರೆ ಮಗ್ಗುಲಲ್ಲಿ
ನನ್ನದೊಂದು ಪುಟ್ಟ ಗೂಡಿದೆ
ಗದ್ದಲದ ಬದುಕ ದೂಡಿ
ಶಾಂತವಾಗಿ ಬಂದು ನೋಡಿರಿ
ಇಲ್ಲಿಯೇ ಹೊಸದು ವಿಶ್ವ ಕಟ್ಟಿ ಕೊಳ್ಳೋಣ ...

Thursday, 28 June 2012

ಸೆಟೆದು ನಿಂತ ಬೆನ್ನುಹುರಿ
ತದೇಕಚಿತ್ತದ ಮನಸು
ದೃಷ್ಟಿ ಬದಲಿಸದ ಕಣ್ಣ ಹೂಗಳು
ನಿರಂತರ ಚಲನೆಯ  ಕೈ ಬೆರಳುಗಳು
ತಲೆ ತುಂಬಿಕೊಂಡಿರುವ ಗೊಂದಲ
ಸ್ವಂತ ಕನಸಿಗೆ ಬಣ್ಣ ಬಳಿಯದೆ
ದೂರವಿರಿಸೋ   . ಇಂದಿನ ಸ್ವಾಫ್ಟವೇರ್ ಗಳು
 

Wednesday, 27 June 2012

ತುಟಿಯ ಅಂಚಿನಲ್ಲಿ  ಹೊರಳಿದ  ನಗುವಿಗೆ  
ತಾರೆಯೇ  ಮೋಹಗೊಂಡಿದೆ
ಚಂದನದ ಮುಖವು ಕಾಂತಿಯಲಿ ತೇಲಿದೆ
ನನ್ನ ನಗುವಿಗೆ ನೀನು ಕಾರಣ ಗೆಳಯ
ನಿನ್ನ ಒಲವಿನ ಮಾತು ಸ್ಪೂರ್ತಿಯು .
 
 
ನಿನ್ನ ಜೀವನ , ನಿನ್ನ ಕನಸು  ಏಲ್ಲವೂ ನಿನ್ನದೇ
ಉಕ್ಕಿ ಹರಿವ ಜಲಪಾತದಲ್ಲಿ
ತೇಲಿ ಬಂದ ಕಸವು ನಾನು
ರಕ್ತ ಸಂಬಂಧದ  ಹೆಸರ ನೀಡಿದೆ
ಕಸವು ಚಿತ್ರವಾಗದು ಗೆಳಯ
ಮರಳಿ ತೇಲಿ ಬಿಡು ತನ್ನ ಗೂಡ ಸೇರಲಿ ...
 
 
....ಮಾಲಿನಿ ಭಟ್ ............
ಉಸಿರ ಗಾಳಿ ಹೃದಯ ಸೋಕಿದಾಗ
ನೆನಪಾಗಿದ್ದು ನೀನೇ
ಮನಸು ಮೌನದಲ್ಲಿ ಕರಗಿದಾಗ
ಸೆಳೆದಿದ್ದು ನೀನೇ
ಕಣ್ಣೀರು ಕನಸಿನೊಂದಿಗೆ ಜಾರಿದಾಗ
ನೋವು ನೀಡಿದ್ದು ನೀನೇ
ಭಾವನೆಗಳು ಬರಿದಾದಾಗ
ಮತ್ತೆ ಮನಸಿಗೆ ಹತ್ತಿರವಾಗಿದ್ದು ನೀನೇ ..
 
 
.....ಮಾಲಿನಿ ಭಟ್ ......................

Monday, 25 June 2012

ಹೊಸದು ಭಾಷ್ಯ

  
 
ಕಪ್ಪು ಮೋಡ ಬಾನ ತುಂಬಾ ಹರಡಿಕೊಂಡಿದೆ
ಚಲಿಸೋ ಗಾಳಿ ಮೌನವಾಗಿ ಗೂಡ ಸೇರಿದೆ
 
ಜಗದ ಶಿಲ್ಪಿ ಹುದುಗಿಹೋದ ಮಣ್ಣ ಕಣದಲಿ
ಹರಿಯೋ ನೀರು ತನ್ನ ಕಾಯ ಮರೆತ ಹಾಗಿದೆ
 
ಲೋಕವೆಲ್ಲ ಮಿಥ್ಯದಡಿಗೆ ಬಂಧಿಯಾಗಿದೆ
ಮಾನವತೆಯು ಜೊಳ್ಳು ತಬ್ಬಿ ಅಜ್ಞಾನ ಮೊಳಗಿದೆ
 
ನಿತ್ಯ ತೈಲವೆರೆಯೋ ಕೈ ರಕ್ತ ಬಸಿದಿದೆ
ಜ್ಞಾನದೀಪ ಷೋಕಿ ಮಡಿಲ ಅಡಗಿ ಕೂತಿದೆ
 
ಜಗದ ಜನಗೆ ಕರಿಯ ಪಟ್ಟಿ ಕಣ್ಣ ಕಟ್ಟಿದೆ
ವಿಶ್ವಕೆಲ್ಲ ಹೊಸದು ಭಾಷ್ಯ ಬರೆಯಬೇಕಿದೆ ...
 
ಮುಂಜಾನೆಯ ಶುಭಾಶಯಗಳು ...................
 
 
............ಮಾಲಿನಿ ಭಟ್ ..................

Thursday, 21 June 2012

ಇಂದು ನನಗೆ ನೀನೇ ಕಂದನು


 
ಅಮ್ಮ ನಿನ್ನ ಮಡಿಲಿನಲ್ಲಿ ಮಲಗುವಾಸೆ
ನನ್ನ ತೋಳಿನಿಂದ ನಿನ್ನ ಮುದ್ದುವಾಸೆ
ಮಮತೆ ಬಡಿಸಿ , ಪ್ರೀತಿಯಿಂದ ಸಲಹುವಾಸೆ
ದೇವನನ್ನು ಕಾಣದಾದೆ ನಿನಗೆ ಪೂಜೆ ಮಾಡುವಾಸೆ
                         ಇಂದು ನನಗೆ ನೀನೇ ಕಂದನು ||
 
ನಿನ್ನ ಉಸಿರು ನನಗೆ ನೀಡಿ ಜೀವ ತುಂಬಿದೆ
ರತ್ನದಂತೆ ನನ್ನ ನೀನು ಸಾಕಿ ಬೆಳೆಸಿದೆ
ಗುರುವು ನೀನೇ , ದೈವ ನೀನೇ , ನನ್ನ ಪಾಲಿಗೆ
ನಗುವ ತಾರೆಯಂತೆ ನೀನು ಬೆಳಕ ಚೆಲ್ಲಿದೆ
                           ಇಂದು ನನಗೆ ನೀನೇ ಕಂದನು ||
                                   
ಮೌನವಾಗಿ ನೋವು ತಿಂದು ಸುಖವು ನೀಡಿದೆ
ಗುಬ್ಬಿಯಂತೆ ನನ್ನ ನೀ ಕಾದು ತುತ್ತ ಕೊಟ್ಟೆ
ನಿನ್ನ ಸುಖವ ತ್ಯಜಿಸಿ ನನಗೆ ಪ್ರೇಮ ನೀಡಿದೆ
ಸವೆದ ಹಾದಿ ನನ್ನ ನೋಡಿ ನೀನು ಮರೆತೇ
                          ಇಂದು ನನಗೆ ನೀನೇ ಕಂದನು ||
 
 
 
 
 
       ...ಮಾಲಿನಿ ಭಟ್.........

ನನ್ನ ಬಾಳು

 
 
ನನ್ನ ಬಾಳು ನನ್ನದು
ನನ್ನ ಕನಸು ನನ್ನದು
ಉರಿವ ಬೆಳಕ ತಪ್ಪಲಲ್ಲಿ
ಮೌನಗೆರೆಯೇ ಉತ್ತರ
ಜೀವ ಕಳೆದ ಸಾಲಿನಲ್ಲಿ
ಸವೆದ ಮಣ್ಣ ಅಣುವಿನಲ್ಲಿ
ನನ್ನ ನೆರಳ ಆಕೃತಿ
ತಂಪ ನೀಡೋ ಮಾತೇ ಇಲ್ಲ
ಬರಿಯ ನಡಿಗೆ ಜೊತೆಯಲಿ
ಋಣವು ಇರುವ ಕ್ಷಣದವರೆಗೆ
ನಾನು ನನ್ನದು ಪಲ್ಲವಿ
ಎಲ್ಲ ಮುಗಿದ ಕೊನೆಯ ಹಂತಕೆ
ಕದವ ತೆರೆದು ನಡೆಯಲು ...
 
 
..ಮಾಲಿನಿ ಭಟ್ ./....
 
 
ಮೋಡ ಕಟ್ಟಿದ ಬಾನು
ಹುದುಗಿ ಇಟ್ಟಿರೋ ಜಲವನು
ಭುವಿಯ ಸೆಳೆತ ; ಮಣ್ಣು ಕಾದಿದೆ
ತಂಪ ಮಾಧುರ್ಯಕೆ ,
ಮಣ್ಣ ಗಂಧಕೆ
ವಿಶ್ವ ಸಂಕುಲ ತನ್ಮಯವಾಗಿದೆ ...
 
 
 
...........ಮಾಲಿನಿ ಭಟ್ ....................
ಮತವೆಂಬ ಬೇಧ
ಮನಸೆಂಬ ಜೀವದಲಿ
ಅಪ್ಪಿ ಹಿಡಿದ ಜಡತೆ
ದೂರದಲಿ ನಿಂತು
ಮಾನವತೆಯ ಹತ್ಯೆಗಯ್ಯೋ
ನಿಜವಾದ ಕೊಲೆಪಾತಕರು..
 
...ಮಾಲಿನಿ ಭಟ್................. 
 
ಅಮ್ಮಾ ನಿನ್ನ ಆದರ
 
ಕರೆಯುವಳು ಮನಸೋಲುವವರೆಗೆ
ಒಲೈಸುವಳು ಹೃದಯ ಬತ್ತುವವರೆಗೆ
ಪ್ರೀತಿಸುವಳು ಜೀವವಿರುವವರೆಗೆ
ಆದರಿಸುವಳು ಪ್ರಪಂಚ ನಿಬ್ಬೆರಗಾಗುವಂತೆ ..
 
 
 
 
.....ಮಾಲಿನಿ ಭಟ್ .................
 
ಸಿಗದ ನೀ  ಬಹುದೂರ
 
ಗಗನ ಚಪ್ಪರದಿ ಅರಳಿದ ಕುಸುಮ ನೀನು
ಕೈಯಲ್ಲಿ ಹಿಡಿಯಬೇಕೆಂಬ ಬಯಕೆ
ನೀ ಬಹುದೂರದಲಿರುವುದ ಮರೆತೇ
ನಿನ್ನ ಎದುರಲಿ ಕುಳಿತಿರಲು ಬಯಸಿದೆ
ಪದೇ ಪದೇ ನಿನ್ನ ಮಾತೆ ಕೇಳುತಿದೆ
ನಾ ನಿನಗೆ ಸಿಗಲಾರೆ ಮರೆತುಬಿಡು 
 
 
 ....ಮಾಲಿನಿ ಭಟ್ .....
ನಿನಗಾಗಿ ನಾನೇನು ಕೊಡದಾದೆ,
ನಿನ್ನ ಸ್ನೇಹವು ಮಾತ್ರ ಚಿರನೂತನ
ನಿನ್ನ ಮನವು ನನಗೆ ಆದರ್ಶವಾಗಿರಲಿ
ನಿನ್ನ ನಡತೆ ಅಪರಂಜಿಯಂತಿದೆ
ನೀನಾದೆ   ನನ್ನ ಜೀವದ ಗೆಳತಿ
ನಿನಗಾಗಿ ಒಂದು ಶುಭ ಕೋರದಾದೆ
ಮರೆವೆಯ ಪರಿ ಅರಿಯದಾದೆ
ಕ್ಷಮೆ ಇರಲಿ, ಒಲವಿನ ಗೆಳತಿ ..
 
....ನಿನ್ನ ಪ್ರೀತಿ ಗೆಳತಿ ...
 
 
........ಮಾಲಿನಿ ಭಟ್ .....................
ಮೌನ ಗೆರೆಯ ಪರಿಧಿಯ  ಒಳಗೆ
ಹನಿಗಳ ಗುಚ್ಹ ಅರಳಲು ನಿಂತಿದೆ
ಒಳಗಿನ ಭಾವನೆ ಬೆಳಕನು ನೋಡಲು ಕಾದಿದೆ
ಜೀವನ ನೌಕೆಗೆ ,ಬೇಲಿ  ಹೊರಗೆ
ಜೊತೆಯಲಿ ನಡೆಯುವ  ಬಾ
ಮಧುರ ಮನಸಿನ ಮಾತುಗಳ ಸರದಿಯಲಿ ...
 
 
............ಮಾಲಿನಿ ಭಟ್ .........................
 

Thursday, 14 June 2012

ಮನೆಯ ಮಾಡಿನ ಹಂಚಿನ ಮಧ್ಯೆದಿಂದ
ಮಳೆ ಬಂದಾಗ ಸುರಿಯೋ ಆ ಚಿಕ್ಕ ನೀರ ಹನಿ
ನನ್ನ ಮನದ ಪುಟ್ಟ ಸಸಿಗೆ ಜೀವ ತುಂಬುವುದೇ ?
ನಿನ್ನ ಬರುವಿಕೆಗೆ ಕಾದು ಕುಳಿತಿರುವೆ ...
 
 
 
...........ಮಾಲಿನಿ ಭಟ್..............
 
 

Tuesday, 12 June 2012

೧.)
 
 ಚಕ್ರವ್ಯೂಹ
 
ಎಳೆಯ ಕಂದನೆ
ನೀನರಿಯೆ  ಈ  ಜಗದ
ನಿಯಮವ
ಕಣ್ಣ ಬಿಡುವ ಮುನ್ನ
ಎಚ್ಚರದಿಂದಿರು ...
 
೨.)
     
 ಪ್ರೀತಿ
 
ಕಾಣದಾದ ದಾರಿಯಲ್ಲಿ
ತಿಳಿಯದಾದ ಮನಸಿನಲ್ಲಿ
ಅವಿತು ಅವಿತು ಆವರಿಸಿ
ಕುಳಿತಿರುವೆ ನೀನು .....
 
..... ಮಾಲಿನಿ ಭಟ್ .......
 
 
 
ಮೋಡ ಕಟ್ಟಿದ ಬಾನು
ಹುದುಗಿ ಇಟ್ಟಿರೋ ಜಲವನು
ಭುವಿಯ ಸೆಳೆತ ; ಮಣ್ಣು ಕಾದಿದೆ
ತಂಪ ಮಾಧುರ್ಯಕೆ ,
ಮಣ್ಣ ಗಂಧಕೆ
ವಿಶ್ವ ಸಂಕುಲ ತನ್ಮಯವಾಗಿದೆ ...
 
 
 
...........ಮಾಲಿನಿ ಭಟ್ ....................

Friday, 8 June 2012

ಮಮತೆ ಪ್ರತೀಕ

 
 
ಹೂವ ಬಳ್ಳಿ ಚಾಚಿ ನಿಂತಿದೆ
ಪರಿಮಳವ ನೀಡಲೆಂದು
ಮೆಲ್ಲ ಬೆಳಕು ಬಂದ ಕ್ಷಣವೇ
ತನ್ಮಯತೆಯಲಿ ತೇಲಿದೆ
ಜಗಕೆ ಸತ್ವ ನೀಡಿದೆ
ಮಮತೆಯ ಪ್ರತೀಕವಾಗಿ ...
 
 
....ಮಾಲಿನಿ ಭಟ್ ..................

ಕಣ್ಣೀರು

ಹೃದಯ ಸಾಗರದಲ್ಲಿ
ಜೋಡಿಸಿಟ್ಟ ನಿನ್ನ ಮಾತುಗಳು
ಇಂದು ಕಣ್ಣಿರಾಗಿ ,
ಮುಖದ ಸೌಮ್ಯತೆಯಲಿ
ಛಾಪು ಮೂಡಿಸಿದೆ,
ಸೋತ ನಯನದ
ನೂರು ಕನಸಿನ ಚಿತ್ರಪಟವು ಬಾಡಿದೆ,
ಮುಂಗುರಳು ಕಣ್ಣೀರ  ಜೊತೆ ನಡೆದಿದೆ
ಕೈಗಳು ಶಕ್ತಿಹೀನವಾಗಿದೆ ,
ಅಲ್ಲಲ್ಲೇ ಕಣ್ಣೀರ ಒರೆಸಲಾರದೆ
ತಟಸ್ಥ ತಳೆದಿದೆ..
ನಿನ್ನ ಹೃದಯವು ಈಗ ನನ್ನಲ್ಲಿಲ್ಲ
ಎಲ್ಲ ದೂರ ಸರಿದಿದೆ
ನಿರಂತರ ಚಲನೆಯ ವಾಸ್ತವಕೆ
ಮತ್ತೆ ಹಳೆ ಗುರುತು ಒಂದೇ
ಕಣ್ಣಿರಾಗಿ ಕಾಡುತಿದೆ ....
................ಮಾಲಿನಿ ಭಟ್..................

Wednesday, 6 June 2012

ಮನಸ ತೋಟದಲಿ

 
 
ಇದು ಎಂಥ ಅನುಬಂಧವೋ
 ಭಾವನೆಯ ತೆರೆಯ ಮನದಿ
ಕನಸಿನ ಸುಪ್ತ ಬೀಜದಿ
ನನ್ನ ದೇಹ , ನನ್ನ ಜೀವ
ನಿನ್ನ ಅಡಿಯಲಿ .....
 
 
......ಮಾಲಿನಿ ಭಟ್...................
 
 
 

ಇನಿಯ


ಕಣ್ಣ ಬಳಿಯಲಿ ಸುಳಿಯುವೆ
ತಂಪ ಗಾಳಿ ಸೋಕೊ ರೀತಿ
ಮನದ ಇಂಚು ಜಾಗದಲ್ಲೂ
ನಿನ್ನದೇ ಚಿಲಿಪಿಲಿ
ಹಲವು ರಂಗು ಮನಕೆ
ನಿನ್ನ ಒಂದು ನೋಟಕೆ
ಮಿಟುತಿಹುವುದು ಹೃದಯವು
ನಿನ್ನ ನೆನಪ ಚಕ್ರದಲಿ
ಯಾರು ಅರಿಯದಂತೆ ನೀಡಿದೆ
ಕನಸ ಗರಿಯ ಹೊಳಪನು ...
 
 
....ಮಾಲಿನಿ ಭಟ್..............

ಪರಿಸರ ದಿನ

 
 
ನಮ್ಮಯ ಸುತ್ತಲು ಕವಿದಿರೋ  ಕಾಣದ ಮುಸುಕಿನಲಿ
ಪದರಿನ ಲೇಪದಿ ಮರೆಸಿರೋ ತಿಳಿಯದೆ ಅಂಧತೆಯಲಿ
ನಮ್ಮಯ ಸಲಹುವ ಮರಗಳ ಅಳಿವಿನಲಿ
ಶಕ್ತಿಯ ನೀಡೋ ಜಲದ ಕಲ್ಮಶದಲಿ
ನಶೆಯ ಲೋಕದಲಿ ,
ಸುಂದರ ಪರಿಸರವ ಸಾಯಿಸುವ
ಎಲ್ಲರೂ ಸೇರಿ ... ಮನವನು ಮೆಚ್ಚಿ
ಭವ್ಯತೆ ಮಂದಿರ ಕಟ್ಟೋಣ
ಉಸಿರನು ಹಂಚೋ ಜೀವಕೆ ನಾವು
ಪ್ರೀತಿಯ ಒಪ್ಪಿಗೆ ನಿಡೋಣ..
 
 
 
 
 
              ಮಾಲಿನಿ ಭಟ್............... 
 

Friday, 1 June 2012

ಭಾರತ ದೇಶ

ಭಾರತದಲಿ ಉದಯಿಸಿದ ನಾವು
ಹಲವು ಭಾಷೆಯ ಸಮ್ಮಿಶ್ರದಲಿ
ಧರ್ಮ ಸತ್ವದ ಸಂಸ್ಕಾರದಲಿ
ಕೊಳಲು ನಾದ ಸ್ವರ ಸಲ್ಲಾಪದಲಿ
ಚರಣ ಕಾಂತಿಯ ಶುಭ್ರತೆಯಲಿ
ಭವ್ಯತೆಯ ಶಿಖರದಲಿ
ಅತ್ತ ಹಿಮಾಲಯ ತುದಿಯಲಿ
ಬಳುಕುತ ಸಾಗಿವೆ ಶ್ರೇಣಿಗಳು
ಸಾಧನೆ ಶಕ್ತಿಯ ಎತ್ತರಿಸಿ
ದೇವತೆಯಂತ ನದಿಗಳು ಹರಿದಿವೆ
ಸಾವಿರ ಸಾವಿರ ದೂರವ ಕ್ರಮಿಸಿ
ಮಣ್ಣನು ತಿದ್ದಿವೆ ಸುಂದರ ಫಲಕೆ
ಮಧ್ಯದಿ ಸಮತಲ
ತ್ರಿಕೋನ ಮೆರೆದಿದೆ
ಅಂಚುಗಳಲಿ ಅರಳಿವೆ
ಸಾಗರ ತೀರ, ತೆಂಗು - ಕಂಗಳ
ನೆಲೆಬೀಡಾಗಿ ,. ಜನರನು ಹರಿಸಿದೆ ಬಾ ಎಂದು
ಜನ್ಮವು ಇರುವುದು ಮಗದೊಂದು
ಹುಟ್ಟಿ ಬರುವೆನು ನಾ ಭಾರತದಲಿ ...
............ಮಾಲಿನಿ ಭಟ್ .......................

ಮೋಹದ ಅಲೆ


 
ಮನಸಲಿ ಸುಳಿದ ಮಾತಿನ ಪಲ್ಲವಿಗೆ
ಮಿಡಿಯಿತು ಹೃದಯದ ಕನ್ನಡಿಯು
ಸುತ್ತಲು ತಿರುಗುವ ಭೂಮಿಯಲ್ಲಿ
ಸಾಗರದಲೆಯ ಸುಳಿಯಲ್ಲಿ
 ಮೋಹನ ತೆರೆಯ ನಾಟ್ಯದಲ್ಲಿ
ಸಿಲುಕಿದ ನಿನ್ನನು ಕಂಡೇನು
ಕರಗಿದೆ ನಿನ್ನಯ ಮಾಯದ ಬೆರಗಿಗೆ
ನಿನ್ನಲಿ ನಾನು ಸೇರಿರಲು
ಅರಿವಿನ ಬಲವು ಕದವನು ತೆರೆಯಲು
ಸೋಲಿನ ಗೆರೆಯ ಮುಟ್ಟಿರಲು
ಬಿಡಿಸಲು ಆಗದೆ ನಲುಗಿರಲು
ಉಸಿರಿನ ಕೊನೆಯೂ ಕಾದಿರಲು
ಮಿಂಚಿತು ಕಿರಣವು ದೂರದಲಿ .
 
 
..................ಮಾಲಿನಿ ಭಟ್ ..........
 
 
 

ನಿರೀಕ್ಷೆ

            
ನರಗಳು ಸ್ಪಷ್ಟವಾಗಿ ಕಾಣೋ ಆ ಕೈಗಳು
ಮೂಕವೇದನೆಯಲಿ ಸೊರಗಿದ ತನುವಿನಲಿ
ಪ್ರತಿನಿತ್ಯ ದೇವರ ಪ್ರಾರ್ಥನೆಯಲಿ
ಒಂದೇ ಸಮ ಸಲ್ಲಿಸುವ ವಿನಂತಿಯಲಿ
ಹೊಸ ಬೆಳಗು ಮೂಡಿ ಬರಲಿ ನಿರೀಕ್ಷೆಯಲಿ ..
 
 
........ಮಾಲಿನಿ ಭಟ್......................
 
ಕಣ್ಣ ತುದಿಯ ಅಂಚಿನಲಿ , ಹೊಳೆ ಹೊಳೆಯುತ ಬೆಳಗಿದೆ
ನನ್ನ ಹೃದಯವೆಂಬ ದೇಗುಲವ, ಅಲೆಯ ಅಗಲದಿ ತುಳುಕಿಸಿದೆ
ಚಿಗುರಾಗಿ ನಲುಗಿದ ಕುಡಿಯ ಮನಸಿನಾರಾಧನೆಗೆ
ಹೊಸ ದಿಗಂತದ ಸೂರ್ಯ ಕಿರಣ ಹರಿದು ಬರಲಿ ...
 
 
 
 
 
            ............ಮಾಲಿನಿ ಭಟ್.................