Friday, 29 June 2012

ಪ್ರೀತಿ


 
ಪ್ರೀತಿಯ ಕುಸುಮವೇ
ಹೃದಯದಿ ಕೆತ್ತಿದೆ ನಿನ್ನಯ ಪಟವ
 
ಗಗನದಿ ನೋಡಿದ ಸುಂದರ ತಾರೆಯೇ
ಮನಸಲಿ ಬರೆದೇನು ನಿನ್ನಯ ಹೆಸರ
 
ಮಾಗಿಯ ಚಳಿಯ ನಿನ್ನಯ ಮೊಗವೇ
ನನ್ನ  ಒಡಲ ಹಸಿರಿನ ತಾಣವೇ
 
ಕಂಪ ಸೂಸುವ ಗಂಧವೇ
ಪದ ವಿನ್ಯಾಸ ನಾ ಕಾಣೇ
 
ಮುಸುಕಿದ ತೆರೆಯೇ
ನಂದಾದೀಪ ನೀ ನನ್ನ ಹೃದಯದ
 
ಹೊಸಹಾರೈಕೆ  ಓ  ಒಲವೇ
ಚಿತ್ತಾರವ ಬಿಡಿಸಿದೆ ನನ್ನ ಮನದಂಗಳದಿ
 
ಲತೆಯ ಮಾಧುರ್ಯವೇ
ಹೆಣೆದು ಬಿಡು ಹೊಸ  ಸಂಬಂಧವ ..
 
 
.......ಮಾಲಿನಿ ಭಟ್ ...................
 
ಸಾಗರದ ಆಚೆ, ಕಿನಾರೆ ಮಗ್ಗುಲಲ್ಲಿ
ನನ್ನದೊಂದು ಪುಟ್ಟ ಗೂಡಿದೆ
ಗದ್ದಲದ ಬದುಕ ದೂಡಿ
ಶಾಂತವಾಗಿ ಬಂದು ನೋಡಿರಿ
ಇಲ್ಲಿಯೇ ಹೊಸದು ವಿಶ್ವ ಕಟ್ಟಿ ಕೊಳ್ಳೋಣ ...

Thursday, 28 June 2012

ಸೆಟೆದು ನಿಂತ ಬೆನ್ನುಹುರಿ
ತದೇಕಚಿತ್ತದ ಮನಸು
ದೃಷ್ಟಿ ಬದಲಿಸದ ಕಣ್ಣ ಹೂಗಳು
ನಿರಂತರ ಚಲನೆಯ  ಕೈ ಬೆರಳುಗಳು
ತಲೆ ತುಂಬಿಕೊಂಡಿರುವ ಗೊಂದಲ
ಸ್ವಂತ ಕನಸಿಗೆ ಬಣ್ಣ ಬಳಿಯದೆ
ದೂರವಿರಿಸೋ   . ಇಂದಿನ ಸ್ವಾಫ್ಟವೇರ್ ಗಳು
 

Wednesday, 27 June 2012

ತುಟಿಯ ಅಂಚಿನಲ್ಲಿ  ಹೊರಳಿದ  ನಗುವಿಗೆ  
ತಾರೆಯೇ  ಮೋಹಗೊಂಡಿದೆ
ಚಂದನದ ಮುಖವು ಕಾಂತಿಯಲಿ ತೇಲಿದೆ
ನನ್ನ ನಗುವಿಗೆ ನೀನು ಕಾರಣ ಗೆಳಯ
ನಿನ್ನ ಒಲವಿನ ಮಾತು ಸ್ಪೂರ್ತಿಯು .
 
 
ನಿನ್ನ ಜೀವನ , ನಿನ್ನ ಕನಸು  ಏಲ್ಲವೂ ನಿನ್ನದೇ
ಉಕ್ಕಿ ಹರಿವ ಜಲಪಾತದಲ್ಲಿ
ತೇಲಿ ಬಂದ ಕಸವು ನಾನು
ರಕ್ತ ಸಂಬಂಧದ  ಹೆಸರ ನೀಡಿದೆ
ಕಸವು ಚಿತ್ರವಾಗದು ಗೆಳಯ
ಮರಳಿ ತೇಲಿ ಬಿಡು ತನ್ನ ಗೂಡ ಸೇರಲಿ ...
 
 
....ಮಾಲಿನಿ ಭಟ್ ............
ಉಸಿರ ಗಾಳಿ ಹೃದಯ ಸೋಕಿದಾಗ
ನೆನಪಾಗಿದ್ದು ನೀನೇ
ಮನಸು ಮೌನದಲ್ಲಿ ಕರಗಿದಾಗ
ಸೆಳೆದಿದ್ದು ನೀನೇ
ಕಣ್ಣೀರು ಕನಸಿನೊಂದಿಗೆ ಜಾರಿದಾಗ
ನೋವು ನೀಡಿದ್ದು ನೀನೇ
ಭಾವನೆಗಳು ಬರಿದಾದಾಗ
ಮತ್ತೆ ಮನಸಿಗೆ ಹತ್ತಿರವಾಗಿದ್ದು ನೀನೇ ..
 
 
.....ಮಾಲಿನಿ ಭಟ್ ......................

Monday, 25 June 2012

ಹೊಸದು ಭಾಷ್ಯ

  
 
ಕಪ್ಪು ಮೋಡ ಬಾನ ತುಂಬಾ ಹರಡಿಕೊಂಡಿದೆ
ಚಲಿಸೋ ಗಾಳಿ ಮೌನವಾಗಿ ಗೂಡ ಸೇರಿದೆ
 
ಜಗದ ಶಿಲ್ಪಿ ಹುದುಗಿಹೋದ ಮಣ್ಣ ಕಣದಲಿ
ಹರಿಯೋ ನೀರು ತನ್ನ ಕಾಯ ಮರೆತ ಹಾಗಿದೆ
 
ಲೋಕವೆಲ್ಲ ಮಿಥ್ಯದಡಿಗೆ ಬಂಧಿಯಾಗಿದೆ
ಮಾನವತೆಯು ಜೊಳ್ಳು ತಬ್ಬಿ ಅಜ್ಞಾನ ಮೊಳಗಿದೆ
 
ನಿತ್ಯ ತೈಲವೆರೆಯೋ ಕೈ ರಕ್ತ ಬಸಿದಿದೆ
ಜ್ಞಾನದೀಪ ಷೋಕಿ ಮಡಿಲ ಅಡಗಿ ಕೂತಿದೆ
 
ಜಗದ ಜನಗೆ ಕರಿಯ ಪಟ್ಟಿ ಕಣ್ಣ ಕಟ್ಟಿದೆ
ವಿಶ್ವಕೆಲ್ಲ ಹೊಸದು ಭಾಷ್ಯ ಬರೆಯಬೇಕಿದೆ ...
 
ಮುಂಜಾನೆಯ ಶುಭಾಶಯಗಳು ...................
 
 
............ಮಾಲಿನಿ ಭಟ್ ..................