Tuesday, 17 July 2012

ಪ್ರೀತಿಯ ಸಾಕ್ಷಾತ್ಕಾರ

ನಿನ್ನ ಕಣ್ಣುಗಳ ಸುಳಿಯಲ್ಲಿ
ಕವಲೊಡೆದ ಕನವರಿಕೆಯಲ್ಲಿ
ಒಲಿದ ಜೀವ ಮೊಳಕೆಯಲ್ಲಿ
ಏರಿಳಿತದ ಉದ್ವೇಗದಲ್ಲಿ
ಮೃದುಲ ಮನಸಿನ ಬಂಧದಲ್ಲಿ
ಮೌನ ಸಂವಹನದೊಂದಿಗೆ
ಸಾಕ್ಷತ್ಕಾರಗೊಂಡಿದೆ ಪ್ರೀತಿಯ ಬಳ್ಳಿ



.............ಮಾಲಿನಿ ಭಟ್ ............

Wednesday, 11 July 2012

ಮರೆಯದ ನಿನ್ನ ನೆನಪು


 
ಕನಸ ಮೂಲೆಯಲ್ಲಿ  ಬೆಚ್ಚನೆಯ ಹೊದಿಕೆ ಹರಡಿ
ಮೌನದ ಪದರ ಜೊತೆಯಲ್ಲಿ ನಗುವ ಕದಡಿ
ಮನಸಿನ ಚಿತ್ರಪಟಡಿ ನೆನಪಿನ ಸರವ ಹರವಿ
ನೀನು ನೀಡಿದ ಮಾಣಿಕ್ಯ ಹುಡುಕುತಿರುವೆ ....
 
 
...............ಮಾಲಿನಿ ಭಟ್ .................
 
ನಿನ್ನ ಒಳಗೆ ನಾನಿರಬೇಕೆಂಬ ಆಶಯ
ನನ್ನ ಹೃದಯ ಸುತ್ತ ನೀ ಕಾವಲಿರಬೇಕೆಂಬ ಹಂಬಲ
ನಿನ್ನ ಭಾವನೆ ನನಗೆ ಸೇರಲಿ ಎನ್ನೋ ಬಯಕೆ
ನನ್ನ ಮಿಡಿತ ನಿನ್ನದೇ  ಎಂದು  ಗೃಹಿಸಲಿ ಎಂಬ ತುಡಿತ ..
 
 
 
............ಮಾಲಿನಿ ಭಟ್ ................... 

ಅಪ್ಪಾ ನಿನ್ನ ಬರುವಿಕೆಯಲ್ಲಿ

 
 
ಅರಿತವರು ಹೇಳಿದರು
ಅರಿಯದವರು ಸುಮ್ಮನಾದರು
ಭವಿಷ್ಯಕ್ಕೆ ತಂದೆಯೇ ಶಿಲ್ಪಿ
ನೂರು ಕನಸಿಗೆ ನೀ ಆಧಾರ
ಪುಟ್ಟ ಪುಟ್ಟ ಕನಸ ಬೆಳಕಿಗೆ
ನೀ ಮೌನದೀವಿಗೆ
ನಿನ್ನ ನೆನಪಾಗುತಿದೆ ಅಪ್ಪಾ
ಹೃದಯ ಮಿಡಿಯುತಿದೆ
ಅಪ್ಪಾ - ಅಮ್ಮ ನಿಮ್ಮಿಬ್ಬರ ಹೊರತು
ಮತ್ತೇನು ಬೇಡವಾಗಿದೆ
ತಟದಲ್ಲಿ ಕಾದು ಕುಳಿತಿರುವೆ
ಒಮ್ಮೆಯಾದರು ಬರುವೆಯೆಂದು 
ನಿನ್ನಲ್ಲಿ ಮಾತನಾಡಬೇಕು ಅಪ್ಪಾ 
ನಡೆಯುದನ್ನು ಕಲಿತ ಗಳಿಗೆ ನೀ ಅಗಲಿದ್ದು 
ದೇವ ನಿನ್ನನ್ನು ತನ್ನೆಡೆಗೆ ಸೆಳೆದುಬಿಟ್ಟ 
ಅಪ್ಪಾ ಒಮ್ಮೆ ಬಂದುಬಿಡು 
ನನ್ನ ಅಮ್ಮನಿಗಾಗಿ ಅವಳ ಮಾಸಿದ 
ಕಣ್ಣಿನಲ್ಲಿ ಅಡಗಿರುವ ನೋವಿಗೆ 
ನೀನು ಮಾತ್ರ ಸಮಾಧಾನ ಮಾಡಬಲ್ಲೆ 
ನಿನಗಾಗಿ ಅವಳು ಕಾಯದ ದಿನವಿಲ್ಲ 
ಪ್ರಪಂಚವರಿಯದ ನನ್ನ ಅಮ್ಮ 
ಸುತ್ತುವರಿದ ಸುಳಿಯಿಂದ ನೀನೇ 
ಬಿಡಿಸಬೇಕು , ಅಪ್ಪಾ ನನಗಿಂತಲೂ 
ನನ್ನ ಅಮ್ಮನ ನಗುವಿಗಾಗಿ ನೀ ಬರಬೇಕು 
ಎಲ್ಲಿ ಅಡಗಿರುವೆ 
ನೀಲನಭದ  ಗಾಳಿಯಲಿ 
ಲೀನಗೊಂದೆಯಾ
ಅಪ್ಪಾ ಕರ್ತವ್ಯ ಮರೆತು  ಹೋಗದಿರು,
ನಿನಗಾಗಿ ಕಾಯುತಿರುವೆ
ಕಣ್ಣೀರು ತಡೆದು , ನಿನ್ನ ನೆನಪಿನೊಂದಿಗೆ ...
 
 
.............ಮಾಲಿನಿ ಭಟ್ ...................

Sunday, 8 July 2012

೧.)
ಹೃದಯ ಅವ್ಯಕ್ತ ಭಯದಿ ತೇಲಿದೆ
ಸಾಂತ್ವನ ಮಾಡೋ ಮನಸು ಮರೆಯಲಿ
ನಿನ್ನ ನೆನಪು ಘಾಸಿ ಮಾಡಿದೆ
ಹೇಗೆ ನಿನಗೆ ತಿಳಿಸಲಿ ....
 
೨.) ಪುಟ್ಟ ಮಗುವೆ
ನಿನ್ನ ಜೊತೆ ನಾ ಸೋತೆನು
ನಿನ್ನ ಮುದ್ದು ಮುಖದಿ
ಹೊಳೆಯುತಿಹುದು
ಪುಟ್ಟ - ಪುಟ್ಟ ದೀಪವು
ಸದಾ ಚೆಲ್ಲುತಿರಲಿ
ಆನಂದದ ತೈಲವ ...
 
 
 
.................ಮಾಲಿನಿ ಭಟ್....................

Thursday, 5 July 2012

ನಿನ್ನ ಆಗಮನಕೆ
 
ಆ ಗಾಳಿ ತೂಗೋ ಮೆಲ್ಲುಸಿರ ಗಾನಕ್ಕೆ
ಎದೆಯ ಕಣವೂ ಕಂಪಿಸಿತು
ಅತ್ತಿತ್ತ ನೋಡೋದರವೊಳಗಾಗಿ ಬಂದಿರುವೆ
ಮುದ್ದಾದ ಹೂವ ಪರಿಮಳವ ತಂದಿರುವೆ
ಮನದಲ್ಲಿ ಮಡಚಿಟ್ಟ ಹಾಳೆಯು ತೆರೆದಿರುವೆ
ಬೆಚ್ಚನೆಯ ಬೆಸುಗೆಯ ಮುದ ನೀಡಿರುವೆ
ಬೆಳಕು ಚೆಲ್ಲೋ ಕಂಗಳಿಂದ ಕಾದಿರುವೆ ...
 
..ಮಾಲಿನಿ ಭಟ್..............

Monday, 2 July 2012

ದೇವ ಸ್ಮರಣೆ

 
ನಿತ್ಯ ಸಂಕಲ್ಪದಿ ಕರಮುಗಿದು ಪ್ರಾರ್ಥಿಸು
ಆತ್ಮಶಕ್ತಿಯ ವರ್ಧಿಸೋ ಆಗರ
ನಿನ್ನ ಸ್ಮರಣೆಯೊಂದೇ ಶ್ರೇಷ್ಠ ಕಿರಣ
ಕತ್ತಲಿಂದ ಬೆಳಕಿನೆಡೆಗೆ ನಡೆಸೋ ಹರಿವು  ..
 
 
.............ಮಾಲಿನಿ ಭಟ್ ..................