Wednesday, 11 July 2012

ಅಪ್ಪಾ ನಿನ್ನ ಬರುವಿಕೆಯಲ್ಲಿ

 
 
ಅರಿತವರು ಹೇಳಿದರು
ಅರಿಯದವರು ಸುಮ್ಮನಾದರು
ಭವಿಷ್ಯಕ್ಕೆ ತಂದೆಯೇ ಶಿಲ್ಪಿ
ನೂರು ಕನಸಿಗೆ ನೀ ಆಧಾರ
ಪುಟ್ಟ ಪುಟ್ಟ ಕನಸ ಬೆಳಕಿಗೆ
ನೀ ಮೌನದೀವಿಗೆ
ನಿನ್ನ ನೆನಪಾಗುತಿದೆ ಅಪ್ಪಾ
ಹೃದಯ ಮಿಡಿಯುತಿದೆ
ಅಪ್ಪಾ - ಅಮ್ಮ ನಿಮ್ಮಿಬ್ಬರ ಹೊರತು
ಮತ್ತೇನು ಬೇಡವಾಗಿದೆ
ತಟದಲ್ಲಿ ಕಾದು ಕುಳಿತಿರುವೆ
ಒಮ್ಮೆಯಾದರು ಬರುವೆಯೆಂದು 
ನಿನ್ನಲ್ಲಿ ಮಾತನಾಡಬೇಕು ಅಪ್ಪಾ 
ನಡೆಯುದನ್ನು ಕಲಿತ ಗಳಿಗೆ ನೀ ಅಗಲಿದ್ದು 
ದೇವ ನಿನ್ನನ್ನು ತನ್ನೆಡೆಗೆ ಸೆಳೆದುಬಿಟ್ಟ 
ಅಪ್ಪಾ ಒಮ್ಮೆ ಬಂದುಬಿಡು 
ನನ್ನ ಅಮ್ಮನಿಗಾಗಿ ಅವಳ ಮಾಸಿದ 
ಕಣ್ಣಿನಲ್ಲಿ ಅಡಗಿರುವ ನೋವಿಗೆ 
ನೀನು ಮಾತ್ರ ಸಮಾಧಾನ ಮಾಡಬಲ್ಲೆ 
ನಿನಗಾಗಿ ಅವಳು ಕಾಯದ ದಿನವಿಲ್ಲ 
ಪ್ರಪಂಚವರಿಯದ ನನ್ನ ಅಮ್ಮ 
ಸುತ್ತುವರಿದ ಸುಳಿಯಿಂದ ನೀನೇ 
ಬಿಡಿಸಬೇಕು , ಅಪ್ಪಾ ನನಗಿಂತಲೂ 
ನನ್ನ ಅಮ್ಮನ ನಗುವಿಗಾಗಿ ನೀ ಬರಬೇಕು 
ಎಲ್ಲಿ ಅಡಗಿರುವೆ 
ನೀಲನಭದ  ಗಾಳಿಯಲಿ 
ಲೀನಗೊಂದೆಯಾ
ಅಪ್ಪಾ ಕರ್ತವ್ಯ ಮರೆತು  ಹೋಗದಿರು,
ನಿನಗಾಗಿ ಕಾಯುತಿರುವೆ
ಕಣ್ಣೀರು ತಡೆದು , ನಿನ್ನ ನೆನಪಿನೊಂದಿಗೆ ...
 
 
.............ಮಾಲಿನಿ ಭಟ್ ...................

No comments:

Post a Comment