Sunday, 3 March 2013

ಮನಸಿನ ಕನಸಲ್ಲಿ ಪ್ರೀತಿಯ ಬೆಳೆಸಿ 
ಕೊನೆಯುಸಿರು ಇರುವ ತನಕ ಉಳಿಸಿ 
ಎಂದೆಂದೂ ಚಿರವಾಗಿ ಬೆಳಕನ್ನ ನೀಡು 
ಅದುವೇ ಆಶಯ ನಮ್ಮದು 


.....ಮಾಲಿನಿ ಭಟ್ ...............

ಬಾಲ್ಯದೆಲೆಯ ಮೇಲೆ ಕೂಡಿಕೊಂಡ ಇಬ್ಬನಿ
ಹರಳಿನಂತೆ ತಬ್ಬಿ ಹಿಡಿದ ನಿನ್ನ ಪುಟ್ಟ ಮಂದಿರ
ಸೌಂದರ್ಯದಿ ಸಾಟಿ ನಿನಗೆ ಸಲ್ಲದು
ನಿನ್ನ ನೋಡಿ ಖುಷಿಯ ಪಡುವುದೇ ನಮ್ಮ ಭಾಗ್ಯವು.
 
 
 
...ಮಾಲಿನಿ ಭಟ್........................

ಮುಗಿಲಲಿ  ನೋಡು ಮೋಡದ ಸಾಲು
ಕರೆದಿವೆ ನಿನ್ನನು ಬಾ ಎಂದು ,
ಬರದೆಹೋದರೆ ನೋವನು ಸಹಿಸೆನು ,
ಕಾಡುತ ನೀನಗೆ ಶರಣಾಗಿ ..
 
 
..... ಮಾಲಿನಿ ಭಟ್...............
 
  
 

         ಅಂಬೇಡ್ಕರ್
 
 
ಸಂವಿಧಾನದ ರಚನೆಯ ರೂವಾರಿ
ಪ್ರಜೆಗಳ ಹಕ್ಕಿನ ಕಾರಣಕರ್ತ
ಕರ್ತವ್ಯವನು ನೆನಪಿಗೆ ತಂದು
ದೇಶಕೆ ಹೊಸದು ಕಾಣಿಕೆ ನೀಡಿದ .
 
.....ಮಾಲಿನಿ ಭಟ್..............
 
 
 

ಕಣ್ಣಿನ ಪರದೆಯಲಿ ಒಮ್ಮೆ ನೋಡು
ಅಡಗಿದೆ ನಿನ್ನ ಪ್ರತಿಬಿಂಬವು
ಸಾವಿಲ್ಲದ ನಯನದಲಿ
ನೀನುಳಿಯಬೇಕು  ಶಾಶ್ವತವಾಗಿ
 
 
...ಮಾಲಿನಿ ಭಟ್................

ಮೈ ಕೊಳೆಯ  ದಿನವೂ ತೊಳೆಯೋ  ನಾವುಗಳು
ಮನಸು ಕೊಳೆಗೆ ಸಿಲುಕಿ ರಾಡಿಯಾಗಿದೆ
ತಪ್ಪೆಂದು ಗೊತ್ತಿದ್ದೂ ಮಾಡೋ ತಪ್ಪುಗಳು
ಮೌಲ್ಯವಿಲ್ಲದ  ಉಪದೇಶದಂತೆ ....
 
 
.......ಮಾಲಿನಿ ಭಟ್....................

ಮನಸ ಇಚ್ಚೆ ದಾಟಿ ಬಂದು
ದೀನನಾಗಿ ಕುಳಿತು ಇಂದು
ಲೋಕದೆಡೆಗೆ ನೋಡೋ ನಯನ
ತಪ್ಪಿನರಿಕೆ ಕಂಡಿತೆ ನಿನ್ನಾತ್ಮಕೆ 
 
..........ಮಾಲಿನಿ ಭಟ್...........