ಮಧುರ ಭಾವ
Wednesday, 6 June 2012
ಮನಸ ತೋಟದಲಿ
ಇದು ಎಂಥ ಅನುಬಂಧವೋ
ಭಾವನೆಯ ತೆರೆಯ ಮನದಿ
ಕನಸಿನ ಸುಪ್ತ ಬೀಜದಿ
ನನ್ನ ದೇಹ , ನನ್ನ ಜೀವ
ನಿನ್ನ ಅಡಿಯಲಿ .....
......ಮಾಲಿನಿ ಭಟ್...................
ಇನಿಯ
ಕಣ್ಣ ಬಳಿಯಲಿ ಸುಳಿಯುವೆ
ತಂಪ ಗಾಳಿ ಸೋಕೊ ರೀತಿ
ಮನದ ಇಂಚು ಜಾಗದಲ್ಲೂ
ನಿನ್ನದೇ ಚಿಲಿಪಿಲಿ
ಹಲವು ರಂಗು ಮನಕೆ
ನಿನ್ನ ಒಂದು ನೋಟಕೆ
ಮಿಟುತಿಹುವುದು ಹೃದಯವು
ನಿನ್ನ ನೆನಪ ಚಕ್ರದಲಿ
ಯಾರು ಅರಿಯದಂತೆ ನೀಡಿದೆ
ಕನಸ ಗರಿಯ ಹೊಳಪನು ...
....ಮಾಲಿನಿ ಭಟ್..............
ಪರಿಸರ ದಿನ
ನಮ್ಮಯ ಸುತ್ತಲು ಕವಿದಿರೋ ಕಾಣದ ಮುಸುಕಿನಲಿ
ಪದರಿನ ಲೇಪದಿ ಮರೆಸಿರೋ ತಿಳಿಯದೆ ಅಂಧತೆಯಲಿ
ನಮ್ಮಯ ಸಲಹುವ ಮರಗಳ ಅಳಿವಿನಲಿ
ಶಕ್ತಿಯ ನೀಡೋ ಜಲದ ಕಲ್ಮಶದಲಿ
ನಶೆಯ ಲೋಕದಲಿ ,
ಸುಂದರ ಪರಿಸರವ ಸಾಯಿಸುವ
ಎಲ್ಲರೂ ಸೇರಿ ... ಮನವನು ಮೆಚ್ಚಿ
ಭವ್ಯತೆ ಮಂದಿರ ಕಟ್ಟೋಣ
ಉಸಿರನು ಹಂಚೋ ಜೀವಕೆ ನಾವು
ಪ್ರೀತಿಯ ಒಪ್ಪಿಗೆ ನಿಡೋಣ..
ಮಾಲಿನಿ ಭಟ್...............
Friday, 1 June 2012
ಭಾರತ ದೇಶ
ಭಾರತದಲಿ ಉದಯಿಸಿದ ನಾವು
ಹಲವು ಭಾಷೆಯ ಸಮ್ಮಿಶ್ರದಲಿ
ಧರ್ಮ ಸತ್ವದ ಸಂಸ್ಕಾರದಲಿ
ಕೊಳಲು ನಾದ ಸ್ವರ ಸಲ್ಲಾಪದಲಿ
ಚರಣ ಕಾಂತಿಯ ಶುಭ್ರತೆಯಲಿ
ಭವ್ಯತೆಯ ಶಿಖರದಲಿ
ಅತ್ತ ಹಿಮಾಲಯ ತುದಿಯಲಿ
ಬಳುಕುತ ಸಾಗಿವೆ ಶ್ರೇಣಿಗಳು
ಸಾಧನೆ ಶಕ್ತಿಯ ಎತ್ತರಿಸಿ
ದೇವತೆಯಂತ ನದಿಗಳು ಹರಿದಿವೆ
ಸಾವಿರ ಸಾವಿರ ದೂರವ ಕ್ರಮಿಸಿ
ಮಣ್ಣನು ತಿದ್ದಿವೆ ಸುಂದರ ಫಲಕೆ
ಮಧ್ಯದಿ ಸಮತಲ
ತ್ರಿಕೋನ ಮೆರೆದಿದೆ
ಅಂಚುಗಳಲಿ ಅರಳಿವೆ
ಸಾಗರ ತೀರ, ತೆಂಗು - ಕಂಗಳ
ನೆಲೆಬೀಡಾಗಿ ,. ಜನರನು ಹರಿಸಿದೆ ಬಾ ಎಂದು
ಜನ್ಮವು ಇರುವುದು ಮಗದೊಂದು
ಹುಟ್ಟಿ ಬರುವೆನು ನಾ ಭಾರತದಲಿ ...
............ಮಾಲಿನಿ ಭಟ್ .......................
ಮೋಹದ ಅಲೆ
ಮನಸಲಿ ಸುಳಿದ ಮಾತಿನ ಪಲ್ಲವಿಗೆ
ಮಿಡಿಯಿತು ಹೃದಯದ ಕನ್ನಡಿಯು
ಸುತ್ತಲು ತಿರುಗುವ ಭೂಮಿಯಲ್ಲಿ
ಸಾಗರದಲೆಯ ಸುಳಿಯಲ್ಲಿ
ಮೋಹನ ತೆರೆಯ
ನಾಟ್ಯದಲ್ಲಿ
ಸಿಲುಕಿದ ನಿನ್ನನು ಕಂಡೇನು
ಕರಗಿದೆ ನಿನ್ನಯ ಮಾಯದ ಬೆರಗಿಗೆ
ನಿನ್ನಲಿ ನಾನು ಸೇರಿರಲು
ಅರಿವಿನ ಬಲವು ಕದವನು ತೆರೆಯಲು
ಸೋಲಿನ ಗೆರೆಯ ಮುಟ್ಟಿರಲು
ಬಿಡಿಸಲು ಆಗದೆ ನಲುಗಿರಲು
ಉಸಿರಿನ ಕೊನೆಯೂ ಕಾದಿರಲು
ಮಿಂಚಿತು ಕಿರಣವು ದೂರದಲಿ .
..................ಮಾಲಿನಿ ಭಟ್ ..........
ನಿರೀಕ್ಷೆ
ನರಗಳು ಸ್ಪಷ್ಟವಾಗಿ ಕಾಣೋ ಆ ಕೈಗಳು
ಮೂಕವೇದನೆಯಲಿ ಸೊರಗಿದ ತನುವಿನಲಿ
ಪ್ರತಿನಿತ್ಯ ದೇವರ ಪ್ರಾರ್ಥನೆಯಲಿ
ಒಂದೇ ಸಮ ಸಲ್ಲಿಸುವ ವಿನಂತಿಯಲಿ
ಹೊಸ ಬೆಳಗು ಮೂಡಿ ಬರಲಿ ನಿರೀಕ್ಷೆಯಲಿ ..
........ಮಾಲಿನಿ ಭಟ್......................
ಕಣ್ಣ ತುದಿಯ ಅಂಚಿನಲಿ , ಹೊಳೆ ಹೊಳೆಯುತ ಬೆಳಗಿದೆ
ನನ್ನ ಹೃದಯವೆಂಬ ದೇಗುಲವ, ಅಲೆಯ ಅಗಲದಿ ತುಳುಕಿಸಿದೆ
ಚಿಗುರಾಗಿ ನಲುಗಿದ ಕುಡಿಯ ಮನಸಿನಾರಾಧನೆಗೆ
ಹೊಸ ದಿಗಂತದ ಸೂರ್ಯ ಕಿರಣ ಹರಿದು ಬರಲಿ ...
............ಮಾಲಿನಿ ಭಟ್.................
Newer Posts
Older Posts
Home
Subscribe to:
Posts (Atom)