ಮಧುರ ಭಾವ
Friday, 26 April 2013
ಸ್ವಯಂ ಪ್ರತಿಷ್ಠೆ ...
ನನ್ನ ಬಗ್ಗೆ ನಾ ಏನನ್ನು ಹೇಳಲಾರೆ
ನಾ ನೂರು ಕಣ್ಣು ಕಾಣಲಾರೆ
ಹುಡುಕುವರು ತಪ್ಪ ಸತ್ಯದಲಿ
ನಿಜವು ಅವರ ಮನಸಿಂದ ಅರಿಯಲಿ.
........... ಮಾಲಿನಿ ಭಟ್ .................
ಯಾರು ನೀ ದೂರದಿ ನಿಂತಿರುವೆ
ಅರಿತು ನೀ ಮನಸಿಗೆ ಹೊಂದಿರುವೆ
ದುಗುಡವೆಲ್ಲ ನಿನ್ನಲಿ ಅರುಹಿರುವೆ
ಕೇಳಿಯು ನೀ ಮರೆತು ಹೊರಟಿರುವೆ
..... ಮಾಲಿನಿ ಭಟ್ ............
ಪುಸ್ತಕವ ತಿರುವಿದಾಗಲೆಲ್ಲ
ಅಮ್ಮ ಕಟ್ಟಿದ ಕನಸು ಕಂಡಿತು
ಓದುತ್ತ ಓದುತ್ತ ಸಾರ್ಥಕ
ಅಮ್ಮ ಕಟ್ಟಿದ ಕನಸು.
.... ಮಾಲಿನಿ ಭಟ್ ......
ಕಸದ ಜೀವನ
ನೀರಲಿ ತೇಲೋ ಕಸವು
ಚೇತನವಾದರೆ ಎಷ್ಟು ಚೆಂದ
...
ಚಹರೆಯ ತಿರುಚಿ, ಅಂದದ ರೂಪವ ನೀಡಲು
ದೀಪ್ತಿಯ ಕಾಂತಿಯಲಿ ಮಧುರ ಕ್ಷಣವು
ತಮವನು ಅಳಿಸಿ, ಜ್ಯೋತಿಯ ತೋರಲು
ವಿಸ್ತರ ದೇಹದ ಸುಪ್ತತೆಯರಿಯಲು
ಜ್ನಾನದ ಅಭಿಷೇಕ ಮಾಡಲು
ಪ್ರತಿಭೆಯ ಹೊಮ್ಮುವ ರೀತಿಯ ನೋಡಲು
ನೆಪ ಮಾತ್ರಕೆ ಮಾಡದೆ ಉಳಿಯಲು
ಉನ್ನತ ಸಾಧನೆ , ಸಾಧ್ಯತೆ ಹೆಚ್ಚಲು
ನೀರಲಿ ತೇಲೋ ಕಸವು
ವಿಶಿಷ್ಟ ಜೀವನ ನಡೆಸಲು
ಎಷ್ಟು ಚೆಂದವು ಅದ ಸವಿಯಲು.
Malini Bhat..
Newer Posts
Older Posts
Home
Subscribe to:
Posts (Atom)