ಮಧುರ ಭಾವ
Thursday, 17 January 2013
ವಿಶ್ವಾಸವಿಲ್ಲದವರು ಅಂಜುವರು
ಆತ್ಮವಿಶ್ವಾಸವಿದ್ದವರು ಗೆಲ್ಲುವರು
ಎಲ್ಲರಲಿ ಅವಿತಿರುವ ಬೆಳಕಿಗೆ
ಜ್ಞಾನದ ಸಾಕ್ಷಾತ್ಕಾರ ನಿಡೋಣ
.......ಮಾಲಿನಿ ಭಟ್.....
Tuesday, 15 January 2013
ಅತ್ಯಾಚಾರದ ಸುಳಿ
ಇದೇನಿದು ಮೂಕವೇದನೆ
ಇದೇನಿದು ಭಾವಸೂಚನೆ
ಕಣ್ಣಿನ ಹೊಳಪೆಲ್ಲಾ ಸವೆದಿದೆ
ಮುದ್ದು ಮುಖವು ಕಮರಿದೆ
ಯಾರಿಲ್ಲಿ ಸ್ಪಂದಿಸುವರು ನೋವಿಗೆ.||
ಉಸಿರಾದ ಬದುಕೀಗ ಬಳಲಿದೆ
ಕನಸೆಲ್ಲಾ ಜೊತೆಗೂಡಿ ಕರಗಿದೆ
ಬೆಳಕು ಹಚ್ಚೊಮೊದಲು ದೀಪ ಆರಿದೆ
ನೋವೆಲ್ಲಾ ಒಂದಾಗಿ ಮುತ್ತಿದೆ.
ಯಾರಿಲ್ಲಿ ಸ್ಪಂದಿಸುವರು ನೋವಿಗೆ.||
ಹಸಿಯಾದ ದೇಹ ಸೆಳೆದಿದೆ
ಕಾಮುಕರು ಒಂದೆಡೆ ನಿಂತರು
ಪೈಶಾಚಿಕ ಕೃತ್ಯ ಎಸೆದರು
ಖಡ್ಗವಾಗಿ ಒಬ್ಬೊಬ್ಬರು ತಿವಿದರು
ಯಾರಿಲ್ಲಿ ಸ್ಪಂದಿಸುವರು ನೋವಿಗೆ.||
ಹೆಣ್ಣಾದ ತಪ್ಪಿಗೆ ಶಿಕ್ಶೆಯೇ
ಕಾಮದ ತೃಷೆಯೇ ತೀರದೇ
ಪ್ರಾಣಿಗಿಂತ ಕೀಳಾದನೇ ಮಾನವ
ಪುಟ ಪುಟದಿ ಅಚ್ಚಾಗಿದೆ ಈ ದುರಂತ
ಯಾರಿಲ್ಲಿ ಸ್ಪಂದಿಸುವರು ನೋವಿಗೆ.||
ಸಾವಿನ ಬಾಗಿಲು ತೆರೆದಿತ್ತು
ಬದುಕುವ ಆಸೆಯು ಜೀವಂತ
ಮಾನ ಕಳೆದು ದೇಹ ತಿಂದ ಮಂದಿಗೆ
ಶಿಕ್ಶೆಯಿಂದ ಮುಕ್ತಿಯೇ
ಯಾರಿಲ್ಲಿ ಸ್ಪಂದಿಸುವರು ನೋವಿಗೆ.||
................MALINI BHAT...............................
ಬಚ್ಚಿಟ್ಟ ಪ್ರೀತಿ
ಅವಿತವಿತು ಕುಳಿತ ನಿನ್ನ ನೋಡಿ
ನನ್ನ ಮನಸ್ಯಾಕೋ ಸೆಳೆದಯ್ತೆ ನಿನ್ನ ಬಳಿಗೆ||
ಬರುವಾಗ ಬಂದಂತ ವಯ್ಯಾರ ನೋಡಿ
ತನುವೆಲ್ಲ ಮೆಲ್ಲಗೆ ನಲುಗೈತೆ ||
ಹೂವಂತ ಮೃದುಲ ನಿನ್ನೊಡಲ ಅರಿತು
ಹೃದಯವೇ ಬೇಡಿತು ತನಗಾಗಿ ಎಂದು ||
ಹೇಗ್ ಹೇಗೆ ಕಾಡುವೆಯೋ ನೀನಿಂದು
ಸ್ಪರ್ಶಕೆ ನಲುಗುವೆನೆಂಬ ಭಯವು ||
ಎಲ್ಲಿಂದಲೋ ಬಂದ ನೀನಿಂದು
ಮನೆ ಮಾಡಿ ಕುಳಿತಿರುವೆ ಮನಸಲಿಂದು ||
ಉಳಿದಿರುವೆ ನೀನು ನನ್ನೊಡಲ ಮಡಿಲಲ್ಲಿ
ಹಾಯಾಗಿ ಮಲಗಿರು ಮಗುವಂತೆ. ||
………. ಮಾಲಿನಿ ಭಟ್…………………..
ಬಳ್ಳಿಯಂತೆ ಸುತ್ತಿದ ಪ್ರೀತಿ
ಮರವಾಗಿ ಬೆಳೆಯಬಾರದೆ
ಸಂತೋಷದ ಹಣ್ಣುಗಳನ್ನೀಯಬಾರದೆ
ಅದುವೇ ನಮ್ಮ ಭಾಗ್ಯವಲ್ಲವೇ ...
....ಮಾಲಿನಿ ಭಟ್ .......
ಸದಾ ಉಳಿವ ನಿನ್ನ ನೆನಪು
ಮನಸಲಿ ತುಂಬಿರೋ ನಿನ್ನ ನೆನಪು
ಸದಾ ಉಳಿಯಲಿ ಬೆಳಕಾಗಿ
ಅಲೆಯ ಹೂವಾಗಿ ಚೆಲ್ಲಲಿ ಹೃದಯಾಂತರಾಳದಲ್ಲಿ
ಎಲ್ಲಿದ್ದರೂ , ಹೇಗಿದ್ದರೂ ಮನದಲ್ಲಿ ನೀನಿರುವೆ ..
.....ಮಾಲಿನಿ ಭಟ್ ...................
ಕಾಣದ ಕೈ , ದಿಕ್ಕು ಬದಲಿಸುವ ಪರಿಪಾಟ
ಉಸಿರಿನ ಕೀಲಿ , ಭದ್ರವಾಗಿ ಇಟ್ಟಿರುವ ಪರಿ
ಶ್ರೇಷ್ಠತೆಯಲಿ ಮೆರೆದಾಡೋ ಇವನು
ಕೊನೆಸಿಗದ ರಹಸ್ಯಕೆ ಸೋಲುವನು ...
....... ಮಾಲಿನಿ ಭಟ್...........
Newer Posts
Older Posts
Home
Subscribe to:
Posts (Atom)