ಮಧುರ ಭಾವ
Thursday, 13 December 2012
ನನ್ನ ಉಸಿರ ಒಂದು ನೆನಪು ನಿನ್ನಲಿಲ್ಲವೇ
ಕಾಡಿಬೇಡಿ ಚಿಗುರಫಲಿತ ಪ್ರೀತಿಯಿಲ್ಲವೇ
ಹಸುರ ಕಂಡು ಮರುಗೋ ಮನಸು ಇಲ್ಲವೋ
ಎಲ್ಲ ಹರಿವ ನೀರ ಹಾಗೆ ತೇಲಿ ಹೋಯಿತೇ ..
.....ಮಾಲಿನಿ ಭಟ್..........
ನೀ ಕಂಡ ದಿನವೇ ಹಸನಾಗಿದೆ
ಎದೆಯೆಲ್ಲ ಸಡಿಲಾಗಿದೆ
ಕನಸೆಲ್ಲ ಕೈ ಗೂಡಿದೆ
ಹೃದಯವೇ ಮಾತಾಡಿದೆ
ಜೊತೆಗಿರು ಜೀವವೇ
ಉಸಿರಿರೋವರೆಗೂ .....
......ಮಾಲಿನಿ ಭಟ್.........
ಅನಂತ ಅಂತರದಲಿ
ದೀಪದ ತುಣುಕೊಂದು
ಅಕ್ಷರಶಃ ಮೌನವಾಗಿದ್ದು
ನಿನ್ನಂತರಂಗವ ನೋಡಿದ ಮೇಲೆ
....ಮಾಲಿನಿ ಭಟ್....
Newer Posts
Older Posts
Home
Subscribe to:
Posts (Atom)