ಮಧುರ ಭಾವ
Wednesday, 5 September 2012
ಈ ಸಂಜೆ ಬಾನಲ್ಲಿ ಮೋಡವು ಸೆರಗನ್ನು ಚಾಚಿತ್ತು
ನೀರನು ತುಂಬಿದ ಮೋಡವು ಸೆರಗನ್ನು ಚಾಚಿತ್ತು
ಮರೆಯಾದ ರವಿಯು ಮೋಡಕ್ಕೆ ಹೆದರಿ
ಅವಿತು ಹೋದನು ಸಾಗರದ ತಳದಲಿ
ಕೈ ಚಾಚುತಿರುವೇನು ಗಗನಕೆ
ಮುಳುಗುವ ಜೀವನದ ಭಿಕ್ಷೆಗೆ
ಭೂಮಿ , ನೀರು , ಎಲ್ಲ ಮಲಿನಗೊಂಡಿದೆ
ನಿನ್ನಲ್ಲಿ ಆಶ್ರಯ ಬೇಡಿ ಬಂದಿಹೆನು ...
...ಮಾಲಿನಿ ಭಟ್......
ಬೀಜ ಮೊಳೆತಿದೆ,
ಚಿಗುರು ಬೆಳಕ ಕಂಡಿದೆ
ಮಣ್ಣ ಒಡೆದು ಮೆಲ್ಲ ಬಂದಿದೆ ,
ಜಗವ ನೋಡೋ ಕಾತರದಿ ....
ಗುರುದೇವ
ಮಗುವಿನ ಮುಗ್ಧತೆ ಮಂಟಪದಲ್ಲಿ,
ಅಕ್ಷರ ಜ್ಞಾನದ ಬೆಳಕನು ತುಂಬಿಸಿ ,
ಪ್ರತಿಭೆಯ ಹುಡುಕಿ ದೇಶಕೆ ನೀಡುವ ,
ರಾಷ್ಟ್ರದ ಏಳ್ಗೆಗೆ ಕಾರಣ ನೀನು ..
ನಮ್ಮಯ ಪ್ರೀತಿಯ ಗುರುಗಳು ನೀವು ...
ಕಣ್ಣು ಹೇಳುವ ನೂರು ಮಾತು
ನಿನ್ನ ಅಂತರಂಗ ತಲುಪಿಯೂ
ಮೌನದ ಸಂದೇಶ ನೀಡಿದೆ
ನಾ ಅರಿಯುದಾದರು ಏನನ್ನು ..
....ಮಾಲಿನಿ ಭಟ್..........
ಬೆರಳುಗಳ ಸಂದಿಯಲಿ ಗೋಚರಿಸಿದ
ಕಿರಿದಾದ ಹೊಸ ಪ್ರಪಂಚ
ಜೀವನವು ಸೋರಿ ಹೋಗೋ ಸಂಬಂಧವು
ಇರುವುದರಲ್ಲಿಯೇ ಹೊಸತನ ಹುಡುಕಬೇಕು ..
.........ಮಾಲಿನಿ ಭಟ್ ......
Newer Posts
Older Posts
Home
Subscribe to:
Posts (Atom)