Tuesday 24 April 2012

ಸರಿದಾಡದ ನೋವ ಜಾಲ

 
 
ಬಾಲ್ಯ ಜೊತೆಯಲಿ  ಕಾಲದ ಮಿಲನದಿ
ಸರಿದು ಹೋಗಿದೆ , ಕನಸ ಕಲ್ಪನೆ
 
ಒಡೆದ ಹೃದಯ ಕನ್ನಡಿ , ಹೆಣೆದಿದೆ
ಜಾಲದ ಬಲೆಯನು ಮನಸ ಗೂಡಲಿ
 
ಕಣ್ಣ ರೆಪ್ಪೆ ಮುಚ್ಚಿ ಕಣ್ಣೀರು ಅವಿತಿದೆ
ಜಗದ ಕಟೋರ  ನಿಲುವಿಗೆ
 
ಅವಿತ ಕಣ್ಣೀರು ನೋವ ಕಥೆಯ ಸಾರಿ ಹೇಳಿದೆ
ನವ್ಯ ಬೆಳಕ ತೋರಿಸೋ ಕೈಗಳು ಇಲ್ಲವಾಗಿದೆ ..
 
 
 
           ...........ಮಾಲಿನಿ ಭಟ್..................
 
 

2 comments:

  1. ಸೊಗಸಾದ ಸಾಲುಗಳು :) ಅರ್ಥಪೂರ್ಣ ಕವಿತೆ

    ReplyDelete